1 ಮನೆ, 25 ಬ್ಯಾಂಕ್‌, 10 ಕೋಟಿ ರೂ. ಸಾಲ: ಇದು ಖತರ್ನಾಕ್‌ ಮ‘ಸಾಲ’ ಮಲ್ಯನ ಕಥೆ!

ಬೆಂಗಳೂರು: ಸಾಮಾನ್ಯ ಜನರು ಒಂದೇ ಒಂದು ಬಾರಿ ಬ್ಯಾಂಕ್‌ನಿಂದ ಸಾಲ ಪಡೆಯಬೇಕೆಂದರೂ ಹರಸಾಹಸ ಪಡಬೇಕಾಗುತ್ತದೆ. ಆದರೆ, ಇಲ್ಲೊಬ್ಬ ಆಸಾಮಿ ಒಂದೇ ಮನೆಗೆ ಸುಮಾರು 25 ಬ್ಯಾಂಕ್‌ಗಳಿಂದ ಸಾಲ ಪಡೆದಿರುವ ಪ್ರಕರಣ ಪತ್ತೆಯಾಗಿದೆ.

ನಾಗೇಶ್​ ಎಂಬಾತ ಎಂಟು ವರ್ಷದಲ್ಲಿ ಸಾಲಕ್ಕೆಂದು ಸ್ವಂತ ಮನೆಯನ್ನೇ 25 ಬ್ಯಾಂಕ್‌ಗಳಲ್ಲಿ ಅಡವಿಟ್ಟು ಕೋಟಿ ಕೋಟಿ ಸಾಲ ಪಡೆದಿದ್ದಾನೆ. ಆಸ್ತಿ ಮೌಲ್ಯಕ್ಕಿಂತ 100 ಪಟ್ಟು ಜಾಸ್ತಿ ಸಾಲ ಪಡೆದು ಸದ್ಯ ಸಾಲ ಕಟ್ಟದೆ 25 ಬ್ಯಾಂಕ್​ಗಳಿಗೂ ಮೋಸ ಮಾಡಿದ್ದಾನೆ. ಇನ್ನು ಮನೆಗಾಗಿ 20 ಬ್ಯಾಂಕುಗಳ ನಡುವೆ ಬಿಗ್​ ಫೈಟ್​ ಆರಂಭವಾಗಿದೆ.

ಬೆಂಗಳೂರಿನ ಬೇಗೂರು ವಾರ್ಡ್​ನಲ್ಲಿರುವ ಸರ್ವೆ ನಂ 95/96ರ 30×60 ವಿಸ್ತೀರ್ಣದ ಎರಡು ಅಂತಸ್ತಿನ ಮನೆಗೆ ನಾಗೇಶ್​ ಮತ್ತು ಸುಮಾ ಎಂಬ ದಂಪತಿ ಒಡೆಯರು. ಇದರ ಮಾರಾಟ ಬೆಲೆ ಅಂದಾಜು 90 ಲಕ್ಷ ರೂ.ಗಳಾಗಿದೆ. ಆದರೆ, ಕನಿಷ್ಠ 25 ಲಕ್ಷ ರೂ.ನಿಂದ 70 ಲಕ್ಷದವರೆಗೂ ವಿವಿಧ ಬ್ಯಾಂಕ್​ಗಳಲ್ಲಿ ಲೋನ್​ ಪಡೆದಿದ್ದಾನೆ. ಇವರು ‘ಶ್ರೀನಿಧಿ ಮಸಾಲ’ ಎಂಬ ಕಂಪನಿಯನ್ನು ತೆರೆದಿದ್ದರು.

13 ಬ್ಯಾಂಕ್​ಗಳಿಂದ ಈ ಸ್ವತ್ತು ನಮಗೆ ಸೇರಿದ್ದು ಎಂದು ಮನೆ ಗೋಡೆ ತುಂಬಾ ಬ್ಯಾಂಕ್​ಗಳ ಮಾರ್ಟ್​ಗೇಜ್​ ಲೋನ್​ ಬರಹವೇ ತುಂಬಿದೆ. ಮನೆ ಜಪ್ತಿ ಮಾಡಿಕೊಂಡು ಸಿಂಡಿಕೇಟ್‌ ಬ್ಯಾಂಕ್‌ ಸೆಕ್ಯುರಿಟಿ ನೇಮಿಸಿದ್ದರೆ, ಅಲಹಾಬಾದ್​ ಬ್ಯಾಂಕ್​ನಿಂದಲೂ ಸೆಕ್ಯುರಿಟಿ ಗಾರ್ಡ್​ ನೇಮಿಸಲಾಗಿದೆ.

ಎಲ್ಲ ಬ್ಯಾಂಕ್​ಗಳಿಗೆ ಒಂದೇ ಮನೆಯ ಅಸಲಿ ದಾಖಲೆಗಳನ್ನು ನೀಡಿ ಮೋಸ ಮಾಡಿದ್ದರೂ ನಾಗೇಶ್‌ ವಿರುದ್ಧ ದೂರು ದಾಖಲಾಗಿಲ್ಲ. ಸದ್ಯ ಗೊಟ್ಟಿಗೆರೆಯಲ್ಲಿ ಮಸಾಲ ನಾಗೇಶ್​ ನೆಲೆಸಿದ್ದಾನೆ. (ದಿಗ್ವಿಜಯ ನ್ಯೂಸ್)

ಸಾಲ ಕೊಟ್ಟ ಬ್ಯಾಂಕ್​ಗಳು

ಅಲಹಾಬಾದ್​ ಬ್ಯಾಂಕ್ ​

ಸಿಂಡಿಕೇಟ್​ ಬ್ಯಾಂಕ್​ , ಬನ್ನೇರುಘಟ್ಟ ರಸ್ತೆ

ಕೆನರಾಬ್ಯಾಂಕ್​

ತುಮಕೂರು ವೀರಶೈವ ಕೋ ಆಪರೇಟಿವ್ ಬ್ಯಾಂಕ್​

ಲಕ್ಷ್ಮೀ ವಿಲಾಸ್​ ಬ್ಯಾಂಕ್​, ಬನಶಂಕರಿ

ಕಾರ್ಪೋರೇಷನ್​ ಬ್ಯಾಂಕ್​, ಜಯನಗರ

ಬನಶಂಕರಿ ಮಹಿಳಾ ಕೋ ಆಪರೇಟೀವ್​ ಬ್ಯಾಂಕ್​ ಕಬ್ಬನ್​ಪೇಟೆ

ಟಿಎಂಸಿಸಿಎಲ್​ ಬ್ಯಾಂಕ್​, ಜಯನಗರ

ಟಾಟಾ ಕ್ಯಾಪಿಟಲ್ಸ್​

ಟಿಜೆಎಸ್​ಬಿ ಸಹಕಾರಿ ಬ್ಯಾಂಕ್, ಜಯನಗರ

ಕಾರ್ಪೋರೇಷನ್​ ಬ್ಯಾಂಕ್​

ಮಣಪ್ಪುರಂ ಮಾರ್ಟೇಜ್​ ಲೋನ್​

ಮಹಿಳಾ ಕೋ ಆಪರೇಟೀವ್​ ಬ್ಯಾಂಕ್​, ಬಿಟಿಎಂ ಲೇಔಟ್​