ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸ್​ ಸಿಬ್ಬಂದಿಗೆ ಡಿಸಿಪಿ ಅಣ್ಣಾಮಲೈ ನೀಡಿದ್ರು ಗುಡ್​ನ್ಯೂಸ್​…

ಬೆಂಗಳೂರು: ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ತಮ್ಮ ಸಿಬ್ಬಂದಿಗೆ ಒಂದು ಗುಡ್​ನ್ಯೂಸ್​ ಕೊಟ್ಟಿದ್ದಾರೆ.
ಪೊಲೀಸ್​ ಕಾನ್ಸ್​ಟೆಬಲ್​, ಹೆಡ್​ ಕಾನ್ಸ್​ಟೆಬಲ್​, ಅಸಿಸ್ಟೆಂಟ್​ ಸಬ್​ ಇನ್ಸ್​ಪೆಕ್ಟರ್​ಗಳಿಗೆ ವಾರದ ರಜೆಯನ್ನು ಕಡ್ಡಾಯಗೊಳಿಸಿದ್ದಾರೆ. ಹಾಗೇ ವರ್ಷದಲ್ಲಿ 15 ದಿನಗಳ ಸಾಂದರ್ಭಿಕ ರಜೆಗೂ ಅನುಮತಿ ನೀಡಿದ್ದಾರೆ. ಈ ಸಿಎಲ್​ಗಳು 15ಕ್ಕಿಂತ ಹೆಚ್ಚು ಬೇಕಾದರೆ ಡಿಸಿಪಿಯನ್ನು ಸಂಪರ್ಕಿಸಲು ಸೂಚನೆ ನೀಡಿದ್ದಾರೆ.

ಸದಾ ಒತ್ತಡದಲ್ಲೇ ಕೆಲಸ ಮಾಡುವ ಪೊಲೀಸ್​ ಸಿಬ್ಬಂದಿಗೆ ವಾರದ ರಜೆಯೂ ಸಿಗುತ್ತಿರಲಿಲ್ಲ. ಇದನ್ನು ಮನಗಂಡು, ಸಿಬ್ಬಂದಿಯ ಒತ್ತಡ ತಗ್ಗಿಸಲು ಮುಂದಾಗಿರುವ ಅಣ್ಣಾಮಲೈ ಈ ಕ್ರಮ ಕೈಗೊಂಡಿದ್ದಾರೆ.