ಸಿಎಂ ಕುಮಾರಸ್ವಾಮಿ ನೋಡಿ ರೈತರಿಗೆ ಸಾಲ ನೀಡಿಲ್ಲ, ಜಮೀನಿನ ಮೇಲೆ ಸಾಲ ನೀಡಿದ್ದೇವೆ ಎಂದ ಬ್ಯಾಂಕ್ ಸಿಬ್ಬಂದಿ

ಚಾಮರಾಜನಗರ: ಬ್ಯಾಂಕ್​ಗಳು ಸಾಲ ಮರುಪಾವತಿಗೆ ನೋಟಿಸ್ ನೀಡಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಸಿಎಂ ಸಾಲಮನ್ನಾ ಭರವಸೆ ನೀಡಿದ್ದಾರೆ ಎಂದು ಬ್ಯಾಂಕ್​ ಸಿಬ್ಬಂದಿಗೆ ರೈತರು ತಿಳಿಸಿದರೆ ಬ್ಯಾಂಕ್ ನವರು ಸಿಎಂ ಎಚ್​.ಡಿ.ಕುಮಾರಸ್ವಾಮಿ ನೋಡಿ ನಿಮಗೆ ಸಾಲ ಕೊಟ್ಟಿಲ್ಲ, ಜಮೀನಿನ ಮೇಲೆ ಸಾಲ‌ ಕೊಟ್ಟಿದ್ದೇವೆ ಎಂದು ಹೇಳಿರುವುದು ರೈತರನ್ನು ಕೆರಳಿಸಿದೆ.

ಒಂದೆಡೆ ಬರದ ಬೇಗೆಯಿಂದ ರೈತರು ಕಂಗಾಲಾಗಿದ್ದು, ಇದೀಗ ಬ್ಯಾಂಕ್​ ನೋಟಿಸ್​ಗೆ ರೈತರು ಹೆದರುವಂತಾಗಿದೆ. ಚಾಮರಾಜನಗರದಲ್ಲಿ ವಿಜಯ ಬ್ಯಾಂಕ್​ ರೈತರಿಗೆ ಕೋರ್ಟ್​​ ಮೂಲಕ ನೋಟಿಸ್ ನೀಡಿದ್ದು, ಕೋರ್ಟ್​ಗೆ ಹಾಜರಾಗುವಂತೆ ಇಪ್ಪತ್ತಕ್ಕೂ ಹೆಚ್ಚು ಮಂದಿ ರೈತರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಸಾಲ ಮರುಪಾವತಿ ಮಾಡುವಂತೆ ತಿಳಿಸಿದೆ.

ಇದಕ್ಕೆ ಸಂಬಂಧಿಸಿದಂತೆ ರೈತರು ಬ್ಯಾಂಕ್​ಗೆ ತೆರಳಿ ಸಾಲಮನ್ನಾ ಕುರಿತು ತಿಳಿಸಿದರೆ, ಬ್ಯಾಂಕ್​ ಸಿಬ್ಬಂದಿ ರೈತರಿಗೆ ಸಾಲ ಮರು ಪಾವತಿಸಿ, ಇಲ್ಲ ಎಂದರೆ ಕಾನೂನು ಕ್ರಮ ಎದುರಿಸಿ ಎಂದು ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ರೈತರು ತಮ್ಮ ಅಳಲು ತೋಡಿಕೊಂಡಿದ್ದು ಸಮಸ್ಯೆ ಬಗೆಹರಿಸದಿದ್ದರೆ ಆತ್ಮಹತ್ಯೆ ದಾರಿ ಹಿಡಿಯಬೇಕಾಗುತ್ತದೆ ಎಂದಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *