20.3 C
Bangalore
Sunday, December 15, 2019

ಬಂಟ್ವಾಳದಲ್ಲಿ ಬೀದಿಗಿಳಿಯದ ಅಬ್ಬಕ್ಕ ಪಡೆ

Latest News

ಆರೋಗ್ಯದಲ್ಲಿ ಚೇತರಿಕೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಆಸ್ಪತ್ರೆಯಿಂದ ಬಿಡುಗಡೆ

ಬೆಂಗಳೂರು: ಅನಾರೋಗ್ಯ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಹಿಂದೆ ಆಸ್ಪತ್ರೆ ದಾಖಲಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇಂದು (ಭಾನುವಾರ) ಆಸ್ಪತ್ರೆಯಿಂದ ಬಿಡುಗೆಯಾಗಿ ಮನೆಗೆ ತೆರಳಲಿದ್ದಾರೆ.ಸ್ಟಂಟ್​ನಲ್ಲಿ...

ಜೆಡಿಎಸ್ ಜನ್ಮ ಜಾಲಾಟ, ವರಿಷ್ಠರಿಗೆ ಪೀಕಲಾಟ

ಬೆಂಗಳೂರು: ಸಾಲು ಸಾಲು ಸೋಲಿನಿಂದ ದಳಪತಿಗಳು ಕಂಗೆಟ್ಟಿದ್ದಾರೆ. ಲೋಕಸಭಾ ಚುನಾವಣೆ ಸೋಲಿ ನಿಂದ ಬೇಗುದಿ ಹೆಚ್ಚುತ್ತಿದ್ದು, ಮೈತ್ರಿ ಸರ್ಕಾರ ಪತನ, ಉಪಚುನಾವಣೆಯ ಹೀನಾಯ...

ಮೊದಲ ಟೆಸ್ಟ್​​ನಲ್ಲಿ ಆಸ್ಟ್ರೇಲಿಯಾಕ್ಕೆ ಬೃಹತ್ ಮುನ್ನಡೆ

ಪರ್ತ್: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮುನ್ನಡೆ ಕಂಡಿರುವ ಆತಿಥೇಯ ಆಸ್ಟ್ರೇಲಿಯಾ ತಂಡ ಅಹರ್ನಿಶಿ ಟೆಸ್ಟ್ ಪಂದ್ಯಗಳಲ್ಲಿನ ತನ್ನ...

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ ಹಾವು: ವಿಡಿಯೋ ಬಗ್ಗೆ ಬಿಸಿಸಿಐ ಹೇಳಿದ್ದೇನು?

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ...

ವಿದೇಶಿ ಮಹಿಳೆಯಿಂದ ಪಿಂಡಪ್ರದಾನ

ಹೊಸಪೇಟೆ (ಬಳ್ಳಾರಿ): ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬರು ತಾಯಿಯ ಆತ್ಮಕ್ಕೆ ಶಾಂತಿ, ಸದ್ಗತಿ ದೊರೆಯಲೆಂದು ಶನಿವಾರ ಹಂಪಿ ನದಿ ತೀರದಲ್ಲಿ ಪುರೋಹಿತರ ನೇತೃತ್ವದಲ್ಲಿ ಹಿಂದು ಧಾರ್ವಿುಕ ವಿಧಿವಿಧಾನಗಳಂತೆ...

ಸಂದೀಪ್ ಸಾಲ್ಯಾನ್ ಬಂಟ್ವಾಳ

ನೀಲಿ ಬಣ್ಣದ ಟೀ ಶರ್ಟ್, ಮಿಲಿಟರಿ ಪ್ಯಾಂಟ್ ತಲೆಗೊಂದು ಹ್ಯಾಟ್, ಕೈಯಲ್ಲೊಂದು ಲಾಠಿ…
ಖಡಕ್ ನಿಲುವಿನ ಮಹಿಳಾ ಪೊಲೀಸರನ್ನೊಳಗೊಂಡ ಈ ತಂಡದ ಹೆಸರು ರಾಣಿ ಅಬ್ಬಕ್ಕ ಪಡೆ. ಮೇ ತಿಂಗಳಲ್ಲಿ ಮಂಗಳೂರು ಕಮಿಷನರೆಟ್ ವ್ಯಾಪ್ತಿ, ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಬಂಟ್ವಾಳ ಹಾಗೂ ಉಡುಪಿಯಲ್ಲಿ ಕಾರ್ಯಾರಂಭಿಸಿತ್ತು. ಮಹಿಳೆಯರ ರಕ್ಷಣೆಯ ಉದ್ದೇಶವನ್ನಿಟ್ಟು ರಚನೆಗೊಂಡ ಈ ಪಡೆ ಮಂಗಳೂರು, ಉಡುಪಿಯಲ್ಲಿ ಕಾರ್ಯಾಚರಿಸುತ್ತಿದೆ. ಆದರೆ ಉದ್ಘಾಟನೆಯ ಬಳಿಕ 5 ತಿಂಗಳಿನಲ್ಲಿ ಬಂಟ್ವಾಳ ತಾಲೂಕು ಪರಿಸರದಲ್ಲಿ ಒಮ್ಮೆಯೂ ಕಾಣಿಸಿಕೊಂಡಿಲ್ಲ.

ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ಪುರುಷ ಪೊಲೀಸರಿಗೆ ದೂರು ನೀಡಲು ಬಹಳಷ್ಟು ಸಂತ್ರಸ್ತರು ಹಿಂದೇಟು ಹಾಕುತ್ತಾರೆ. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆಯನ್ನು ಮತ್ತಷ್ಟು ಖಾತ್ರಿ ಪಡಿಸುವ ನಿಟ್ಟಿನಲ್ಲಿ ಮಹಿಳಾ ಸಿಬ್ಬಂದಿಯನ್ನು ಹೊಂದಿದ್ದ ಅಬ್ಬಕ್ಕ ಪಡೆ ಆರಂಭಗೊಂಡಿತ್ತು. ಸಾರ್ವಜನಿಕ ಸ್ಥಳ, ಶಾಲೆ, ಕಾಲೇಜು, ಉದ್ಯಾನ, ರೈಲು ನಿಲ್ದಾಣ ಸಹಿತ ಮಹಿಳೆಯರು ಹೆಚ್ಚಿರುವ ಸ್ಥಳಗಳಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುವುದು, ಅಸಭ್ಯ ವರ್ತನೆ, ಚುಡಾವಣೆ, ಮಹಿಳಾ ದೌರ್ಜನ್ಯ, ನೈತಿಕ ಪೊಲೀಸ್‌ಗಿರಿ, ಸರಗಳ್ಳತನ ಮತ್ತಿತರ ಪ್ರಕರಣಗಳನ್ನು ಹತ್ತಿಕ್ಕುವುದು ಉದ್ದೇಶ.

ದ.ಕ. ಜಿಲ್ಲಾ ಎಸ್ಪಿ ಲಕ್ಷ್ಮೀ ಪ್ರಸಾದ್ ಬಂಟ್ವಾಳದಲ್ಲಿ ರಾಣಿ ಅಬ್ಬಕ್ಕ ಪಡೆಗೆ ಹಸಿರು ನಿಶಾನೆ ತೋರಿದ್ದರು. ಆದರೆ ಸ್ಥಾಪನೆ ಉದ್ದೇಶವನ್ನು ಈಡೇರಿಸುವ ನಿಟ್ಟಿನಲ್ಲಿ ಈ ಪೊಲೀಸ್ ತಂಡ ಇನ್ನೂ ಕಾರ್ಯರೂಪಕ್ಕೆ ಇಳಿದಿಲ್ಲ. ಈ ವಿಶೇಷ ಧಿರಿಸಿನ ಮಹಿಳಾ ಪೊಲೀಸರು ಮತ್ತೆ ಬಂಟ್ವಾಳ ತಾಲೂಕು ಪರಿಸರದಲ್ಲಿ ಕಾಣಿಸಿಕೊಂಡಿಲ್ಲ.
* ವಾಹನ ಬಂದಿಲ್ಲ: ರಾಣಿ ಅಬ್ಬಕ್ಕ ಪಡೆಯ ಸಿಬ್ಬಂದಿ ಗಸ್ತು ತಿರುಗಲು ಪಿಂಕ್ (ಗುಲಾಬಿ ಬಣ್ಣ) ವಾಹನವನ್ನು ಇಲಾಖೆ ನೀಡಿದೆ. ಆದರೆ ಆ ವಾಹನವೂ ಇನ್ನೂ ಬಂಟ್ವಾಳಕ್ಕೆ ಬಂದಿಲ್ಲ. ಉದ್ಘಾಟನೆ ಸಂದರ್ಭ ಈ ಹಿಂದೆಯೇ ಇದ್ದ ರಾಣಿ ಅಬ್ಬಕ್ಕ ಪಹರೆ ಪಡೆಯ ವಾಹನಕ್ಕೆ ಹಸಿರು ನಿಶಾನೆ ತೋರಲಾಗಿತ್ತು. ರಾಣಿ ಅಬ್ಬಕ್ಕ ಪಹರೆ ಪಡೆಯ (ರಾಣಿ ಅಬ್ಬಕ್ಕ ಪಡೆ ಅಲ್ಲ) ಜೀಪ್ ಈಗಲೂ ಗಸ್ತು ತಿರುಗುತ್ತಿದ್ದು, ಅದರಲ್ಲಿ ಪುರುಷ ಸಿಬ್ಬಂದಿ ಕರ್ತವ್ಯದಲ್ಲಿದ್ದಾರೆ.

ರಾಣಿ ಅಬ್ಬಕ್ಕ ಏಕೆ?: ವೀರರಾಣಿ ಉಳ್ಳಾಲದ ಅಬ್ಬಕ್ಕ ಪ್ರಥಮವಾಗಿ ಸ್ವಾತಂತ್ರೃ ಸಂಗ್ರಾಮಕ್ಕೆ ನಾಂದಿ ಹಾಡಿದ ತುಳುನಾಡಿನ ಧೀರ ಮಹಿಳೆ. ಪೋರ್ಚುಗೀಸರ ಸೇನೆಯನ್ನು ಸದೆ ಬಡಿದು ನಾಡನ್ನು ರಕ್ಷಿಸಿದಾಕೆ. ಬೆಳಗಾವಿಯಲ್ಲಿ ಮಹಿಳಾ ಪೊಲೀಸ್ ಪಡೆಗೆ ವೀರರಾಣಿ ಚೆನ್ನಮ್ಮರ ಹೆಸರು ಇಟ್ಟ ಮಾದರಿಯಲ್ಲೇ ಮಂಗಳೂರು, ಬಂಟ್ವಾಳ ಹಾಗೂ ಉಡುಪಿಯಲ್ಲಿ ಆರಂಭಿಸಲಾದ ವಿಶೇಷ ಮಹಿಳಾ ಪೊಲೀಸ್ ಪಡೆಗೆ ವೀರರಾಣಿ ಅಬ್ಬಕ್ಕನ ಹೆಸರು ಇಡಲಾಗಿದೆ. ಇದರಲ್ಲಿ ಪಿಎಸ್‌ಐ ಸಹಿತ ಮೂವರು ಮಹಿಳಾ ಸಿಬ್ಬಂದಿ ಹಾಗೂ ಓರ್ವ ಪುರುಷ ಸಿಬ್ಬಂದಿ ಇರುತ್ತಾರೆ.

ಮಂಗಳೂರಿನಲ್ಲಿ ಕಠಿಣ ಕ್ರಮ: ಮಂಗಳೂರಿನಲ್ಲಿ ಈ ಹಿಂದಿನ ಆಯುಕ್ತ ಸಂದೀಪ್ ಪಾಟೀಲ್ ರಾಣಿ ಅಬ್ಬಕ್ಕ ಪಡೆಗೆ ಚಾಲನೆ ನೀಡಿದ್ದರು. ನಗರದ ಲೇಡಿಗೋಶನ್ ಆಸ್ಪತ್ರೆ ಎದುರು, ಸ್ಟೇಟ್‌ಬ್ಯಾಂಕ್ ಪರಿಸರದಲ್ಲಿ ಸಾಯಂಕಾಲದ ವೇಳೆ ಮಹಿಳೆಯರಿಗೆ ಕಿರುಕುಳದ ದೂರುಗಳು ಕೇಳಿ ಬರುತ್ತಿದ್ದವು. ಅಬ್ಬಕ್ಕ ಪಡೆ ಅಸ್ತಿತ್ವಕ್ಕೆ ಬಂದ ಬಳಿಕ ಕಾರ್ಯಾಚರಣೆ ನಡೆಸಿದ ಪರಿಣಾಮ ಪ್ರಕರಣಗಳು ಕಡಿಮೆಯಾಗಿವೆ. ‘ಕಮಿಷನರೆಟ್ ವ್ಯಾಪ್ತಿಯಲ್ಲಿ ರಾಣಿ ಅಬ್ಬಕ್ಕ ಪಡೆ ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಮಹಿಳೆಯರಿಗೆ ಕಿರುಕುಳ, ಅಸಭ್ಯ ವರ್ತನೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಹರ್ಷ ಪಿ.ಎಸ್. ತಿಳಿಸಿದ್ದಾರೆ.

ಉಡುಪಿಯಲ್ಲಿ 10 ಮಂದಿ ರಕ್ಷಣೆ: ಉಡುಪಿ: ಉಡುಪಿ ಹಾಗೂ ಮಣಿಪಾಲ ಸುತ್ತಮುತ್ತಲಿನ ಪ್ರದೇಶದಲ್ಲಿ ಮಹಿಳಾ ಸುರಕ್ಷೆಗಾಗಿ ನಗರ ಮಹಿಳಾ ಠಾಣೆಗೆ ಏ.2ರಿಂದ ರಾಣಿ ಅಬ್ಬಕ್ಕ ಪಡೆ ಗಸ್ತುವಾಹನ ಸೇರ್ಪಡೆಗೊಳಿಸಲಾಗಿದ್ದು, ಈವರೆಗೆ 10ಕ್ಕೂ ಅಧಿಕ ಮಹಿಳೆಯರನ್ನು ರಕ್ಷಿಸಲಾಗಿದೆ. ಬೆಳಗ್ಗೆ ಮತ್ತು ಸಂಜೆ ಶಾಲಾ, ಕಾಲೇಜು ಆವರಣ, ಉದ್ಯಾನವನ, ಸಿಟಿ ಬಸ್‌ಸ್ಟಾೃಂಡ್, ಸರ್ವೀಸ್ ಬಸ್‌ಸ್ಟಾೃಂಡ್, ಮಣಿಪಾಲ ಬಸ್‌ಸ್ಟಾೃಂಡ್ ಮೊದಲಾದೆಡೆ ಗಸ್ತು ತಿರುಗುತ್ತಿದೆ. ಮಹಿಳೆಯರಿಗೆ, ಯುವತಿಯರಿಗೆ ಕಿರುಕುಳ, ಚುಡಾವಣೆ ಮುಂತಾದ ಘಟನೆ ಕಂಡುಬಂದರೆ, ದೂರುಗಳು ಬಂದರೆ ಗಸ್ತು ನಿರತ ಪೊಲೀಸ್ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.

ಬಂಟ್ವಾಳದಲ್ಲಿ ಮಹಿಳಾ ಪೊಲೀಸರು ಹಾಗೂ ಅಬ್ಬಕ್ಕ ಪಡೆಯವರು ಜಂಟಿಯಾಗಿ ಗಸ್ತು ನಡೆಸುತ್ತಾರೆ. ಸಾರ್ವಜನಿಕ ಪ್ರದೇಶಗಳಲ್ಲಿ ಮಹಿಳೆಯರನ್ನು ಚುಡಾಯಿಸುವವರ ಮೇಲೆ ನಿಗಾ ಇಡಲಾಗಿದೆ. ತೊಂದರೆಗೊಳಗಾದ ಮಹಿಳೆಯರಿಂದ ದೂರು ಬಂದಾಕ್ಷಣ ಪೊಲೀಸ್ ಪಡೆ ಕಾರ್ಯಾಚರಣೆ ನಡೆಸುತ್ತದೆ.
ಲಕ್ಷ್ಮೀ ಪ್ರಸಾದ್, ಪೊಲೀಸ್ ಅಧೀಕ್ಷಕ, ದಕ್ಷಿಣ ಕನ್ನಡ ಜಿಲ್ಲೆ

ರಾಣಿ ಅಬ್ಬಕ್ಕ ಪಡೆ ಕಾರ್ಯನಿರತವಾಗಿದೆ. ಮಹಿಳೆಯರಿಗೆ ತೊಂದರೆಯಾದಾಗ ಆ ಸ್ಥಳಕ್ಕೆ ಹೋಗಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ. ಸದ್ಯಕ್ಕೆ ಠಾಣೆಯಲ್ಲಿಯೇ ಈ ಪ್ರಕರಣಗಳನ್ನು ನೋಡಿಕೊಳ್ಳಲಾಗುತ್ತಿದೆ. ಸಿಬ್ಬಂದಿಗೆ ಸಮವಸ್ತ್ರ ಹಾಗೂ ಗಸ್ತು ತಿರುಗಲು ಜೀಪ್ ಬರಬೇಕಿದೆ.
ಸೈದುಲ್ ಅಡಾವತ್, ಎಎಸ್ಪಿ ಬಂಟ್ವಾಳ ಉಪವಿಭಾಗ

ಮಹಿಳೆಯರ ರಕ್ಷಣೆ ಉದ್ದೇಶವನ್ನಿಟ್ಟುಕೊಂಡು ಬಂಟ್ವಾಳದಲ್ಲೂ ರಾಣಿ ಅಬ್ಬಕ್ಕ ಪಡೆ ಆರಂಭಗೊಂಡಿರುವುದು ಉತ್ತಮ ವಿಚಾರ. ಮಹಿಳೆಯರು ತಮ್ಮ ನೋವು, ಸಂಕಟಗಳನ್ನು ಮಹಿಳಾ ಪೊಲೀಸ್ ಸಿಬ್ಬಂದಿಯಲ್ಲಿ ಹೇಳಿಕೊಳ್ಳಲು ಇದರಿಂದ ಸಾಧ್ಯವಿದೆ. ಆದಷ್ಟು ಬೇಗ ಈ ಪೊಲೀಸ್ ತಂಡ ಕಾರ್ಯರೂಪಕ್ಕೆ ಇಳಿಯಬೇಕು.
ಆಶಾಮಣಿ ರೈ, ವಕೀಲೆ, ಬಿ.ಸಿ.ರೋಡು

Stay connected

278,754FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...