25.6 C
Bangalore
Thursday, December 12, 2019

ಬಂಡೀಪುರ ಬೂದಿ

Latest News

ಗಲಾಟೆಯಲ್ಲಿ ಗ್ರಾಪಂ ಅಧ್ಯಕ್ಷೆಗೆ ಗಾಯ

ನಂಜನಗೂಡು: ತಾಲೂಕಿನ ಹೊರಳವಾಡಿ ಗ್ರಾಮದಲ್ಲಿ ಹಳೇ ವೈಷಮ್ಯಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ನಡೆದ ಗಲಾಟೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯಗೊಂಡಿದ್ದಾರೆ. ಗ್ರಾಮ...

ನಮ್ಮ ಸೇವಾ ಕಾರ್ಯಗಳೇ ಶಾಶ್ವತ

ಶಾಸಕ ಕೆ.ಮಹದೇವ್ ಅಭಿಮತ ಪಿರಿಯಾಪಟ್ಟಣ: ತಾಲೂಕಿನ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಅಧಿಕಾರ ಎಂದಿಗೂ ಶಾಶ್ವತವಲ್ಲ. ನಾವು ಮಾಡುವ ಜನಪರ ಸೇವಾ...

ಹುಸ್ಕೂರು ಶಾಲೆಯಲ್ಲಿ ಇಂಗ್ಲಿಷ್ ಫೆಸ್ಟಿವಲ್

ಮಕ್ಕಳಿಂದ ಆಂಗ್ಲ ಭಾಷೆಯಲ್ಲಿ ಕಲಿಕಾ ಪ್ರದರ್ಶನ ನಂಜನಗೂಡು: ತಾಲೂಕಿನ ಹುಸ್ಕೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್ ಫೆಸ್ಟಿವಲ್ ಕಾರ್ಯಕ್ರಮದಡಿ ವಿದ್ಯಾರ್ಥಿಗಳು ಗುರುವಾರ ಆಂಗ್ಲ...

ವಿದ್ಯುತ್ ತಗುಲಿ ಚಿರತೆ ಸಾವು

ಎಚ್.ಡಿ.ಕೋಟೆ: ತಾಲೂಕಿನ ಜಿಯಾರ ಗ್ರಾಮದ ಬಳಿ ಕಬಿನಿ ಹಿನ್ನೀರಿಗೆ ತೆರಳುವ ಮಾರ್ಗದಲ್ಲಿ ಗುರುವಾರ ಮುಂಜಾನೆ ವಿದ್ಯುತ್ ತಂತಿ ಸ್ಪರ್ಶಿಸಿ 5 ವರ್ಷದ ಹೆಣ್ಣು...

ಆಧುನಿಕ ಪ್ರಪಂಚದಲ್ಲೂ ಜನಪದ ಸಾಹಿತ್ಯಕ್ಕೆ ಮನ್ನಣೆ

ಹಿರಿಯ ಚಿಂತಕ ಹೊರೆಯಾಲ ದೊರೆಸ್ವಾಮಿ ಅಭಿಪ್ರಾಯ ಕೆ.ಆರ್.ನಗರ : ಬರವಣಿಗೆ ದೃಢವಾಗಿದ್ದರೆ ವಿಚಾರ ಚೈತನ್ಯಶೀಲವಾಗಿ ಹೊರ ಹೊಮ್ಮುತ್ತದೆ. ಪರಿಪಕ್ವ ವಿಚಾರಗಳ ಮುಖಾಂತರ ಸಮಾಜದ ತಾರತಮ್ಯ...

| ಪ್ರಸಾದ್ ಲಕ್ಕೂರು ಚಾಮರಾಜನಗರ

ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಕಳೆದ 5 ದಿನಗಳಿಂದ ಹೊತ್ತಿ ಉರಿದ ಬೆಂಕಿಯ ಕೆನ್ನಾಲಿಗೆಗೆ ಅಂದಾಜು 30 ಸಾವಿರ ಎಕರೆ ಅರಣ್ಯ ಪ್ರದೇಶ, ಹಲವಾರು ಪ್ರಾಣಿ-ಪಕ್ಷಿಗಳು ಸುಟ್ಟು ಹೋಗಿದ್ದು ಎಲ್ಲೆಲ್ಲೂ ಸ್ಮಶಾನಮೌನ ಆವರಿಸಿದೆ. ಎಲ್ಲಿ ನೋಡಿದರಲ್ಲಿ ಸುಟ್ಟು ಬೂದಿಯಾದ ಅರಣ್ಯ ಸಂಪತ್ತಿನ ಅವಶೇಷಗಳೇ ಗೋಚರಿಸುತ್ತಿವೆ.

ಊರು ಕೊಳ್ಳೆ ಹೋದ ಮೇಲೆ ಕೋಟೆ ಬಂದ್ ಮಾಡಿದರು ಎಂಬಂತೆ ಅಪಾರ ಅರಣ್ಯ ಸಂಪತ್ತು ಸುಟ್ಟು ಭಸ್ಮವಾದ ಮೇಲೆ ಸರ್ಕಾರ ಬೆಂಕಿ ನಿಯಂತ್ರಣಕ್ಕೆ ಸೇನಾ ಹೆಲಿಕಾಪ್ಟರ್ ನೆರವು ಪಡೆದಿದ್ದು, ಸೋಮವಾರ ಸಂಜೆಯಿಂದ 2 ಕಾಪ್ಟರ್​ಗಳು ಕಾಳ್ಗಿಚ್ಚುಪೀಡಿತ ಅರಣ್ಯಕ್ಕೆ ನೀರು ಸಿಂಪಡಿಸಲಾರಂಭಿಸಿವೆ.

ಸಂರಕ್ಷಿತಾರಣ್ಯದ ಗೋಪಾಲಸ್ವಾಮಿ ಬೆಟ್ಟ ವಲಯಾರಣ್ಯ ಶೇ.90, ಕುಂದಕೆರೆ ವಲಯಾರಣ್ಯ ಶೇ.40 ಸುಟ್ಟು ಹೋಗಿದೆ ಎಂದು ಅರಣ್ಯಾಧಿಕಾರಿಗಳೇ ಹೇಳುತ್ತಾರೆ. ದುರದೃಷ್ಟವೆಂದರೆ ಸೋಮವಾರವೂ ಬೆಂಕಿ ನಿಯಂತ್ರಣಕ್ಕೆ ಬಂದಿರಲಿಲ್ಲ. ಹಂಗಳ, ದೇವರಹಳ್ಳಿ, ಹೊನ್ನೇಗೌಡನಹಳ್ಳಿ ಹತ್ತಿರದ ಗೋಪಾಲಸ್ವಾಮಿ ಬೆಟ್ಟದ ನೆತ್ತಿಯಲ್ಲಿ ಸೋಮವಾರವೂ ಬೆಂಕಿ ಉರಿಯುತ್ತಿತ್ತು.

ಗುಂಡ್ಲುಪೇಟೆ ಪಟ್ಟಣ ಕಡೆಯಿಂದ ಬಂಡೀಪುರ ಅರಣ್ಯ ಪ್ರವೇಶಿಸುವ ಮೇಲುಕಾಮನಹಳ್ಳಿ ದ್ವಾರದಿಂದ ಸಫಾರಿ ಟಿಕೆಟ್ ವಿತರಣೆ ಕೇಂದ್ರದ ಕಡೆಗೆ ಹೋಗುವ 2 ಕಿ.ಮೀ. ಉದ್ದಕ್ಕೂ (ರಾಷ್ಟ್ರೀಯ ಹೆದ್ದಾರಿ-67) ಅರಣ್ಯ ಪ್ರದೇಶ ಸುಟ್ಟು ಹೋಗಿದೆ. ಗಾಳಿ ಬೀಸಿದರೆ ಬೂದಿ ಹಾರುತ್ತಿದೆ, ಮರಗಳು ಸುಟ್ಟು ಕರಕಲಾಗಿ ನಿಂತಿವೆ. ಮೇಲುಕಾಮನಹಳ್ಳಿ ಗೇಟ್ ಬಳಿಯ ಸಾವಿರಾರು ಎಕರೆ ಬೋಳು ಗುಡ್ಡ ಅರಣ್ಯ ಪ್ರದೇಶ ಬೆಂಕಿಯಿಂದ ಸಂಪೂರ್ಣ ಸುಟ್ಟಿದೆ.

ಕುಂದಕೆರೆ ವಲಯದ ಬೆಟ್ಟಗಳು ಸುಟ್ಟು ಕಪ್ಪಗೆ ಕಾಣುತ್ತಿವೆ. ಸುಟ್ಟಿರುವ ಕಾಡು ಮಾಮಾಲಿನಂತೆ ಆಗಲು ಇನ್ನೆಷ್ಟು ವರ್ಷ ಬೇಕೋ ಎಂದು ಪರಿಸರಪ್ರಿಯರು ಮರುಗುತ್ತಿದ್ದರು. ವೇಗವಾಗಿ ಓಡಲಾರದ ಹಾವು, ಅಳಿಲು, ಕೋತಿ, ಓತಿಕೇತ, ಮೊಲಗಳಂಥ ಪ್ರಾಣಿಗಳಲ್ಲಿ ಬೆಂಕಿಯ ಕೆನ್ನಾಲಿಗೆಗೆ ಬೆಂದು ಹೋದವೆಷ್ಟು ಎಂಬುದೇ ಲೆಕ್ಕೆಕ್ಕೆ ಸಿಗುತ್ತಿಲ್ಲ. ಸದ್ಯಕ್ಕೆ ಮದ್ದೂರು ಮತ್ತು ಮೂಲೆಹೊಳೆ ವಲಯಾರಣ್ಯ ಸುರಕ್ಷಿತವಾಗಿದೆ. ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-766 ಬಂಡೀಪುರ ಅರಣ್ಯದ ಮದ್ದೂರು, ಮೂಲೆಹೊಳೆ ಅರಣ್ಯದಲ್ಲಿ ಸಾಗುತ್ತದೆ.

ಇಂಪಿಲ್ಲ, ಕಂಪಿಲ್ಲ..

ಅರಣ್ಯವೇ ಹೊತ್ತಿ ಉರಿಯುತ್ತಿರು ವುದರಿಂದ ಬಂಡೀಪುರದಲ್ಲಿ ಪಕ್ಷಿಗಳ ಕಲರವ ಕೇಳಿಸುತ್ತಿಲ್ಲ, ಜಿಂಕೆಗಳ ಹಿಂಡು ಕಾಣಿಸುತ್ತಿಲ್ಲ. ಕಾಡು ಹಂದಿಗಳು ನಾಪತ್ತೆಯಾಗಿವೆ. ಮೇಲುಕಾಮನಹಳ್ಳಿ ಗೇಟ್ ದಾಟಿ ಬಂಡೀಪುರ ಅರಣ್ಯಕ್ಕೆ ಪ್ರವೇಶಿಸುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿ ಮೇಯುವ ಜಿಂಕೆಗಳ ಹಿಂಡು, ಆನೆ, ಕಾಡೆಮ್ಮೆ, ಹಂದಿಗಳು ಕಾಣಿಸಿಕೊಳ್ಳುತ್ತಿದ್ದವು. ಇವೆಲ್ಲ ಬೆಂಕಿಗೆ ಹೆದರಿ ದಿಕ್ಕಾಪಾಲಾಗಿ ಹೋಗಿವೆ.

ರಾಜಕೀಯ ಬೆರೆಸಿದ್ರೆ ಉತ್ತರಿಸಲ್ಲ

ಬೆಂಗಳೂರು: ಕೇಂದ್ರ ಸರ್ಕಾರದ ಜತೆಗೆ ಸಂಘರ್ಷಕ್ಕೆ ಇಳಿಯುವುದಿಲ್ಲ, ರಾಜ್ಯ ಬಿಜೆಪಿ ನಾಯಕರ ರಾಜಕೀಯ ಪ್ರೇರಿತ ಹೇಳಿಕೆಗಳಿಗೆ ಉತ್ತರಿಸುವುದಿಲ್ಲ ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸೋಮವಾರ ಐಪಿಎಸ್ ಅಧಿಕಾರಿಗಳ ವಾರ್ಷಿಕ ಸಮಾವೇಶ ಉದ್ಘಾಟಿಸಿದ ಸಿಎಂ, ಏರೋ ಇಂಡಿಯಾ ವೇಳೆ ಕಾರುಗಳಿಗೆ ಬೆಂಕಿ ಮತ್ತು ಬಂಡೀಪುರ ಕಾಳ್ಗಿಚ್ಚು ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಉತ್ತರಿಸಿದರು. ಈ ಎರಡೂ ವಿಚಾರಗಳಲ್ಲಿ ರಾಜಕೀಯ ಬೆರೆಸುವುದಿಲ್ಲ. ಏರೋ ಇಂಡಿಯಾ ಸುಗಮವಾಗಿ ನಡೆಸಲು ಕೊಟ್ಟ ಸಾಥ್ ಮತ್ತು ಕಾರುಗಳಿಗೆ ಬೆಂಕಿ ಬಿದ್ದ ಬಳಿಕ ಕೈಗೊಂಡ ಕ್ರಮಗಳ

ಮಾಹಿತಿ ಪಡೆದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಂಡೀಪುರದ ಕಾಳ್ಗಿಚ್ಚು ನಂದಿಸಲು ಕೇಂದ್ರ ಸಹಾಯ ಮಾಡುತ್ತಿದೆ. ಇಂಥ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಜತೆಗೆ ಸಂಘರ್ಷ ನಡೆಸಲು ಸಾಧ್ಯವಿಲ್ಲ. ರಾಜ್ಯ ಬಿಜೆಪಿ ನಾಯಕರು ಅಗ್ನಿ ದುರಂತದಲ್ಲಿ ರಾಜಕೀಯ ಬೆರೆಸಿದರೆ ಅವರ ಹೇಳಿಕೆಗೆ ಉತ್ತರಿಸುವುದಿಲ್ಲ ಎಂದರು.

ಬಂಡೀಪುರ ಅಗ್ನಿ ಅವಘಡ ನೈಸರ್ಗಿಕವೋ? ದುರುದ್ದೇಶ ಪ್ರೇರಿತವೋ? ಎನ್ನುವುದರ ಬಗ್ಗೆ ತನಿಖೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು.

| ಪರಮೇಶ್ವರ್ ಉಪಮುಖ್ಯಮಂತ್ರಿ

ಕರಿಘಟ್ಟದ ಕಾಡಿಗೂ ಬೆಂಕಿ

ಶ್ರೀರಂಗಪಟ್ಟಣ: ಕರಿಘಟ್ಟ ಮೀಸಲು ಅರಣ್ಯ ಪ್ರದೇಶಕ್ಕೆ ಭಾನುವಾರ ಸಂಜೆ ಬೆಂಕಿ ಬಿದ್ದು 100 ಎಕರೆಯಷ್ಟು ಅರಣ್ಯಪ್ರದೇಶ ಆಹುತಿಯಾಗಿದೆ. ಅಲ್ಲಾಪಟ್ಟಣ ಗ್ರಾಮದ ಕಡೆಯಿಂದ ಭಾನುವಾರ ಸಂಜೆ 5ರ ಸುಮಾರಿಗೆ ಕಂಡುಬಂದ ಬೆಂಕಿ, ಗಾಳಿಗೆ ಬೆಟ್ಟವನ್ನೆಲ್ಲ ಆವರಿಸಿತು. ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ರಾತ್ರಿ 9.30ರ ವರೆಗೂ ಜಂಟಿ ಕಾರ್ಯಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಹಲಗೂರು ಸಮೀಪದ ಬಸವನಬೆಟ್ಟ ಅರಣ್ಯದಲ್ಲಿ ಸೋಮವಾರ ಕಿಡಿಗೇಡಿಗಳು ಹಚ್ಚಿದ ಬೆಂಕಿಯಿಂದ ಹದಿನೈದು ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ. ಕೆ.ಆರ್. ಪೇಟೆ ತಾಲೂಕು ಬಿಬಿ ಕಾವಲು ವ್ಯಾಪ್ತಿಯ ಅರಣ್ಯದಲ್ಲೂ ಬೆಂಕಿ ಕಾಣಿಸಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಪ್ರಯತ್ನದಿಂದ ಬೆಂಕಿ ನಿಯಂತ್ರಣಕ್ಕೆ ಬಂದಿದೆ.

ಚಾಮುಂಡಿ ಬೆಟ್ಟದಲ್ಲೂ ಅಗ್ನಿಜ್ವಾಲೆ

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸೋಮವಾರ ಬೆಂಕಿ ಬಿದ್ದು, ಕೆಲ ಕಾಲ ಆತಂಕ ಉಂಟಾಗಿದ್ದರೂ ಹೆಚ್ಚಿನ ಅನಾಹುತವಾಗಿಲ್ಲ. ಮೈಸೂರು- ನಂಜನ ಗೂಡು ಮುಖ್ಯರಸ್ತೆಯ ಬಿಜಿಎಸ್ ಸಂಸ್ಥೆಯ

ಖಾಲಿ ಜಾಗದಲ್ಲಿ ಮಧ್ಯಾಹ್ನ 12.30ರಲ್ಲಿ ಬೆಂಕಿ ಕಾಣಿಸಿದೆ. ಬಿಸಿಲು, ಗಾಳಿ ಅಬ್ಬರಕ್ಕೆ ಅಗ್ನಿಜ್ವಾಲೆ ಬೆಟ್ಟದ ತಪ್ಪಲನ್ನು ಪ್ರವೇಶಿಸಿ ಒಂದು ಗುಡ್ಡಕ್ಕೆ ವ್ಯಾಪಿಸಿತು. ತಕ್ಷಣ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ, ಅಗ್ನಿ ಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದರು.

ನಾಲ್ಕೈದು ದಿನ ಗಳಿಂದ ತೀವ್ರ ಪ್ರಯತ್ನ ನಡೆಸಿದ್ದರೂ ಸಂಪೂರ್ಣವಾಗಿ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಸದ್ಯ ಬೆಂಕಿ ನಂದಿಸುವುದು ಕಷ್ಟಕರ ಆದ್ದರಿಂದ ಸಿಎಂ ಆದೇಶದಂತೆ ಪ್ರಥಮ ಬಾರಿಗೆ ಹೆಲಿಕಾಪ್ಟರ್ ಬಳಸಲಾಗುತ್ತಿದೆ. ಇನ್ನೂ ಹೆಚ್ಚಿನ ಹೆಲಿಕಾಪ್ಟರ್ ಅಗತ್ಯ ಬಿದ್ದರೆ ಕಳುಹಿಸಿ ಕೊಡಲಾಗುವುದು.

| ಸತೀಶ್ ಜಾರಕಿಹೊಳಿ ಅರಣ್ಯ ಸಚಿವ

ನಂದಿ ಬೆಟ್ಟದಲ್ಲೂ ಬೆಂಕಿ

ಚಿಕ್ಕಬಳ್ಳಾಪುರ: ಪ್ರವಾಸಿ ತಾಣ ನಂದಿ ಬೆಟ್ಟದಲ್ಲೂ ಕಳೆದ 3-4 ದಿನಗಳಿಂದ ಕಾಳ್ಗಿಚ್ಚಿಗೆ ಅಪಾರ ಪ್ರಮಾಣದ ಸಸ್ಯ ಸಂಪತ್ತು, ಪ್ರಾಣಿ- ಪಕ್ಷಿಗಳು ಸುಟ್ಟು ಹೋಗಿವೆ. ಬೆಟ್ಟದ ತಪ್ಪಲಿನ ಸುಲ್ತಾನ್​ಪೇಟೆ ಅರಣ್ಯದಲ್ಲಿ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, 100 ಎಕರೆಗೂ ಹೆಚ್ಚು ಅರಣ್ಯ ನಾಶವಾಗಿದೆ. ನಂದಿಸಲು ಯತ್ನಿಸಿದರೂ ಆಗಾಗ ಬೆಂಕಿ ಕಾಣಿಸಿಕೊಳ್ಳುತ್ತಿದೆ ಎನ್ನಲಾಗಿದೆ.

ಪ್ರವಾಸಿಗರು ವಾಪಸ್

ಕಾಳ್ಗಿಚ್ಚಿನಿಂದಾಗಿ ಒಂದು ವಾರ ಸಫಾರಿ ಬಂದ್ ಆಗಿದೆ. ಹೀಗಾಗಿ ಬಂಡೀಪುರಕ್ಕೆ ಸಫಾರಿಗೆಂದು ಬರುವ ಹೊರ ರಾಜ್ಯ-ಜಿಲ್ಲೆಗಳ ಪ್ರವಾಸಿಗಳು ನಿರಾಸೆಯಿಂದ ಹಿಂದಿರುಗುತ್ತಿದ್ದಾರೆ.

ಫೋಟೋ ಸಂಶಯ

ಕಾಳ್ಗಿಚ್ಚಿನಲ್ಲಿ ಹುಲಿ, ಮೊಲ, ಜಿಂಕೆ, ಕೋತಿಗಳು ಜೀವಂತವಾಗಿ ಸುಟ್ಟು ಹೋಗಿವೆ ಎಂಬುದನ್ನು ಬಿಂಬಿಸುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವೆಲ್ಲವೂ ಇದೇ ಕಾಡಿನ ದೃಶ್ಯಗಳೇ ಎಂಬುದು ದೃಢಪಟ್ಟಿಲ್ಲ.

ಪರಿಸರ ಪ್ರೇಮಿಗಳ ನೆರವು

ಬೆಂಗಳೂರು, ಮೈಸೂರು, ಮಂಡ್ಯ, ಶ್ರೀರಂಗ ಪಟ್ಟಣ ಹಾಗೂ ಇತರ ಕಡೆಗಳಿಂದ ಬಂದಿರುವ ನೂರಾರು ಪರಿಸರಪ್ರೇಮಿ ಸ್ವಯಂಸೇವಕರು ಅರಣ್ಯ ಇಲಾಖೆಯ ವಾಹನವೇರಿ ಬೆಂಕಿ ಉರಿಯುತ್ತಿರುವ ಕಡೆಗೆ ತೆರಳಿ ಬೆಂಕಿ ನಂದಿಸಲು ಮುಂದಾಗಿದ್ದಾರೆ.

ವೈಮಾನಿಕ ಕಾರ್ಯಾಚರಣೆ

ಸೋಮವಾರ ಸಂಜೆ ಭಾರತೀಯ ವಾಯುಸೇನೆಯ 2 ಹೆಲಿಕಾಪ್ಟರ್​ಗಳ ಮೂಲಕ ಮದ್ದೂರು ವಲಯದ ಹಿರಿಕೆರೆ, ಕೆಂಪುಸಾಗರ ಕೆರೆಗಳಿಂದ ನೀರು ಸಂಗ್ರಹಿಸಿ ಬೆಂಕಿ ಗೋಪಾಲಸ್ವಾಮಿ ಬೆಟ್ಟ ವಲಯಾರಣ್ಯ ಪ್ರದೇಶ ಹಾಗೂ ಇತರ ಸ್ಥಳಗಳಿಗೆ 9ರಿಂದ 10 ಸುತ್ತು ನೀರು ಹಾಕಲಾಯಿತು. ಪ್ರತಿ ಸುತ್ತಿನಲ್ಲೂ 2 ಸಾವಿರ ಲೀ. ನೀರು ಹಾಕಲಾಯಿತು. ಕಾಳ್ಗಿಚ್ಚು ನಂದಿಸಲು ಮೊದಲ ಬಾರಿಗೆ ಹೆಲಿಕಾಪ್ಟರ್​ಗಳನ್ನು ಬಳಸಲಾಗಿದೆ. ಮಂಗಳವಾರ ಬೆಳಗ್ಗೆ 6.30ಕ್ಕೆ ಮತ್ತೆ ಹೆಲಿಕಾಪ್ಟರ್ ಮೂಲಕ ಬೆಂಕಿ ನಂದಿಸುವ ಕಾರ್ಯಾಚರಣೆ ಮಾಡಲಾಗುತ್ತದೆ. ಜತೆಗೆ ಮತ್ತೊಂದು ಹೆಲಿಕಾಪ್ಟರ್ ನೀಡುವಂತೆ ವಾಯುಸೇನೆಗೆ ಮನವಿ ಸಲ್ಲಿಸಿದ್ದೇವೆ ಎಂದು ಪಿಸಿಸಿಎಫ್ ಪುನಟಿ ಶ್ರೀಧರ್ ತಿಳಿಸಿದ್ದಾರೆ.

ಕಪ್ಪತಗುಡ್ಡಕ್ಕೆ ಬೆಂಕಿ ಹೊತ್ತಿ ಹಾನಿ

ಮುಂಡರಗಿ/ಹುಬ್ಬಳ್ಳಿ: ತಾಲೂಕಿನ ಕಲಕೇರಿ- ಬಾಗೇವಾಡಿ ರಸ್ತೆಯ ಕಣವಿ ದುರುಗಮ್ಮ ದೇವಸ್ಥಾನ ಬಳಿಯ ಆಯುರ್ವೆದ ಸಸ್ಯಕಾಶಿ ಕಪ್ಪತಗುಡ್ಡಕ್ಕೆ ಸೋಮವಾರ ಸಂಜೆ ಬೆಂಕಿ ತಗುಲಿ 12 ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ. ಕಪ್ಪತಗುಡ್ಡದಲ್ಲಿನ ಔಷಧೀಯ ಸಸ್ಯಗಳು, ಬೆಲೆ ಬಾಳುವ ಗಿಡ-ಮರಗಳು ಸುಟ್ಟು ನಾಶವಾಗಿವೆ. ವನ್ಯಜೀವಿಗಳೂ ಬೆಂಕಿಗಾಹುತಿ ಆಗಿವೆ ಎನ್ನಲಾಗಿದೆ. ಭಾನುವಾರ ಮಧ್ಯರಾತ್ರಿ ಹಿರೇವಡ್ಡಟ್ಟಿ ಭಾಗದಲ್ಲಿ ಕಪ್ಪತಗುಡ್ಡದ 20 ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿ ಆಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲೂ ಕಾಳ್ಗಿಚ್ಚು ಹೊತ್ತಿಕೊಂಡಿದ್ದು ಅಗ್ನಶಾಮಕ ದಳ ಬೆಂಕಿಯನ್ನು ನಂದಿಸಿದೆ.

Stay connected

278,753FansLike
588FollowersFollow
625,000SubscribersSubscribe

ವಿಡಿಯೋ ನ್ಯೂಸ್

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...