ವಿಜಯಪುರ: ಎಂಇಎಸ್ ಪುಂಡಾಟಿಕೆ ವಿರುದ್ಧ ನೀಡಲಾದ ರಾಜ್ಯ ಬಂದ್ ಕರೆ ಕೇವಲ ಪ್ರತಿಭಟನೆಗೆ ಮಾತ್ರ ಸೀಮಿತವಾತು.
ಕರ್ನಾಟಕ ರಕ್ಷಣಾ ವೇದಿಕೆ (ಎಚ್. ಶಿವರಾಮೇಗೌಡರ ಬಣ) ನೀಡಿದ ಬಂದ್ ಕರೆ ಹಿನ್ನೆಲೆ ಸಂಘಟನೆ ಕಾರ್ಯಕರ್ತರು ಶನಿವಾರ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧ್ಯಕ್ಷ ಶೇಷರಾವ್ ಮಾನೆ ಮಾತನಾಡಿ, ಎಂಇಎಸ್ ಕಾರ್ಯಕರ್ತರು ಪದೇ ಪದೇ ಪುಂಡಾಟಿಕೆ ಮೆರೆಯುತ್ತಿದ್ದಾರೆ. ರಾಜ್ಯ ಸರ್ಕಾರ ಇಂಥವರನ್ನು ಮಟ್ಟ ಹಾಕುವಲ್ಲಿ ವಿಫಲವಾಗುತ್ತಿದೆ. ಇನ್ನಾದರೂ ಕ್ರಮ ಕೈಗೊಳ್ಳದೇ ಹೋದರೆ ಇನ್ನಷ್ಟು ಉಗ್ರ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದರು.
ಜಿಲ್ಲಾ ಗೌರವಾಧ್ಯಕ್ಷ ಎಂ.ಎಂ. ಖಲಾಸಿ ಮಾತನಾಡಿ, ಕನ್ನಡದ ಅಸ್ಮಿತೆ ಉಳಿಯಲು ಬೆಳೆಯಲು ಜನ್ಮತಳೆದ ರಾಜ್ಯದ ಕನ್ನಡಪರ ಸಂಘಟನೆಗಳು ನಾಡು, ನುಡಿ, ಜಲ, ಪರಿಸರ ಸಂರಕ್ಷಣೆಗೆ ಬದ್ದವಾಗಿ ಕೆಲಸ ಮಾಡಬೇಕು. ನಾಡಿನ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು. ಹೋರಾಟಕ್ಕೆ ಅಣಿಯಾಗಬೇಕು. ಅನ್ಯಭಾಷಿಕರ ಹಾವಳಿಗೆ ಕಡಿವಾಣ ಹಾಕಬೇಕೆಂದರು.
ಸಾಹಿತಿ ಇಂದುಮತಿ ಲಮಾಣಿ ಮಾತನಾಡಿ, ಎಂಇಎಸ್ ಪುಂಡಾಟಿಕೆ ಸಹಿಸಿಕೊಂಡು ಇರಲಾಗುವುದಿಲ್ಲ. ಇನ್ಮುಂದೆ ಮೌನ ಮುರಿದು ಹೋರಾಟಕ್ಕೆ ಇಳಿಯುವುದು ಅನಿವಾರ್ಯ ಎಂದರು.
ರಾಜ್ಯ ಸಂಚಾಲಕ ಸಾಧಿಕ ಶೇಖ, ಮುಖಂಡರಾದ ಮೈನುದ್ದೀನ ವಾಲಿಕಾರ, ಡಾ.ಎನ್.ಐ. ಪಟೇಲ, ಆರ್.ಎಚ್. ಕೇಶವಾಪೂರ, ವಸಂತರಾವ ಕುಲಕರ್ಣಿ, ಕೆ.ಕೆ. ಬನ್ನಟ್ಟಿ, ಪ್ರಕಾಶ ನಡುವಿನಕೇರಿ, ಭಾರತಿ ಟಂಕಸಾಲಿ, ಜಯಶ್ರೀ ಸುರಪುರ, ವಿಜಯಾ ಬಿರಾದಾರ, ಮಂಗಲಾ ರಾಠೋಡ, ಕವಿತಾ ರಾಠೋಡ, ರೇಣುಕಾ ಕಟ್ಟಿ, ಕಲ್ಲವ್ವ ಹೊಸಮನಿ, ಜಯಶ್ರೀ ನಂದಿಕೋಲ, ಕಲ್ಪನಾ ಹೊಸಮನಿ, ಭಾರತಿ ಕುಂದನಗಾರ, ಸುರೇಶ ಆರ್. ಹೊಸಮನಿ, ಮೋಹನ ರಾಠೋಡ, ಪ್ರೊ. ದೊಡ್ಡಣ್ಣ ಬಜಂತ್ರಿ ಮತ್ತಿತರರಿದ್ದರು.