ಬೆಂಗಳೂರು : ಭಾರತದಲ್ಲಿ ತುರ್ತು ಬಳಕೆ ಅನುಮತಿಗಾಗಿ ಕಾಯುತ್ತಿರುವ ರಷ್ಯಾದ ಸ್ಪುಟ್ನಿಕ್ ವಿ ಕರೊನಾ ಲಸಿಕೆಯ 200 ಮಿಲಿಯನ್ ಡೋಸ್‌ಗಳನ್ನು ತಯಾರಿಸಲು ಬೆಂಗಳೂರಿನ ಸ್ಟೆಲಿಸ್ ಬಯೋಫಾರ್ಮಾ ಮುಂದಾಗಿದೆ. ಈ ರಷಿಯನ್ ಲಸಿಕೆಯ ತಯಾರಿಕೆಗೆ ಒಪ್ಪಂದ ಮಾಡಿಕೊಳ್ಳುತ್ತಿರುವ ನಾಲ್ಕನೇ ಭಾರತೀಯ ಕಂಪೆನಿ ಇದಾಗಿದೆ.
ಬೆಂಗಳೂರಿನಲ್ಲಿ ತನ್ನ ಪ್ರಧಾನ ಕಚೇರಿ ಹೊಂದಿರುವ ಸ್ಟ್ರೈಡ್ಸ್ ಫಾರ್ಮಾ ಸೈನ್ಸ್‌ನ ಬಯೋಫಾರ್ಮಾಸ್ಯುಟಿಕಲ್ ವಿಭಾಗವಾದ ಸ್ಟೆಲಿಸ್, ರಷಿಯನ್ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್(ಆರ್ಡಿಐಎಫ್)ನೊಂದಿಗೆ ಈ ಕುರಿತು ಒಪ್ಪಂದ ಮಾಡಿಕೊಂಡಿದೆ. ಇದರಿಂದಾಗಿ ಭಾರತ ಈ ಲಸಿಕೆಯನ್ನು ವರ್ಷಕ್ಕೆ ಸುಮಾರು 550 ಮಿಲಿಯನ್ ಡೋಸ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಪಡೆಯಲಿದೆ.
ಇದನ್ನೂ ಓದಿ: ಹೆಚ್ಚಿದ ಕರೊನಾ : ಮದುವೆ ಸಮಾರಂಭಗಳಿಗೆ ಪೊಲೀಸರಾಗಲಿದ್ದಾರೆ ವಿಶೇಷ ಅತಿಥಿಗಳು !
2021 ರ ಜುಲೈನಿಂದ ಸೆಪ್ಟೆಂಬರ್ವರೆಗಿನ ಮೂರು ತಿಂಗಳ ಅವಧಿಯಲ್ಲಿ ಸ್ಪುಟ್ನಿಕ್ ವಿ ಉತ್ಪಾದನೆ ಮತ್ತು ಸರಬರಾಜನ್ನು ಪ್ರಾರಂಭಿಸಲು ಸ್ಟೆಲಿಸ್ ಕಂಪನಿ ಉದ್ದೇಶಿಸಿದೆ. ಆರಂಭಿಕವಾಗಿ 200 ಮಿಲಿಯನ್ ಡೋಸ್‌ಗಳನ್ನು ತಯಾರಿಸುವ ಒಪ್ಪಂದವಾಗಿದ್ದು, ಹೆಚ್ಚಿನ ಉತ್ಪಾದನೆಯ ಅವಕಾಶವೂ ತೆರೆದಿದೆ. ಏಕೆಂದರೆ “ಆರಂಭಿಕ ಒಪ್ಪಂದವನ್ನು ಮೀರಿ ಹೆಚ್ಚುವರಿ ಪೂರೈಕೆ ಮಾಡಲು ಸ್ಟೆಲಿಸ್ ಆರ್ಡಿಐಎಫ್ ಜೊತೆ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ” ಎಂದು ಆರ್ಡಿಐಎಫ್ ಹೇಳಿಕೆ ನೀಡಿದೆ.
ಈ ಮುನ್ನ ಹೈದರಾಬಾದ್ನ ಗ್ಲಾಂಡ್ ಫಾರ್ಮ ಮತ್ತು ಹೆಟೆರೋ ಬಯೋಫಾರ್ಮಗಳು ಕ್ರಮವಾಗಿ 252 ಮಿಲಿಯನ್ ಡೋಸ್ಗಳ ಮತ್ತು 100 ಮಿಲಿಯನ್ ಡೋಸ್‌ಗಳನ್ನು ಪೂರೈಸುವ ಒಪ್ಪಂದ ಮಾಡಿಕೊಂಡಿವೆ. ಅದಲ್ಲದೆ, ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ ಕಂಪೆನಿ ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆಯ ಎಫಿಕೆಸಿ ಅಧ್ಯಯನವನ್ನು ಮುಂದುವರೆಸಿ, ತುರ್ತು ಬಳಕೆ ಅನುಮೋದನೆ ಪಡೆಯಲು ಪ್ರಯತ್ನಿಸುತ್ತಿದೆ. ಅನುಮೋದನೆ ಸಿಕ್ಕಲ್ಲಿ ರೆಡ್ಡೀಸ್ ಕೂಡ 200 ಮಿಲಿಯನ್ ಡೋಸ್ಗಳ ಉತ್ಪಾದನೆ ಮಾಡಲಿದೆ ಎನ್ನಲಾಗಿದೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮೇಲೆ ನಿರ್ಬಂಧ… ಸಿಎಂ ಯಡಿಯೂರಪ್ಪ ಹೇಳಿದ್ದೇನು?
ಈ ಮುದ್ದು ಮಗು ಮುಂದೆ ಬಿಗ್ ಬಾಸ್ ಖ್ಯಾತಿ ಗಳಿಸಿದಾಕೆ… ಯಾರೆಂದು ಊಹಿಸಬಲ್ಲಿರಾ?!
ಎರಡು ಮಕ್ಕಳ ತಂದೆಯನ್ನು ಮದುವೆಯಾದಳು, ತನ್ನದೇ ಮಗು ಹುಟ್ಟಿದಾಗ ಮೆಟರ್ನಿಟಿ ಲೀವ್ ಕೇಳಿದಳು… ಹೈಕೋರ್ಟ್ ಏನು ಹೇಳಿತು ನೋಡಿ…