ರಾಣೆಬೆನ್ನೂರ: ಬೆಳೆ ಸಾಲ, ಟ್ರಾ$್ಯಕ್ಟರ್ ಸಾಲದ ಎನ್ಓಸಿ ಕೊಟ್ಟರೂ ಬ್ಯಾಂಕ್ನವರು ಆಧಾರ ಖುಲಾಸೆ ಪತ್ರಕ್ಕೆ ಸಹಿ ಮಾಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ನಗರದ ಪೋಸ್ಟ್ ವೃತ್ತದ ಬಳಿಯಿರುವ ಬ್ಯಾಂಕ್ಗೆ ಗುರುವಾರ ರೈತರು ಬೀಗ ಜಡಿದು ಪ್ರತಿಭಟನೆ ನಡೆಸಿದರು.
ರೈತ ಸಂದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ತಾಲೂಕಿನ ಗುಡ್ಡದ ಆನ್ವೇರಿಯ ರೈತ ಬಸವರಾಜ ವಿರುಪಾಪ್ಪ ಬಣಕಾರ 2013ರಲ್ಲಿ ಟ್ರಾ$್ಯಕ್ಟರ್ ಹಾಗೂ ಬೆಳೆ ಸಾಲವಾಗಿ 20 ಲ ರೂ. ಸಾಲ ತೆಗೆದುಕೊಂಡಿದ್ದರು. ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಇತ್ತೀಚಿಗೆ ಓಟಿಎಸ್ನಲ್ಲಿ ಬಡ್ಡಿ ಸಮೇತವಾಗಿ 30 ಲ ರೂ. ತುಂಬಿ ಎನ್ಓಸಿ ಕೂಡ ಪಡೆದುಕೊಂಡಿದ್ದಾರೆ. ಆದರೂ ಬ್ಯಾಂಕ್ ವ್ಯವಸ್ಥಾಪಕರು ಜಮೀನಿನ ನೊಂದಾಯಿತ ಬೋಜಾ ಕಡಿಮೆ ಮಾಡಲು ಆಧಾರ ಖುಲಾಸೆ ಪತ್ರಕ್ಕೆ ಸಹಿ ಮಾಡಲು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.
ಯಾವುದೇ ಮಾಹಿತಿ ಕೇಳಿದರೂ ಒಂದು ವಾರ ಬಿಟ್ಟು ಬನ್ನಿ ಎನ್ನುತ್ತಾರೆ. ಇದೇ ರೀತಿ ಸಾಕಷ್ಟು ರೈತರು ಓಟಿಎಸ್ ಸೌಲಭ್ಯದಲ್ಲಿ ಸಾಲವನ್ನು ಮರುಪಾವತಿ ಮಾಡಿದ್ದಾರೆ. ಆದರೆ, ಅವರ ಜಮೀನಿಗೆ ಆಧಾರ ಖುಲಾಸೆ ಪತ್ರಕ್ಕೆ ಶೀಲು ಹಾಕಿ ಸಹಿ ಮಾಡಿ ಕೊಡಲು ಸತಾಯಿಸುತ್ತಿದ್ದಾರೆ. ಆದ್ದರಿಂದ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೇತ್ತುಕೊಂಡು ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲೀತಿವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸ್ಥಳಕ್ಕೆ ಬಂದ ಬ್ಯಾಂಕ್ನ ಹಿರಿಯ ಅಧಿಕಾರಿಗಳು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರಮುಖರಾದ ಶಿವಾನಂದ ಸಾಲಗೇರಿ, ಬಸವರಾಜ ಬಣಕಾರ, ಬಾಬಣ್ಣ ಕಂಬಳಿ, ಮಂಜುನಾಥ ಸಾಂಬೋಜಿ, ಯಲ್ಲಪ್ಪ ಚಿಕ್ಕಣ್ಣನವರ ಮತ್ತಿತರರು ಪ್ರತಿಭಟನೆಯಲ್ಲಿದ್ದರು.
ಬ್ಯಾಂಕ್ಗೆ ಬೀಗ ಜಡಿದು ರೈತರ ಪ್ರತಿಭಟನೆ
You Might Also Like
ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ನೋಡಿ… ಇದ್ರೆ ಎಂದಿಗೂ ಹಣಕಾಸಿನ ಸಮಸ್ಯೆಗಳು ಎದುರಾಗಲ್ಲ | Palmistry
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Honey: ಜೇನಿನೊಂದಿಗೆ ಈ ಆರು ಆಹಾರ ಬೆರೆಸಿ ತಿನ್ನಬೇಡಿ..ಹಾಗೆ ಮಾಡಿದರೆ ವಿಷವಾಗುತ್ತದೆ!
ಜೇನು(Honey) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಕೆಲವು ಪದಾರ್ಥಗಳೊಂದಿಗೆ ಬೆರೆಸಿ ಸೇವಿಸಬಾರದು. ಈ 6 ಪದಾರ್ಥಗಳೊಂದಿಗೆ…
ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ.. ಈ ನೀರಿನಿಂದ ದೇಹದ ತೂಕ ಇಳಿಸಿಕೊಳ್ಳಬಹುದು! Interesting information
ಬೆಂಗಳೂರು: ಅಕ್ಕಿ ತೊಳೆದರೆ ಬರುವ ನೀರನ್ನು ( rice washed water) ಅನೇಕರು ಬಿಸಾಡುತ್ತಾರೆ. ಆದರೆ…