More

    ಪಾಕ್​ನಲ್ಲಿ ಪೂರ್ಣ ಸರಣಿ ಆಡಲು ಬಾಂಗ್ಲಾ ಒಪ್ಪಿಗೆ

    ಢಾಕಾ: ಪಾಕಿಸ್ತಾನದಲ್ಲಿ ಪೂರ್ಣ ಪ್ರಮಾಣದ ದ್ವಿಪಕ್ಷೀಯ ಸರಣಿ ಆಡಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಒಪ್ಪಿಗೆ ಸೂಚಿಸಿದೆ. ಭದ್ರತಾ ಕಾರಣಗಳಿಂದಾಗಿ ಬಾಂಗ್ಲಾದೇಶ ಸರ್ಕಾರ ಅನುಮತಿ ನೀಡಿದರೆ ಮಾತ್ರವೇ ಪಾಕಿಸ್ತಾನದಲ್ಲಿ ಟೆಸ್ಟ್ ಪಂದ್ಯ ಆಡುವುದಾಗಿ ಹೇಳಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತನ್ನ ವರಸೆ ಬದಲಿಸಿದ್ದು, ಎರಡು ಟೆಸ್ಟ್ ಪಂದ್ಯಗಳೂ ಸೇರಿರುವ ಪೂರ್ಣ ಪ್ರಮಾಣದ ಸರಣಿಗೆ ಒಪ್ಪಿಗೆ ನೀಡಿದೆ.

    ಆದರೆ, ಒಂದೇ ಹಂತದಲ್ಲಿ ಈ ಸರಣಿ ನಡೆಯುವುದಿಲ್ಲ. ಜನವರಿ ಅಂತ್ಯದಲ್ಲಿ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದ್ದರೆ, ಫೆಬ್ರವರಿಯಲ್ಲಿ ಒಂದು ಟೆಸ್ಟ್ ನಡೆಯಲಿದೆ. ಏಪ್ರಿಲ್​ನಲ್ಲಿ ಏಕದಿನ ಹಾಗೂ ಇನ್ನೊಂದು ಟೆಸ್ಟ್ ಪಂದ್ಯ ನಡೆಯಲಿದೆ. ಇದೇ ಮೊದಲ ಬಾರಿಗೆ ಪಾಕಿಸ್ತಾನದಲ್ಲಿಯೇ ಸಂಪೂರ್ಣವಾಗಿ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್​ಎಲ್) ಟಿ20 ನಡೆಯಲಿರುವ ಕಾರಣ ಈ ರೀತಿ ಸರಣಿಯ ಪಂದ್ಯಗಳ ನಡುವೆ ಅಂತರ ನೀಡಲಾಗಿದೆ. ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ ಹಾಗೂ ಏಕದಿನ ಸರಣಿಯ ನಡುವೆ ಪಿಎಸ್​ಎಲ್ ನಡೆಯಲಿದೆ. ವೇಳಾಪಟ್ಟಿ: ಜ.24: ಮೊದಲ ಟಿ20, ಜ.25: 2ನೇ ಟಿ20, ಜ.27: 3ನೇ ಟಿ20 (ಎಲ್ಲ ಪಂದ್ಯ ಲಾಹೋರ್​ನಲ್ಲಿ), ಫೆ.7-11: ಮೊದಲ ಟೆಸ್ಟ್, ರಾವಲ್ಪಿಂಡಿ, ಏ.3: ಏಕೈಕ ಏಕದಿನ, ಕರಾಚಿ, ಏ.5-9: 2ನೇ ಟೆಸ್ಟ್ ಕರಾಚಿ. -ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts