More

    ಅದೊಂದು ಕಾರಣಕ್ಕೆ ಅದ್ಧೂರಿಯಾಗಿ ನಡೆಯಿತು ಗಿಳಿಗಳ ಮದುವೆ!

    ಮಧ್ಯಪ್ರದೇಶ: ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಕೋಳಿ, ಕೋತಿ, ಕಪ್ಪೆಗಳಿಗೆ ಮದುವೆ ಮಾಡಿರುವುದನ್ನು ಈ ಹಿಂದೆ ಅನೇಕ ಬಾರಿ ಕೇಳಿದ್ದೇವೆ. ಇದೀಗ ಇಲ್ಲೊಂದು ಕಡೆ ಗಿಳಿಗಳ ಮದುವೆ ನಡೆದಿದೆ. ಅಚ್ಚರಿಯಾದ್ರು ಸತ್ಯ! ಮಧ್ಯಪ್ರದೇಶದ ಕರೇಲಿಯಲ್ಲಿ ಗಿಳಿಗಳಿಗೆ ಭಾರತೀಯ ಸಾಂಪ್ರದಾಯಿಕ ಪದ್ಧತಿಯೊಂದಿಗೆ ವಿವಾಹ ಕಾರ್ಯಕ್ರಮ ನಡೆದಿದೆ.

    ಪಿಪಾರಿಯಾ ನಿವಾಸಿ ರಾಮ ಸ್ವರೂಪ್ ಪರಿಹಾರ್ ಎಂಬುವವರು ಮೈನಾ ಎಂಬ ಹೆಸರಿನ ಗಿಳಿಯನ್ನು ಮುದ್ದಾಗಿ ಸಾಕಿದ್ದರು. ಅಂತೆಯೇ ಬಾದಲ್ ಲಾಲ್ ವಿಶ್ವಕರ್ಮ ಎಂಬುವವರು ಕೂಡ ಗಿಳಿಯೊಂದನ್ನು ಸಾಕಿದ್ದರು. ಗಿಳಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ಸಾಕಿದ್ದ ಇವರಿಬ್ಬರು, ಈ ಗಿಳಿಗಳ ವಂಶ ಬೆಳೆಯಬೇಕೆಂಬ ಕಾರಣಕ್ಕೆ ಮದುವೆ ಮಾಡಲು ಮುಂದಾಗಿದ್ದಾರೆ. ಅದರಂತೆ ಎರಡು ಗಿಳಿಗಳ ಜಾತಕ ನೋಡಿ, ವಿವಾಹ ಮಾಡಿದ್ದಾರೆ. ಈ ವಿಶಿಷ್ಟ ಮದುವೆ ಕಾರ್ಯಕ್ರಮಕ್ಕೆ ಕರೇಲಿ ಜಿಲ್ಲೆಯ ಪಿಪಾರಿಯಾ ಗ್ರಾಮದ ಜನರು ಸಾಕ್ಷಿಯಾಗಿದ್ದರು.

    ಅದೊಂದು ಕಾರಣಕ್ಕೆ ಅದ್ಧೂರಿಯಾಗಿ ನಡೆಯಿತು ಗಿಳಿಗಳ ಮದುವೆ!

    ಗಿಳಿಗಳನ್ನು ಮದುವೆ ಮಂಟಪಕ್ಕೆ ದಿಬ್ಬಣದ ಮೂಲಕ ಕರೆತರಲಾಗಿದೆ. ಈ ವೇಳೆ ಎರಡೂ ಗಿಳಿಗಳ ಕಡೆಯವರು ಸಂಭ್ರಮದಿಂದ ಡೋಲಿನ ಶಬ್ದಕ್ಕೆ ಕುಣಿಯುತ್ತಾ ದಿಬ್ಬಣದಲ್ಲಿ ಬಂದಿದ್ದಾರೆ. ಇದೀಗ ಗಿಳಿಗಳ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಜನರು ಕಮೆಂಟ್ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts