Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ವಂಚನೆ

Monday, 11.06.2018, 6:30 PM       No Comments

<< 17 ಸಾವಿರ ರೂ. ಕಳೆದುಕೊಂಡು ಆಶಾ ಕಾರ್ಯಕರ್ತೆಯರು ಕಂಗಾಲು >>

ಕೊಪ್ಪಳ: ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡು ಆಶಾ ಕಾರ್ಯಕರ್ತೆಯರಿಗೆ ನಂಬಿಸಿ, 17 ಸಾವಿರ ರೂ.ಲಪಟಾಯಿಸಿದ ಪ್ರಕರಣ ಸೋಮವಾರ ಬೆಳಕಿಗೆ ಬಂದಿದೆ.

ಜಿಲ್ಲೆಯಲ್ಲಿ 1030 ಆಶಾ ಕಾರ್ಯಕರ್ತೆಯರಿದ್ದು, ಕೊಪ್ಪಳ ನಗರದಲ್ಲಿ 330 ಕಾರ್ಯಕರ್ತೆಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎರಡು ತಿಂಗಳಿಂದ ಕಾರ್ಯಕರ್ತೆಯರ ಮೊಬೈಲ್‌ಗೆ ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಅನಾಮಧೇಯ ಕರೆ ಬರುತ್ತಿವೆ. ಅದರಂತೆ ಭಾನುವಾರ ದಾಕ್ಷಾಯಿಣಿ ಅವರ ಮೊಬೈಲ್‌ಗೆ 8910024166 ಸಂಖ್ಯೆಯಿಂದ ಕರೆ ಬಂದಿದ್ದು, ಫೋನ್‌ನಲ್ಲಿ ಮಾತನಾಡಿದ ವ್ಯಕ್ತಿ, ತಾನು ಬ್ಯಾಂಕ್‌ನಿಂದ ಮಾತನಾಡುತ್ತಿದ್ದು, ನಿಮ್ಮ ಎಟಿಎಂ ಲಾಕ್ ಆಗಿದೆ. ನಂಬರ್ ಕೊಡಿ ಎಂದಿದ್ದಾನೆ. ಇದನ್ನೇ ನಂಬಿ ದಾಕ್ಷಾಯಿಣಿ ಎಟಿಎಂ ನಂಬರ್ ಸೇರಿ ಅಗತ್ಯ ಮಾಹಿತಿ ನೀಡಿದ್ದು, ಕರೆ ಮಾಡಿದ್ದ ವ್ಯಕ್ತಿ ಖಾತೆಯಲ್ಲಿದ್ದ 15 ಸಾವಿರ ರೂ.ದೋಚಿದ್ದಾನೆ.

ಮತ್ತೊರ್ವ ಆಶಾ ಕಾರ್ಯಕರ್ತೆ ರೇಣುಕಾಗೆ ಇದೇ ನಂಬರ್‌ನಿಂದ ಸೋಮವಾರ ಕರೆ ಮಾಡಿ  2,400 ರೂ. ಲಪಟಾಯಿಸಿದ್ದಾರೆ. ರೇಣುಕಾ ಎಟಿಎಂಗೆ ತೆರಳಿ ಬ್ಯಾಲೆನ್ಸ್ ಚೆಕ್ ಮಾಡಿದಾಗ ಮೋಸ ಹೋಗಿರುವುದು ತಿಳಿದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿದ್ದಾರೆ.

ಸರ್ಕಾರಿ ಸಿಮ್‌ಗೆ ಕರೆ ಬಂದಿದ್ದರಿಂದ ನಾವು ನಂಬಿದೆವು. ಆದರೂ, ರಜೆ ದಿನವಾದ ಭಾನುವಾರ ಏಕೆ ಕರೆ ಮಾಡಿದ್ದೀರಿ ಎಂದರೂ, ಕೆಲಸದ ಒತ್ತಡ ಎಂದು ಸುಳ್ಳು ಹೇಳಿದರು. ಬಳಿಕ ಎಟಿಎಂ ಚೆಕ್ ಮಾಡಿದರೆ ಹಣ ಲಪಟಾಯಿಸಿರುವುದು ಗೊತ್ತಾಯಿತು. ನಾವು ಬಡ ಕಾರ್ಯಕರ್ತೆಯರಾಗಿದ್ದು, ತಿಂಗಳ ಸಂಬಳವನ್ನೇ ಕಳೆದುಕೊಳ್ಳುವಂತಾಗಿದೆ.
-ದಾಕ್ಷಾಯಿಣಿ, ರೇಣುಕಾ, ಮೋಸ ಹೋದ ಆಶಾ ಕಾರ್ಯಕರ್ತೆಯರು.

Leave a Reply

Your email address will not be published. Required fields are marked *

Back To Top