ವಾಯುವಿಹಾರಕ್ಕೆಂದು ಹೋಗಿದ್ದ ಟೆಕ್ಕಿ ನಿಗೂಢ ನಾಪತ್ತೆ!

ಬೆಂಗಳೂರು: ವಾಯುವಿಹಾರಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದ ಟೆಕ್ಕಿ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದಾರೆ.

ಸಾಫ್ಟ್​​ವೇರ್​​ ಉದ್ಯೋಗಿ ಪ್ರಸನ್ನರಾಮಚಂದ್ರ(39) ನಾಪತ್ತೆಯಾಗಿದ್ದು, ನ.9 ರಿಂದ ಈವರೆಗೆ ಪ್ರಸನ್ನ ಬಗ್ಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ.
ಪ್ರಸನ್ನ ರಾಮಚಂದ್ರ ಪತ್ನಿ ಮೊಬೈಲ್​ಗೆ ಮೆಸೇಜ್​ ಬಂದಿದ್ದು, ನಿಮ್ಮ ಯಜಮಾನರು ನಮ್ಮ ಬಳಿ ಇದ್ದಾರೆ. ಪೊಲೀಸರ ಬಳಿ ಹೋಗಬೇಡಿ ಎಂದಿದ್ದಾರೆ.

ಈ ಕುರಿತು ಪ್ರಸನ್ನ ಪತ್ನಿ ಬನಶಂಕರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಲಂಡನ್​​ನ TCS ಕಂಪನಿಯಲ್ಲಿ ಕೆಲಸ ಮಾಡಿ ಬೆಂಗಳೂರಿಗೆ ಬಂದಿದ್ದ ಪ್ರಸನ್ನ 4 ವರ್ಷಗಳಿಂದಲೂ ಬೆಂಗಳೂರಿನ TCS ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಕಿಡ್ನಾಪ್ ಪ್ರಕರಣದ ಹಿಂದೆ ಹಲವಾರು ಆಯಾಮಗಳಿದ್ದು, ಕರೆಗಳ ಮಾಹಿತಿ ಆಧಾರದ ಮೇಲೆ ಬನಶಂಕರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *