ಪರೀಕ್ಷೆ ಮುಗಿದ ಘಂಟೆಯಲ್ಲಿ ಫಲಿತಾಂಶ; ದೇಶದಲ್ಲೇ ದಾಖಲೆ ನಿರ್ಮಿಸಿದ ಬೆಂಗಳೂರು ವಿವಿ

ಬೆಂಗಳೂರು: ಪರೀಕ್ಷೆ ಮುಗಿದ ಒಂದೇ ಘಂಟೆಯಲ್ಲಿ ಅದರ ಫಲಿತಾಂಶವನ್ನು ಪ್ರಕಟಿಸುವ ಮೂಲಕ ಬೆಂಗಳೂರು ವಿಶ್ವ ವಿದ್ಯಾಲಯ ಹೊಸ ದಾಖಲೆ ಬರೆದಿದೆ.

ಬಿ.ಟೆಕ್​ ಮೊದಲ ವರ್ಷ ಹಾಗೂ ಬಿ.ಆರ್ಕ್​ ಪರೀಕ್ಷೆಯನ್ನು ವಿದ್ಯಾರ್ಥಿಗಳು ಬರೆದು ಮುಗಿಸಿದ ಒಂದೇ ಘಂಟೆಯಲ್ಲಿ ಫಲಿತಾಂಶವನ್ನು ವಿವಿ ರಿಜಿಸ್ಟ್ರಾರ್ ಪ್ರೊ..ಸಿ.ಶಿವರಾಜ್​ ಪ್ರಕಟಿಸಿದ್ದಾರೆ. ಇದು ದೇಶದಲ್ಲೇ ಪ್ರಥಮ ಬಾರಿಗೆ ಆಗಿದೆ.

ವಿವಿ ವೆಬ್​ಸೈಟ್​ Www.Bangalore university.ac.inನಲ್ಲಿ ಫಲಿತಾಂಶ ಪ್ರಕಟವಾಗಿದ್ದು ಪರೀಕ್ಷೆ ಮುಗಿದ ಒಂದು ಗಂಟೆಯಲ್ಲಿ ಫಲಿತಾಂಶ ತಮ್ಮ ಕೈಸೇರಿದ್ದಕ್ಕೆ ವಿದ್ಯಾರ್ಥಿಗಳೂ ಸಂತಸಗೊಂಡಿದ್ದಾರೆ.