ಬಂದ್​ಗೆ ವ್ಯಾಪಕ ಬೆಂಬಲ

ಗುಳೇದಗುಡ್ಡ: ಪೆಟ್ರೋಲ್, ಡೀಸೆಲ್ ದರ ಏರಿಕೆ ಹಾಗೂ ಹಣದುಬ್ಬರ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷ ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್​ಗೆ ಗುಳೇದಗುಡ್ಡದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಂದ್ ಹಿನ್ನೆಲೆ ಬೆಳಗ್ಗೆಯಿಂದ ಮಾರುಕಟ್ಟೆ, ಹೋಟೆಲ್, ಅಡತಿ ಅಂಗಡಿಗಳು ಬಾಗಿಲು ತೆರೆಯಲಿಲ್ಲ. ಶಾಲೆ ಕಾಲೇಜುಗಳಿಗೆ ರಜೆ ಘೊಷಿಸಲಾಗಿತ್ತು. ಚಿತ್ರಮಂದಿರಗಳ ಮಾಲೀಕರು ಮಧ್ಯಾಹ್ನದ ಪ್ರದರ್ಶನ ನಿಲ್ಲಿಸಿ ಬಂದ್​ಗೆ ಬೆಂಬಲ ಸೂಚಿಸಿದರು. ಪಟ್ಟಣದ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಔಷಧ ಅಂಗಡಿಗಳು, ಆಸ್ಪತ್ರೆಗಳ ಸೇವೆಯಲ್ಲಿ ಯಾವುದೇ ತೊಂದರೆಯುಂಟಾಗಲಿಲ್ಲ.

ಕಾಂಗ್ರೆಸ್ ಮುಖಂಡ ಸಂಜಯ ಬರಗುಂಡಿ, ಹೊಳಬಸು ಶೆಟ್ಟರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜು ಜವಳಿ, ಪ್ರಕಾಶ ಮೇಟಿ, ಪುರಸಭೆ ಮಾಜಿ ಅಧ್ಯಕ್ಷ ವೈ.ಆರ್. ಹೆಬ್ಬಳ್ಳಿ, ಜಮೀರ ಮೌಲವಿ ಮಾತನಾಡಿದರು.

ಪುರಸಭೆ ಎದುರು ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಕಂಠಿಪೇಟೆ, ಚೌಬಜಾರ, ಯಾನಮಶೆಟ್ಟಿ ಅಂಗಡಿ, ಭಂಡಾರಿ ಕಾಲೇಜ್ ವೃತ್ತ, ಹರದೊಳ್ಳಿ ಮಾರ್ಗದಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿದರು.

ಗೋಪಾಲ ಭಟ್ಟಡ, ಸಂಗಬಸಪ್ಪ ಚಿಂದಿ, ಸಿ.ಎಂ. ಚಿಂದಿ, ರಮೇಶ ಬೂದಿಹಾಳ, ಈಶ್ವರಪ್ಪ ರಾಜನಾಳ, ವಿನೋದ ಮದ್ದಾನಿ, ಮಹಾಂತೇಶ ಸರಗಣಾಚಾರಿ, ರಾಚಪ್ಪ ಸಾರಂಗಿ, ವಿಠ್ಠಲ ಕಾವಡೆ, ಶಿವನಯ್ಯ ಮಳ್ಳಿಮಠ, ಪ್ರಕಾಶ ಗೌಡರ, ಜುಗಲಕಿಶೋರ ಭಟ್ಟಡ, ಅಮರೇಶ ಕವಡಿಮಟ್ಟಿ, ಪ್ರಕಾಶ ಮುರುಗೋಡ, ಹನುಮಂತ ಗೌಡರ, ಮುಬಾರಕ ಮಂಗಳೂರು, ಚಿದಾನಂದ ಕಾಟವಾ ಇತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.