ಫ್ಲೆಕ್ಸ್‌, ಪೋಸ್ಟರ್‌ ನಿಷೇಧ: ಚಲನಚಿತ್ರ ಪ್ರಚಾರಕ್ಕೆ ಬದಲಿ ವ್ಯವಸ್ಥೆಗೆ ಮನವಿ

ಬೆಂಗಳೂರು: ಫ್ಲೆಕ್ಸ್, ಪೋಸ್ಟರ್ ನಿಷೇಧದ ಹಿನ್ನೆಲೆಯಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ ಬಿಬಿಎಂಪಿ ಆಯುಕ್ತರನ್ನು ಭೇಟಿ ಮಾಡಿ ಚರ್ಚಿಸಿದರು.

ಅಧ್ಯಕ್ಷ ಚಿನ್ನೇಗೌಡ, ಪ್ರಧಾನ ಕಾರ್ಯದರ್ಶಿ ಬಾ.ಮ. ಹರೀಶ್ ಇಂದು ಭೇಟಿ ನೀಡಿ ಚಲನಚಿತ್ರ ಪ್ರಚಾರಕ್ಕೆ ಬದಲಿ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದರು.

ಪ್ಲಾಸ್ಟಿಕ್ ಅಂಶವಿರುವ ಪೋಸ್ಟರ್ ಹಾಕುವಂತಿಲ್ಲ. ಬಟ್ಟೆ ಬ್ಯಾನರ್ ಮೂಲಕ ಹಾಗೂ ಥಿಯೇಟರ್ ಆವರಣದಲ್ಲಿ ಪೋಸ್ಟರ್ ಹಾಕಿಕೊಳ್ಳುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಬದಲಿ ವ್ಯವಸ್ಥೆ ಕುರಿತಂತೆ ಚರ್ಚಿಸಿದರು. (ದಿಗ್ವಿಜಯ ನ್ಯೂಸ್)