More

    ಇಂದಿನಿಂದ 2 ದಿನಗಳ ಕಾಲ ಬ್ಯಾಂಕ್​ ನೌಕರರ ಮುಷ್ಕರ: ಬ್ಯಾಂಕ್​, ಎಟಿಎಂ ಸೇವೆಗಳಲ್ಲಿ ವ್ಯತ್ಯಯ

    ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ಶುಕ್ರವಾರದಿಂದ 2 ದಿನಗಳ ಕಾಲ ಬ್ಯಾಂಕ್​ ನೌಕರರ ಮುಷ್ಕರಕ್ಕೆ ಕರೆ ಕೊಟ್ಟಿದೆ.

    ಜ.31 ಹಾಗೂ ಫೆ.1ರಂದು ನಡೆಯುವ ಮುಷ್ಕರದಲ್ಲಿ ರಾಷ್ಟ್ರವ್ಯಾಪಿ 10 ಲಕ್ಷಕ್ಕೂ ಅಧಿಕ ಮಂದಿ ನೌಕರರು ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಬ್ಯಾಂಕ್​ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.

    ಬ್ಯಾಂಕ್​ ನೌಕರರ ಮುಷ್ಕರ ಕೇಂದ್ರ ಬಜೆಟ್​ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಸುವಂತೆ ನೌಕರರರು ಆಗ್ರಹಿಸಿದ್ದಾರೆ.

    ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ (ಐಬಿಎ) ಹಾಗೂ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಪದಾಧಿಕಾರಿಗಳ ಜತೆ ನಡೆದ ಹಲವು ಸುತ್ತಿನ ಸಭೆ ವಿಫಲಗೊಂಡ ಹಿನ್ನೆಲೆಯಲ್ಲಿ ಬ್ಯಾಂಕ್​ ನೌಕರರ ಸಂಘಗಳು ಬಂದ್​ಗೆ ಕರೆಕೊಟ್ಟಿವೆ.

    ಮುಷ್ಕರದಿಂದ ಬ್ಯಾಕ್​ ಹಾಗೂ ಎಟಿಎಂ ಸೇವೆಗಳ ಮೇಲೆ ಪರಿಣಾಮ ಬೀರಲಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts