ಭ್ರಷ್ಟಾಚಾರ ಖಂಡಿಸಿ ಷೇರುದಾರ ರೈತರ ಧರಣಿ

blank

ಸಾಸ್ವೆಹಳ್ಳಿ: ಹೋಬಳಿಯ ಹೊಸಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ ವ್ಯವಾಹರ ಖಂಡಿಸಿ ಹೊಸಹಳ್ಳಿ, ಹುರಳೆಹಳ್ಳಿ, ಬಾಗವಾಡಿ ಗ್ರಾಮದ ಷೇರುದಾರ ರೈತರು ಬ್ಯಾಂಕ್‌ಗೆ ಬೀಗ ಜಡಿದು ಆರಂಭಿಸಿರುವ ಧರಣಿ ಮಂಗಳವಾರ ಐದನೇ ದಿನ ಪೂರೈಸಿದೆ.
ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬರದೆ ನಿರ್ಲಕ್ಷೃ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿ ರುವ ರೈತರು ಸಮಸ್ಯೆ ಪರಿಹರಿಸಲು ಮುಂದಾಗದಿದ್ದರೆ ಹೋರಾಟದ ಸ್ವರೂಪ ಬದಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಬ್ಯಾಂಕ್‌ನಲ್ಲಿ 32 ಲಕ್ಷ ರೂ.ಗೂ ಅಧಿಕ ಹಣ ದುರ್ಬಳಕೆಯಾಗಿದೆ. ಸಾಲ ಮನ್ನ್ನಾದ ಪ್ರಯೋಜನ ಸಿಕ್ಕಿಲ್ಲ. ವ್ಯಾಪ್ತಿ ಮೀರಿ ಮನಸೋ ಇಚ್ಛೆ ಸಾಲ ನೀಡಲಾಗಿದೆ. ಈ ಕುರಿತು ದಾವಣಗೆರೆ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಆರೋಪ ಸಾಬೀತಾಗಿದೆ ಎಂದು ರೈತ ಮುಖಂಡರು ದೂರಿದರು
ನ್ಯಾಯಾಲಯದ ಆದೇಶ ಹೊರಬಿದ್ದು ಎರಡು ತಿಂಗಳು ಕಳೆದರೂ ಹಳೆ ಹಾಗೂ ಹಾಲಿ ಕಾರ್ಯ ದರ್ಶಿಗಳ ಮೇಲೆ ಕ್ರಮ ಕೈಗೊಂಡಿಲ್ಲ. ದುರುಪಯೋಗವಾದ ಹಣ ವಾಪಸ್ ಕಟ್ಟಿಲ್ಲ. ಹೀಗಾಗಿ ಈ ಅವ್ಯವಹಾರದಲ್ಲಿ ಹಾಲಿ ಆಡಳಿತ ಮಂಡಳಿಯ ಹಸ್ತಕ್ಷೇಪ ಇದೆ ಎಂದು ಧರಣಿ ನಿರತರು ಅನುಮಾನ ವ್ಯಕ್ತಪಡಿಸಿದರು.
ರುದ್ರೇಶ್ ಪಾಟೀಲ್, ಎಚ್.ಎಂ. ರುದ್ರೇಶ್, ಶೇಖರಪ್ಪ, ಓಂಕಾರಪ್ಪ, ಚಂದ್ರಹಾಸಪ್ಪ, ನಾಗರಾಜಪ್ಪ ಭೋವಿ, ಡಿ.ಸಿ. ರಾಜಪ್ಪ, ಹಾಲಪ್ಪ, ಎಚ್.ಡಿ. ಸುರೇಶ್, ಮುರಳಿ ಸೇರಿ ನೂರಾರು ರೈತರು ಪಾಲ್ಗೊಂಡಿದ್ದರು.

Share This Article

ಮಂಗಳನ ಸಂಚಾರದಿಂದ ರೂಪುಗೊಳ್ಳಲಿದೆ ಮಂಗಳ-ಪುಷ್ಯ ಯೋಗ! ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ | Zodiac Signs

Zodiac Signs : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನಗಳು ಹಾಗೂ ಗ್ರಹಗಳ ಸಂಚಾರವೂ ವ್ಯಕ್ತಿಯು ಜನಿಸಿದ…

ನಿಮ್ಮನೆ ಮುದ್ದಿನ ನಾಯಿ ನಿಮ್ಮ ಮುಖವನ್ನು ನೆಕ್ಕುತ್ತದೆಯೇ? ಇರಲಿ ಎಚ್ಚರ.. Dog Licking Human Face

Dog Licking Human Face: ಆಧುನಿಕ ಜೀವನದಲ್ಲಿ ಹೆಚ್ಚಿನ ಜನರು ತಮ್ಮ ಮನೆಯಲ್ಲಿ ನಾಯಿಮರಿಗಳನ್ನು ಮನೆ…

ತಾಮ್ರದ ಉಂಗುರ ಧರಿಸುವುದು ಒಳ್ಳೆಯದಾ? ಕೆಟ್ಟದ್ದಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Copper Ring

Copper Ring : ಅನೇಕ ಜನರು ಬೆರಳುಗಳಿಗೆ ಉಂಗುರಗಳನ್ನು ಧರಿಸುತ್ತಾರೆ. ಕೆಲವರಿಗೆ ಇದು ಫ್ಯಾಶನ್​ ಆಗಿದ್ದಾರೆ,…