ಬ್ಯಾಂಕ್ ಖಾತೆಗೆ ಸಿಮ್ ಕ್ಲೋನಿಂಗ್ ಕನ್ನ!

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ಡಿಜಿಟಲ್ ವಹಿವಾಟುದಾರರ ಬ್ಯಾಂಕ್ ಖಾತೆಗಳ ಮೇಲೆ ಕಣ್ಣಿಟ್ಟಿರುವ ಸೈಬರ್ ಕಳ್ಳರಿಗೀಗ ಮೊಬೈಲ್ ಸಿಮ್ ಸ್ವೆಪಿಂಗ್ ಅಸ್ತ್ರ ಸಿಕ್ಕಿದೆ. ಇಂಟರ್​ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ವ್ಯವಹಾರಕ್ಕೆ ಬಳಸುವ ಮೊಬೈಲ್ ಸಿಮ್ ಕಾರ್ಡ್​ಗಳನ್ನು ಬ್ಲಾಕ್ ಮಾಡಿಸಿ ಹೊಸ ಸಿಮ್ ಖರೀದಿಸುವ ಖದೀಮರು ಗ್ರಾಹಕರ ಖಾತೆಗಳಿಗೆ ಕನ್ನ ಹಾಕುವ ಪ್ರಕರಣಗಳು ಬಹಿರಂಗವಾಗುತ್ತಿವೆ. ಸಿಮ್ ಸ್ವೈಪಿಂಗ್ ಅಥವಾ ಸಿಮ್ ಕ್ಲೋನಿಂಗ್ ಹೆಸರಿನ ಈ ಅಪರಾಧ ಪೊಲೀಸರಿಗೆ ಹೊಸ ತಲೆನೋವು ತಂದಿಟ್ಟಿದೆ.

12 ಕೇಸ್ ಬೆಳಕಿಗೆ: ಸೈಬರ್ ಕ್ರೖೆಂ ಪೊಲೀಸ್ ಠಾಣೆಯಲ್ಲಿ 12 ಪ್ರಕರಣ ದಾಖಲಾಗಿವೆ. ಈ ಪೈಕಿ 1 ಪ್ರಕರಣ ಪತ್ತೆಹಚ್ಚಿರುವ ಪೊಲೀಸರು ಆರೋಪಿ ಹರೀಶ್ ಎಂಬಾತನನ್ನು ಬಂಧಿಸಿದ್ದಾರೆ. ನಕಲಿ ದಾಖಲೆ ಕೊಟ್ಟು ಸಿಮ್ ಮತ್ತು ಬ್ಯಾಂಕ್ ಖಾತೆ ತೆರೆದಿರುವ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆ ಕಷ್ಟಸಾಧ್ಯವಾಗಿದೆ ಎಂದು ಸೈಬರ್​ಠಾಣೆ ಇನ್​ಸ್ಪೆಕ್ಟರ್ ಯಶವಂತ ಕುಮಾರ್ ತಿಳಿಸಿದ್ದಾರೆ.

ಈ ಬಗ್ಗೆ ಅಲರ್ಟ್ ಆಗಿ!

# ದಿಢೀರ್ ಸಿಮ್ ಸ್ಥಗಿತಗೊಂಡರೆ ತಕ್ಷಣ ಎಚ್ಚೆತ್ತುಕೊಳ್ಳಿ

# ಸಂಬಂಧಪಟ್ಟ ಸಿಮ್ ಕಂಪನಿ ಶಾಪ್​ಗೆ ತೆರಳಿ ದೂರು ನೀಡಿ

# ಇಂಟರ್​ನೆಟ್, ಮೊಬೈಲ್ ಬ್ಯಾಂಕಿಂಗ್ ಸ್ಥಗಿತಗೊಳಿಸಿ

# ಹಳೆಯ ಸಿಮ್ ತೆಗೆದು, ಹೊಸ ಸಿಮ್ ಖರೀದಿಸಿ

ವಂಚನೆ ಹೇಗೆ?

ನೆಟ್ ಬ್ಯಾಂಕಿಂಗ್ ಗ್ರಾಹಕರ ಮೊಬೈಲ್ ನಂಬರ್ ಪಡೆದ ಬಳಿಕ ಗುರುತಿನ ಚೀಟಿ ಕದ್ದು ನಕಲಿ ಐಡಿ ಕಾರ್ಡ್ ಸೃಷ್ಟಿಸಿಕೊಳ್ಳುತ್ತಾರೆ. ಮೂರ್ನಾಲ್ಕು ದಿನ ರಜೆಗಳಿದ್ದ ಸಮಯದಲ್ಲಿ ಸಿಮ್ ಕಳೆದುಹೋಗಿದೆ ಎಂದು ಹೇಳಿ ನಕಲಿ ಐಡಿ ಕಾರ್ಡ್ ಕೊಟ್ಟು ಹೊಸ ಸಿಮ್ ಖರೀದಿಸುತ್ತಾರೆ. ಆಗ ಗ್ರಾಹಕನ ಅಸಲಿ ಸಿಮ್ ಬ್ಲಾಕ್ ಆಗುತ್ತದೆ. ದೀರ್ಘ ರಜೆ ಇದ್ದ ಕಾರಣ ಗ್ರಾಹಕರು ವಿಚಾರಿಸುವದಕ್ಕೂ ಸಿಮ್ ಅಂಗಡಿ ತೆರೆದಿರುವುದಿಲ್ಲ. ಈ ವೇಳೆ ವಂಚಕರು, ಸಿಮ್ ಆಕ್ಟಿವ್ ಮಾಡಿಕೊಂಡು ನೆಟ್ ಬ್ಯಾಂಕಿಂಗ್​ಗೆ ಲಾಗಿನ್ ಆಗುತ್ತಾರೆ. ಒಟಿಪಿ ಹೊಸ ಸಿಮ್ೆ ಬರುವುದರಿಂದ ಗ್ರಾಹಕನ ಬ್ಯಾಂಕ್​ನಿಂದ ತಮ್ಮ ಬ್ಯಾಂಕಿಗೆ ಹಣ ವರ್ಗಾವಣೆ ಮಾಡಿಕೊಳ್ಳುತ್ತಾರೆ.

ವಿಚಾರಿಸಿದರೂ ಗೊತ್ತಾಗಲ್ಲ!

ಗ್ರಾಹಕರು ಸಿಮ್ ಕಾರ್ಡ್ ಸ್ಥಗಿತಗೊಂಡಿರುವ ಬಗ್ಗೆ ಶಾಪ್​ಗೆ ಹೋಗಿ ವಿಚಾರಿಸಿದರೂ ಆ ತಕ್ಷಣಕ್ಕೆ ಏನಾಗಿದೆ ಎಂಬುದು ಗೊತ್ತಾಗುವುದಿಲ್ಲ. ಪರಿಣಾಮ ಯಾವುದೇ ಅನುಮಾನಕ್ಕೀಡಾಗದೆ ಮತ್ತೊಂದು ಹೊಸ ಸಿಮ್ ಖರೀದಿಸಿ ಬಳಸು ತ್ತಾರೆ. ಆದರೆ, ಬ್ಯಾಂಕ್ ಸ್ಟೇಟ್​ವೆುಂಟ್ ಬಂದಾಗಷ್ಟೇ ವಂಚನೆ ವಿಚಾರ ಬೆಳಕಿಗೆ ಬರುತ್ತದೆ. ಅಷ್ಟರಲ್ಲೇ ಸೈಬರ್ ಕಳ್ಳರು ಖಾತೆಯಲ್ಲಿರುವ ಹಣ ಲಪಟಾಯಿಸಿರುತ್ತಾರೆ.