ಹಂದಿಗುಂದ: ಸಮೀಪದ ಪಾಲಬಾವಿ ಗ್ರಾಮದಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ತೆರೆಯಲು ನೀಡಿರುವ ಪರವಾನಗಿ ರದ್ದುಪಡಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಬುಧವಾರ ಗ್ರಾಪಂ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಧರಣಿ ಕೈಗೊಂಡಿದ್ದು, ಗುರುವಾರವೂ ಮುಂದುವರಿದಿದೆ.
ಪ್ರತಿಭಟನಾ ಸ್ಥಳಕ್ಕೆ ಬುಧವಾರ ರಾಯಬಾಗ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅರುಣ ಮಾಚಕನೂರ, ಹಾರೂಗೇರಿ ಠಾಣಾಧಿಕಾರಿ ಮಾಳಪ್ಪ ಪೂಜಾರಿ, ಪಿಡಿಒ ಶ್ರೀಕಾಂತ ಪಾಟೀಲ ಭೇಟಿ ನೀಡಿ ಮನವೊಲಿಸಲು ಪ್ರಯತ್ನಿಸಿದಾದರೂ ಪ್ರತಿಭಟನಾಕಾರರು ಪ್ರತಿಭಟನೆ ಕೈ ಬಿಟ್ಟಿಲ್ಲ.
ಗುರುವಾರ ರಾಯಬಾಗ ತಹಸೀಲ್ದಾರ್ ಸುರೇಶ ಮುಂಜೆ ಭೇಟಿ ನೀಡಿ, ಗ್ರಾಮ ಪಂಚಾಯಿತಿ ವಿಶೇಷ ಸಭೆ ಕರೆದು ಗ್ರಾಮಕ್ಕೆ ಬಾರ್ ಆ್ಯಂಡ್ ರೆಸ್ಟೋರೆಂಟ್ ಅನುಮತಿ ರದ್ದತಿ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕೂಡಲೆ ಧರಣಿ ಕೈಬಿಡುವಂತೆ ಮನವಿ ಮಾಡಿದರು ಸಹ ಕೈ ಬಿಟ್ಟಿಲ್ಲ. ಧರಣಿ ನಿರತರು ಬಾರ್ ಆ್ಯಂಡ್ ರೆಸ್ಟೋರೆಂಟ್ ರದ್ದು ಪಡಿಸುವಂತೆ ತಹಸೀಲ್ದಾರ್ ಸುರೇಶ ಮುಂಜೆಗೆ ಮನವಿ ಸಲ್ಲಿಸಿದರು.
ಪಿಡಿಒ ಶ್ರೀಕಾಂತ ಪಾಟೀಲ, ಗ್ರಾಮ ಲೆಕ್ಕಿಗ ಎಸ್.ಎಸ್.ಹತ್ತರಕಿ, ಕಾರ್ಯದರ್ಶಿ ರಮೇಶ ಪಾಟೀಲ, ಪರಪ್ಪ ಮರಡಿ, ರಾಘವೇಂದ್ರ ಶಿಂಪಿ, ಹುಲಿಯಪ್ಪ ತೇಗೂರು, ವಿನಯ ಬಿದರಮಳಿ, ಸಿರಿಯಾಳ ಮಾದರ, ಬರಮಪ್ಪ ನಿಂಗನೂರ, ಪ್ರಭು ಕುರಬೇಟ, ಭರಮಪ್ಪ ಮಾನಶೆಟ್ಟಿ, ಚನ್ನಪ್ಪ ಬಳೆಗಾರ, ಬರಮಪ್ಪ ಜೋಗಿ, ಶ್ರೀಶೈಲ ಗೋಡಿ, ಷಣ್ಮುಖ ಕಾಡಶೆಟ್ಟಿ, ಅಸ್ಲಾಂ ಬಿರಾದಾರ್, ಶ್ರೀಶೈಲ ನಿಂಗನೂರ, ದುಂಡಪ್ಪ ತೇಗೂರ, ಬಸವರಾಜ ತೇಗೂರ, ಸಚಿನ ಮರಡಿ, ಸಂಗಪ್ಪ ಕುದರಿ, ಮಹಾದೇವ ಗೊಲಬಾವಿ ಇತರರಿದ್ದರು.