ಮೆಟ್ರೋ, ಸಬ್​ಅರ್ಬನ್ ಯೋಜನೆಗೆ ಸಂಪುಟ ಓಕೆ

ಬೆಂಗಳೂರು: ರಾಜಧಾನಿಯ ಸಂಚಾರ ದಟ್ಟಣೆ ನಿಯಂತ್ರಿಸಲು ಮೆಟ್ರೋ ಮುಂದುವರಿದ ಪರಿಷ್ಕೃತ ಯೋಜನೆ ಮತ್ತು ಸಬ್ ಅರ್ಬನ್ ರೈಲ್ವೆ ಯೋಜನೆ ಜಾರಿಗೆ ಸಂಪುಟ ಸಭೆ ಗುರುವಾರ ಅನುಮೋದನೆ ನೀಡಿದೆ. ಲೋಕಸಭೆ ಚುನಾವಣೆ ಮುಂದಿರುವಾಗ ಸಾಲ ಮನ್ನಾ ಹೊರತಾಗಿಯೂ ಅಭಿವೃದ್ಧಿ ಕಾರ್ಯಕೈಗೆತ್ತಿಕೊಳ್ಳುವಲ್ಲಿ ನಾವು ಹಿಂದೆ ಬಿದ್ದಿಲ್ಲ ಎಂಬುದನ್ನು ಸಾರುವ ಉದ್ದೇಶದಿಂದ ಮೈತ್ರಿ ಸರ್ಕಾರ ಬೃಹತ್ ಯೋಜನೆಗೆ ಕೈಹಾಕಿದೆ. ಎರಡೂ ಪ್ರಮುಖ ಯೋಜನೆಗಳಿಗಾಗಿ ಬರೋಬ್ಬರಿ 39 ಸಾವಿರ ಕೋಟಿ ರೂ. ವೆಚ್ಚ ಮಾಡಲು ಸಂಪುಟ ಅವಕಾಶ ಕಲ್ಪಿಸಿದೆ. ಸಭೆ ಬಳಿಕ ವಿವರಣೆ ನೀಡಿದ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ, ಸರ್ಕಾರ ವಿಶೇಷವಾಗಿ ಬೆಂಗಳೂರು ನಗರಕ್ಕೆ ದೊಡ್ಡ ಕೊಡುಗೆ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ. ಮೂರು ಮೆಟ್ರೋ ಯೋಜನೆಗೆ ಅನುಮೋದನೆ ಸಿಕ್ಕಿದೆ, ಜತೆಗೆ ಸಬ್ ಅರ್ಬನ್ ಯೋಜನೆ ಕೈಗೆತ್ತಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ ಎಂದರು.