ಸಿಲಿಕಾನ್‌ ಸಿಟಿಯಲ್ಲಿ ಹೊಸ ವಾಹನ ಖರೀದಿಗೆ ಬ್ರೇಕ್​ ಹಾಕಲು ಸರ್ಕಾರದ ಚಿಂತನೆ

ಬೆಂಗಳೂರು: ಸಿಲಿಕಾನ್ ಸಿಟಿಯ ಜನರಿಗೆ ಸರ್ಕಾರ ಬಿಗ್ ಶಾಕ್ ನೀಡಿದ್ದು, ಇನ್ನು ಎರಡು ವರ್ಷ ಹೊಸ ವಾಹನ ಖರೀದಿಗೆ ಕಡಿವಾಣ ಹಾಕಲು ಸರ್ಕಾರ ಚಿಂತನೆ ನಡೆಸಿದೆ.

ವಾಯು ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಹೊಸ ವಾಹನಕ್ಕೆ ಬ್ರೇಕ್ ಹಾಕಲಾಗುತ್ತದೆ. ಮುಂದಿನ 2-3 ವರ್ಷ ಹೊಸ ವಾಹನ ನೋಂದಣಿ ಮಾಡದಿರಲು ತೀರ್ಮಾನಿಸಲಾಗಿದೆ. ಮೊದಲಿಗೆ ಬೆಂಗಳೂರಿಗೆ ಮಾತ್ರ ಈ ನಿರ್ಣಯ ಸೀಮಿತವಾಗಲಿದೆ. ಈ ಕುರಿತಂತೆ ಸಾರಿಗೆ ಸಚಿವರ ಜತೆ ಚರ್ಚೆ ನಡೆಸಲಾಗಿದೆ ಎಂದು ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ದೊರಕುವ ಪ್ರತಿಕ್ರಿಯೆ ನೋಡಿಕೊಂಡು ರಾಜ್ಯದ ಉಳಿದ ನಗರಗಳಿಗೂ ಅನ್ವಯಿಸಲಾಗುತ್ತದೆ. ವಾಹನ ನೋಂದಣಿ ಮಾಡದಂತೆ ಸಾರಿಗೆ ಇಲಾಖೆಗೆ ಸೂಚನೆ ನೀಡಲು ತೀರ್ಮಾನಿಸಲಾಗಿದೆ. ಈ ಕುರಿತು ಸಾರಿಗೆ ಇಲಾಖೆ ಜತೆಯೂ ಒಮ್ಮೆ ಚರ್ಚೆ ನಡೆಸಲಾಗಿದೆ. ಈ ಕುರಿತಂತೆ ಕಾನೂನು ಇಲಾಖೆ ಅನುಮತಿ ಪಡೆದು ಶೀಘ್ರದಲ್ಲೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಬಾಪೂಜಿ ನಗರ ಹೆಸರು ಬದಲಾವಣೆ ಇಲ್ಲ
ಬಾಪೂಜಿ ನಗರ ವಾರ್ಡ್ ಹೆಸರು ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೌನ್ಸಿಲ್‌ನಲ್ಲಿ ಅಪ್ರೂವಲ್ ಸಿಗದೆ ಹೆಸರು ಬದಲಿಸಲು ಸಾಧ್ಯವಿಲ್ಲ. ಕೌನ್ಸಿಲ್‌ನಲ್ಲಿ ಅಪ್ರೂವಲ್ ಆದ್ರೆ ಕ್ಯಾಬಿನೆಟ್‌ಗೆ ಬರಲಿದೆ. ಕ್ಯಾಬಿನೆಟ್‌ನಲ್ಲಿ ಒಪ್ಪಿಗೆ ದೊರೆತಲ್ಲಿ ಮಾತ್ರ ಹೆಸರು ಬದಲಿಸಬಹುದು. ಆದರೆ, ಈ ರೀತಿ ಯಾವುದೇ ಪ್ರೊಸೀಜರ್ ಆಗಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಬದಲಾದ್ರೆ ಮಾತ್ರ ಹೆಸರಿಡಬಹುದು ಎಂದಿದ್ದಾರೆ. (ದಿಗ್ವಿಜಯ ನ್ಯೂಸ್)