ಬಾಂಗ್ಲಾ ತಂಡದಿಂದ ಸುನೀಲ್ ಜೋಶಿ ವಜಾ

ಲಂಡನ್: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ತಂಡ ಸೆಮಿಫೈನಲ್​ಗೇರಲು ವಿಫಲವಾದ ಹಿನ್ನೆಲೆಯಲ್ಲಿ ತಂಡದ ಮುಖ್ಯ ಕೋಚ್ ಸ್ಟೀವ್ ರೋಡಿಸ್, ಸ್ಪಿನ್ ಬೌಲಿಂಗ್ ಕೋಚ್ ಕನ್ನಡಿಗ ಸುನೀಲ್ ಜೋಶಿ ಹಾಗೂ ವೇಗದ ಬೌಲಿಂಗ್ ಕೋಚ್ ರ್ಕ್ನಟಿ ವಾಲ್ಶ್ ಅವರನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ವಜಾಗೊಳಿಸಿದೆ. ಟೂರ್ನಿಯಲ್ಲಿ ಬಾಂಗ್ಲಾ ತಂಡ ಕೇವಲ 3 ಜಯ ದಾಖಲಿಸಿ ಅಂಕಪಟ್ಟಿಯಲ್ಲಿ 8ನೇ ಸ್ಥಾನಗಳಿಸಿತ್ತು. ಇದೇ ತಿಂಗಳ ಅಂತ್ಯದಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಬಾಂಗ್ಲಾ ತಂಡಕ್ಕೆ ಕೋಚ್ ಯಾರೆಂದು ಇನ್ನು ಅಂತಿಮವಾಗಿಲ್ಲ. 2018ರ ಜೂನ್ ತಿಂಗಳಲ್ಲಿ 2020ರ ಟಿ20 ವಿಶ್ವಕಪ್ ಟೂರ್ನಿವರೆಗೂ ಎರಡು ವರ್ಷಗಳ ಅವಧಿಗೆ ಸ್ಟೀವ್ ರೋಡಿಸ್ ಅವರನ್ನು ತಂಡದ ಮುಖ್ಯ ಕೋಚ್ ಆಗಿ ನೇಮಿಸಲಾಗಿತ್ತು. ಮಾಜಿ ಸ್ಪಿನ್ನರ್ ಸುನೀಲ್ ಜೋಶಿ 2017ರ ಆಗಸ್ಟ್​ನಿಂದಲೂ ಬಾಂಗ್ಲಾ ತಂಡದ ಸ್ಪಿನ್ ಕೋಚ್ ಆಗಿದ್ದರೆ, 2016ರ ಆಗಸ್ಟ್ ನಿಂದಲೂ ರ್ಕ್ನಟಿ ವಾಲ್ಶ್ ವೇಗದ ಬೌಲಿಂಗ್ ಕೋಚ್ ಆಗಿದ್ದರು.

Leave a Reply

Your email address will not be published. Required fields are marked *