ಹೈದರಾಬಾದ್: ಇಡೀ ಜಗತ್ತನ್ನೇ ಬಾಧಿಸಿರುವ ಮಹಾಮಾರಿ ಕರೊನಾ ವೈರಸ್ ಪ್ರಕರಣಗಳು ಇಳಿಮುಖವಾಗುತ್ತಿರುವುದು ಸಂತಸದ ವಿಚಾರ. ಇನ್ನೊಂದೆಡೆ ಲಸಿಕೆಗಳು ಸಹ ಹೊರ ಬರುತ್ತಿದ್ದು, ಜನರಲ್ಲಿನ ಭಯದ ವಾತಾವರಣ ದೂರವಾಗುತ್ತಿದೆ.
ಇಂತಹ ಭರವಸೆಯ ಸಮಯದಲ್ಲಿ ಎಸ್ಬಿಐ ಬ್ಯಾಂಕ್ ಉದ್ಯೋಗಿಯೋಬ್ಬರು ಕರೊನಾ ಭಯಕ್ಕೆ ಆತ್ಮಹತ್ಯೆಯಂತಹ ಆತುರದ ನಿರ್ಧಾರ ತೆಗೆದುಕೊಂಡಿರುವುದು ತಪ್ಪು ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ಇದನ್ನೂ ಓದಿ: ಕಾಮುಕ ಸೋದರಸಂಬಂಧಿಯನ್ನು ಕೊಂದ ಯುವತಿಯನ್ನು ಬಂಧಿಸದೇ ಬಿಟ್ಟು ಕಳುಹಿಸಿದ ಪೊಲೀಸ್ ಅಧಿಕಾರಿ!
ತುಂಬಾ ಆರೋಗ್ಯವಾಗಿಯೇ ಇದ್ದ ಹೈದರಾಬಾದ್ ಮೂಲದ ಯುವತಿ ರುಬ್ಬಾ ವಾಣಿ ಕರೊನಾ ಭಯದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಾಣಿ ಅವರು ಕರೀಮ್ನಗರದ ಮಂಕಮ್ಮಟೋಟಾ ಶಾಖೆಯಲ್ಲಿ ಎಸ್ಬಿಐ ಪ್ರಬೋಷನರಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಸ್ಥಳೀಯ ಟಿಆರ್ಎಸ್ ನಾಯಕನ ಮನೆಯನ್ನು ಬಾಡಿಗೆ ಪಡೆದು ನೆಲೆಸಿದ್ದರು.
ಕರೊನಾ ವೈರಸ್ನಿಂದ ಕಳೆದ ತಿಂಗಳಷ್ಟೇ ವಾಣಿ ಅವರ ತಂದೆ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಅವರ ತಾಯಿಗೂ ಕರೊನಾ ಪಾಸಿಟಿವ್ ವರದಿಯಾಗಿತ್ತು. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ವಾಣಿ ತನಗೂ ಕರೊನಾ ತಗುಲಬಹುದೆಂಬ ಭಯದಿಂದ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ.
ಇದನ್ನೂ ಓದಿರಿ: ಸರ್ಕಾರಿ ನೌಕರನೆಂದು ಮದ್ವೆಯಾದವಳಿಗೆ ನಿತ್ಯ ನರಕ ದರ್ಶನ: ಗಂಡನ ಮೊಬೈಲ್ ನೋಡಿ ಪತ್ನಿಗೆ ಶಾಕ್!
ಮನೆಯಲ್ಲಿ ಪತ್ತೆಯಾಗಿರುವ ಡೆತ್ನೋಟ್ನಲ್ಲಿ ಕರೊನಾ ಭಯದ ಉಲ್ಲೇಖವಾಗಿದೆ. ತಂದೆಯ ಸಾವಿನ ನೋವೇ ಪ್ರಮುಖ ಕಾರಣ ಎನ್ನಲಾಗಿದೆ. ಆದರೆ, ಕರೊನಾ ಮರೆಯಾಗುತ್ತಿರುವ ಸಮಯದಲ್ಲಿ ಒಳ್ಳೆಯ ಉದ್ಯೋಗವನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡ ವಾಣಿ ನಿರ್ಧಾರ ತಪ್ಪು ಎಂಬುದು ಜನರ ಮಾತಾಗಿದೆ. (ಏಜೆನ್ಸೀಸ್)
ಬಂಧಿತ ಯುವತಿಯರ ಮೊಬೈಲ್, ಲ್ಯಾಪ್ಟಾಪ್ ತುಂಬಾ ಪೋರ್ನ್ ವಿಡಿಯೋಗಳು: ಎಫ್ಎಸ್ಎಲ್ ಸ್ಫೋಟಕ ವರದಿ!
ಸೆಕ್ಸ್ ಮಾಡುವಾಗ ಉಸಿರುಗಟ್ಟಿ ಸತ್ತೇ ಹೋದಳು… ಬ್ಯಾಚಲರ್ ಮನೆಯಲ್ಲಿ ವಿವಾಹಿತೆ ಸಾವು!