Thursday, 15th November 2018  

Vijayavani

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಶಾಸಕರ ಲಾಬಿ - ತುಕಾರಾಂ ಸೇರಿದಂತೆ ಐವರ ಪೈಪೋಟಿ        RSS ಬೈಠಕ್​​ನಲ್ಲಿ ರಾಮಮಂದಿರ ಪ್ರತಿಧ್ವನಿ-ಶಬರಿಮಲೆ ಹೋರಾಟದಿಂದ ಹಿಂದೆ ಸರಿಯಲ್ಲ-ಷಾ ಸಮ್ಮುಖದಲ್ಲಿ ನಿರ್ಧಾರ        KRS ಬಳಿ 125 ಅಡಿ ಎತ್ತರದ ಕಾವೇರಿ ಮಾತೆ ಸ್ಟ್ಯಾಚ್ಯೂ ನಿರ್ಧಾರ-ಡಿಕೆಶಿ ನೇತೃತ್ವದ ಸಮಿತಿಯ ತೀರ್ಮಾನ        ರವಿ ಕೊಲೆ ಹಿಂದೆ ಸೈಲೆಂಟ್ ಸುನಿಲನ ನೆರಳು - ತುಮಕೂರು ಡಾಬಾದಲ್ಲೇ ನಡೆದಿತ್ತು ಹಂತಕ ಮೀಟಿಂಗ್        ತಮಿಳುನಾಡಿನಲ್ಲಿ ಗಜ ಆರ್ಭಟ-ಸಮುದ್ರದಲ್ಲಿ ಅಲೆಗಳ ಅಬ್ಬರ-ಬೆಂಗಳೂರಿನ ಹಲವೆಡೆ ಮಳೆ ಸಾಧ್ಯತೆ        ದೀಪ್​-ವೀರ್​​ ಕಲ್ಯಾಣೋತ್ಸವ-ನಿನ್ನೆ ಕೊಂಕಣಿ, ಇಂದು ಸಿಂಧಿ ಸ್ಟೈಲ್​ ಕಲ್ಯಾಣ-ಇಟಲಿಯಲ್ಲಿ ಅದ್ದೂರಿ ವಿವಾಹ       
Breaking News

ಹೆಲ್ಮೆಟ್ ಹಾಕಿದ್ರಷ್ಟೇ ಸ್ಟಾರ್ಟಾಗುತ್ತೆ ಬೈಕ್!

Saturday, 07.07.2018, 3:05 AM       No Comments

|ಮಹೇಶ್ ಡಿ.ಎಂ.

ದಾವಣಗೆರೆ: ಹೆಲ್ಮೆಟ್ ಇಲ್ದೆ ನೀವು ಬೈಕ್ ಏರಂಗಿಲ್ಲ. ಹಾಗೊಮ್ಮೆ ಹತ್ತಿದ್ರೆ ಗಾಡೀನೇ ಸ್ಟಾರ್ಟ್ ಆಗಲ್ಲ. ಮದ್ಯಪ್ರಿಯರೇನಾದರೂ ಕಂಠಪೂರ್ತಿ ಕುಡಿದು ಹೆಲ್ಮೆಟ್ ಹಾಕಿಕೊಂಡು ಬೈಕ್ ಏರಿದರೆ ಗಂಟೆ ಕಳೆದರೂ ನಿಂತ ಜಾಗದಿಂದ ಕದಲೋದಿಲ್ಲ! ಇದು ಸ್ಮಾರ್ಟ್ ಹೆಲ್ಮೆಟ್​ನ ಸ್ಮಾರ್ಟ್ ಅನುಕೂಲತೆಗಳು. ದಾವಣಗೆರೆ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಇನ್​ಸ್ಟ್ರುಮೆಂಟೇಷನ್ ಟೆಕ್ನಾಲಜಿ ವಿಭಾಗದ ವಿದ್ಯಾರ್ಥಿನಿಯರು ಈ ಹೆಲ್ಮೆಟ್​ನ ತಂತ್ರಜ್ಞರು.

ಪ್ರಾಣರಕ್ಷಕ: ಈ ಹೆಲ್ಮೆಟ್ ವಿಶೇಷತೆ ಇಷ್ಟಕ್ಕೇ ಮುಗಿಯೋದಿಲ್ಲ. ಹೆಲ್ಮೆಟ್ ಧರಿಸಿದ ಸವಾರ ಒಂದು ವೇಳೆ ಅಪಘಾತಕ್ಕೀಡಾದಲ್ಲಿ ತಕ್ಷಣವೇ ಎಸ್​ಎಂಎಸ್ (ಜಿಎಸ್​ಎಂ)ಮೂಲಕ ಆಸ್ಪತ್ರೆಗೆ ಹಾಗೂ ಸವಾರನ ಕುಟುಂಬ ಸದಸ್ಯರಿಗೆ ಸಂದೇಶ ರವಾನೆಯಾಗುತ್ತದೆ. ವಿದ್ಯಾರ್ಥಿನಿಯರಾದ ಪೂಜಾ ಆರ್. ಶರ್ವ, ಪಿ.ಪ್ರಿಯಾಂಕಾ, ಪಿ.ಜಿ.ಲತಾ, ಎಂ.ಜಿ.ನಿವೇದಿತಾ ತಂಡದ ಈ ಸಾಧನೆಗೆ ಪ್ರಾಧ್ಯಾಪಕಿ ಶ್ರೀದೇವಿ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದ್ದಾರೆ.

ಹೆಲ್ಮೆಟ್ ಹೈಲೈಟ್

ಹೆಲ್ಮೆಟ್ ಮತ್ತು ಬೈಕ್​ನಲ್ಲಿ ಎರಡು ಮಾಡ್ಯೂಲ್​ಗಳಿದ್ದು, ಮೂರು ಸೆನ್ಸರ್ ಅಳವಡಿಸಲಾಗಿದೆ. ಬೈಕ್ ಸವಾರ ಹೆಲ್ಮೆಟ್ ಧರಿಸಿದ್ದಲ್ಲಿ ಫೋರ್ಸ್ ಎಂಬ ಸೆನ್ಸರ್, ವಾಹನ ಚಲಾವಣೆಗೆ ಲೈಸೆನ್ಸ್ ನೀಡುತ್ತದೆ. ಎರಡೂ ಮಾಡ್ಯೂಲ್ ಸುಸ್ಥಿತಿಯಲ್ಲಿದ್ದರಷ್ಟೇ ಬೈಕ್ ಚಲಿಸುತ್ತದೆ. ಇಲ್ಲವಾದರೆ ಒಂದಡಿಯೂ ಕದಲುವುದಿಲ್ಲ. ಬೈಕ್ ಮತ್ತು ಹೆಲ್ಮೆಟ್ ನಡುವಿನ 100 ಮೀ.ಅಂತರಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುವ ವೈರ್​ಲೆಸ್ ಮಾದರಿಯ ಜಿಗ್​ಬೀ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ. ಆರ್ಡಿನೋ-ಯುಎನ್​ಒ ಮತ್ತು ರೆನೆಸಸ್ ಮೈಕ್ರೋ ಕಂಟ್ರೋಲರ್ ಮೂಲಕ ಇದು ನಿರ್ವಹಣೆಯಾಗುತ್ತದೆ. ‘ಎಂ.ಕ್ಯೂ-2’ ಎಂಬ ಹೆಸರಿನ ಮತ್ತೊಂದು ಸೆನ್ಸರ್, ಮದ್ಯದ ಕಂಟೆಂಟ್ ಅನ್ನು ಪತ್ತೆಹಚ್ಚುತ್ತದೆ. ಪಾನಮತ್ತ ಸವಾರ ಬೈಕ್ ಓಡಿಸದಂತೆ ಇದು ನಿರ್ಬಂಧಿಸುತ್ತದೆ! ಹೊಸ ವರ್ಷಾಚರಣೆ ಸಂದರ್ಭದಲ್ಲಿ ಪಾನಮತ್ತ ಯುವಕರು ಬೈಕ್ ಅಪಘಾತಗಳಲ್ಲಿ ಮರಣಕ್ಕೀಡಾಗುವುದನ್ನು ನಿಯಂತ್ರಿಸಲು ಇದರಿಂದ ಅನುಕೂಲವಾಗುತ್ತದೆ. ಬೈಕ್ ಇಂಜಿನ್​ಗೆ ಅಳವಡಿಸಲಾದ ಮತ್ತೊಂದು ಸೆನ್ಸರ್ ‘ಆಕ್ಸಿಲರೋ ಮೀಟರ್’, ಬೈಕ್ 30 ಡಿಗ್ರಿ ಅಳತೆಗಿಂತಲೂ ಕಡಿಮೆ ಬೆಂಡಾದರೆ ‘ಅಪಘಾತವಾಗಿದೆ‘ ಎಂಬ ಸಂದೇಶ, ಮೊದಲೇ ಅಳವಡಿಸಲಾದ ಸವಾರನ ಸಂಬಂಧಿಗಳ ಮೊಬೈಲ್​ಗೆ ಜಿಎಸ್​ಎಂ ಮೂಲಕ ರವಾನೆಯಾಗುತ್ತದೆ! ಆಸ್ಪತ್ರೆ ಅಥವಾ ಪೊಲೀಸ್ ಠಾಣೆ ನಂಬರ್ ಸಹ ಅಳವಡಿಸಿಕೊಳ್ಳಬಹುದಾಗಿದೆ. ತುರ್ತು ಸಂದರ್ಭದಲ್ಲಿ ಬೈಕ್ ಚಲಾಯಿಸಲು ಪರ್ಯಾಯ ಮಾರ್ಗವೊಂದಿದೆ.!! ‘ಈ ಹೆಲ್ಮೆಟ್ ತಯಾರಿಸಲು 10 ಸಾವಿರ ರೂ. ವೆಚ್ಚವಾಗಿದೆ. ಬೈಕ್ ತಯಾರಕ ಕಂಪನಿಗಳು ಇದರ ಪೇಟೆಂಟ್ ಪಡೆದಲ್ಲಿ ಹೆಲ್ಮೆಟ್ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಸಿಗಬಹುದು. ಬೈಕ್ ಕೊಂಡಲ್ಲಿ ಹೆಲ್ಮೆಟ್ ಕಡ್ಡಾಯ ನೀತಿಯನ್ನಾದರೂ ಜಾರಿ ಮಾಡಬಹುದು’ ಎನ್ನುತ್ತಾರೆ ಮಾರ್ಗದರ್ಶಿ ಪ್ರಾಧ್ಯಾಪಕಿ ಶ್ರೀದೇವಿ. ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ 20ನೇ ವಾರ್ಷಿಕೋತ್ಸವದ ಪ್ರಾಜೆಕ್ಟ್ ಪ್ರದರ್ಶನದಲ್ಲಿ ಭಾಗವಹಿಸಿದ್ದ 125 ಕಾಲೇಜುಗಳ ಮಾದರಿಗಳಲ್ಲಿ ಇದು ಗಮನ ಸೆಳೆದು ಪ್ರಥಮ ಬಹುಮಾನ ಪಡೆದಿದೆ. ವಿಟಿಯು ಕುಲಪತಿ ಕರಿಸಿದ್ದಪ್ಪ, 25 ಸಾವಿರ ನಗದು, ಪ್ರಶಂಸನಾ ಪತ್ರ ವಿತರಿಸಿದ್ದಾರೆ. ಇಂಥ ಹೆಲ್ಮೆಟ್ ಬೇಗನೆ ಮಾರುಕಟ್ಟೆಗೆ ಬರಲಿ ಎಂಬುದು ಜನರ ಆಶಯ.

Leave a Reply

Your email address will not be published. Required fields are marked *

Back To Top