Tuesday, 20th November 2018  

Vijayavani

ಕಬ್ಬು ಬೆಳಗಾರರ ಜತೆ ಸಿಎಂ ಸಭೆ - ವಿಧಾನಸೌಧಕ್ಕೆ ಆಗಮಿಸಿದ ರೈತ ಮುಖಂಡರು - ಕಬ್ಬಿನ ಬಾಕಿ ಹಣ ಕೊಡಿಸ್ತಾರಾ ಎಚ್‌ಡಿಕೆ?        ಉ-ಕ ರೈತರ ಹೋರಾಟಕ್ಕೆ ಜಾತಿ ಲೇಪನ - ನಾಲಾಯಕ್ ಅನ್ನೋದು ಕೆಟ್ಟ ಪದ ಅಲ್ಲ - ಸಿಎಂ ವಿರುದ್ಧ ಮತ್ತೆ ಗುಡುಗಿದ ಯಡಿಯೂರಪ್ಪ        ಸಿಂಪಲ್ ಮ್ಯಾರೇಜ್ ಆಗೋರಿಗೆ ಶಾಕ್‌- ಮುಜರಾಯಿ ದೇವಸ್ಥಾನದಲ್ಲಿ ಮದುವೆಗೆ ಬ್ರೇಕ್‌ - ಅರ್ಚಕರ ಮನವಿಗೆ ಇಲಾಖೆ ನಿರ್ಧಾರ        ದಿಗ್ಗಜರಿಂದಲೇ ಬಿಬಿಎಂಪಿಗೆ ಬಾಕಿ - ಜಾರ್ಜ್‌, ಹ್ಯಾರೀಸ್‌, ಕುಪೇಂದ್ರರೆಡ್ಡಿ ಕಟ್ಟಿಲ್ಲ ಟ್ಯಾಕ್ಸ್‌ - ಪಾಲಿಕೆ ದಿವಾಳಿಗೆ ಕಾರಣರಾದ್ರಾ ನಾಯಕರು        ಛತ್ತಿಸ್‌ಗಡದಲ್ಲಿ ಎರಡನೇ ಹಂತದ ಮತದಾನ -72 ವಿಧಾನಸಭಾ ಕ್ಷೇತ್ರಗಳಲ್ಲಿ ವೋಟಿಂಗ್‌ - ಮಧ್ಯ ಪ್ರದೇಶದಲ್ಲಿ ಪ್ರಧಾನಿ ರ‍್ಯಾಲಿ        ಬೆಂಗಳೂರಿಗೆ ಬಂದಿಳಿದ ನವಜೋಡಿ - ಮುಂಬೈನಿಂದ ಸಿಲಿಕಾನ್‌ ಸಿಟಿಗೆ ರಣವೀರ್‌, ದೀಪಿಕಾ - ನಾಳೆ ಲೀಲಾ ಪ್ಯಾಲೇಸ್‌ನಲ್ಲಿ ರಿಸೆಪ್ಷನ್       
Breaking News

ಬನವಾಸಿಯಲ್ಲಿ ಕದಂಬೋತ್ಸವ ಫೆ. 2ರಿಂದ 

Monday, 29.01.2018, 1:50 AM       No Comments

 

ಶಿರಸಿ: ಬನವಾಸಿಯಲ್ಲಿ ಪೆ. 2 ಮತ್ತು 3ರಂದು ನಡೆಯುವ ಕದಂಬೋತ್ಸವದ ಆಮಂತ್ರಣ ಪತ್ರಿಕೆಯನ್ನು ಶಾಸಕ ಶಿವರಾಮ್ ಹೆಬ್ಬಾರ್ ಬಿಡುಗಡೆ ಮಾಡಿದರು.

ತಹಸೀಲ್ದಾರ್ ಕಚೇರಿಯಲ್ಲಿ ಭಾನುವಾರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಶಾಸಕರು, ಬನವಾಸಿ ಪ್ರಾಧಿಕಾರ ರಚನೆ ನಂತರ ನಡೆಯುತ್ತಿರುವ ಮೊದಲ ಉತ್ಸವ ಇದಾಗಿದೆ. ಉತ್ಸವಕ್ಕೆ ಈ ವರ್ಷ ಹೆಚ್ಚಿನ ಕಲಾವಿದರು ಆಗಮಿಸುತ್ತಿದ್ದು, ಪ್ರೇಕ್ಷಕರ ಕೊರತೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಎಲ್ಲ ಕಡೆ ಉತ್ತಮ ಪ್ರಚಾರ ನೀಡಬೇಕು ಎಂದು ಸೂಚಿಸಿದರು.

ಉಪ ವಿಭಾಗಾಧಿಕಾರಿ ರಾಜು ಮೊಗವೀರ್ ಮಾತನಾಡಿ, ಫೆ. 31ರಂದು ಬೆಳಗ್ಗೆ 11ಕ್ಕೆ ಗುಡ್ನಾಪುರ ರಾಣಿ ನಿವಾಸದಿಂದ ಕದಂಬ ಜ್ಯೋತಿ ಹೊರಡಲಿದೆ. 2ರಂದು ಮಧ್ಯಾಹ್ನ 2.30ಕ್ಕೆ ಮಧುಕೇಶ್ವರ ದೇವಸ್ಥಾನದಿಂದ ಕಲಾ ತಂಡಗಳ ಮೆರವಣಿಗೆ ನಡೆಯಲಿದೆ. ಈವರ್ಷದ ಪಂಪ ಪ್ರಶಸ್ತಿಯನ್ನ ನಾಡೋಜ ಡಾ. ಕೆ ಎಸ್. ನಿಸ್ಸಾರ್ ಅಹಮದ್ ಅವರಿಗೆ ನೀಡಲಾಗುತ್ತಿದೆ ಎಂದರು.

ಸಭೆಯಲ್ಲಿ ಜಿ.ಪಂ. ಸದಸ್ಯರಾದ ಬಸವರಾಜ್ ದೊಡ್ಮನಿ, ಉಷಾ ಹೆಗಡೆ, ತಾಪಂ ಅಧ್ಯಕ್ಷೆ ಶ್ರೀಲತಾ ಕಾಳೇರ್​ವುನೆ, ಎಡಿಎಸ್​ಪಿ ಡಿ.ಎಲ್. ನಾಗೇಶ್ ಇತರರು ಇದ್ದರು.

ಕಾರ್ಯಕ್ರಮದಲ್ಲಿ ಏನೇನಿದೆ: ಪೆ. 2ರಂದು ಸಂಜೆ 4ಕ್ಕೆ. ಸುಮಾ ರವೀಂದ್ರ ಮಂಚಿಕೆರೆ ಅವರಿಂದ ದೇಶಭಕ್ತಿ ಗೀತೆ, ಬೆಂಗಳೂರಿನ ಪ್ರತಿಭಾ ಹೆಗಡೆ ಅವರಿಂದ ಶಾಸ್ತ್ರೀಯ ಸಂಗೀತ, ಅನಿತಾ ನಾಯಾರಣ ಕುಲ್ಕರ್ಣಿ ಅವರಿಂದ ಸಿತಾರ ವಾದನ, ಮಾಧವಿ ರಮಾ ಗೌಡ ಅವರ ತಂಡದಿಂದ ಡೊಳ್ಳುಕುಣಿತ ನಂದಿರಾವ್ ಗುಜ್ಜಾರ್ ತಂಡದಿಂದ ಇನಿ-ದನಿ ಕಾರ್ಯಕ್ರಮ, ಅನುರಾಧಾ ಹೆಗಡೆ ತಂಡದಿಂದ ನೃತ್ಯ ರೂಪಕ, ಗುರುಕಿರಣ್ ಮತ್ತು ಚೈತ್ರಾ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.

ಪೆ. 3ರಂದು ಸಂಜೆ 4ಕ್ಕೆ ಉಡುಪಿಯ ಯಕ್ಷಸಿರಿ ಮಹಿಳಾ ತಂಡದಿಂದ ಯಕ್ಷಗಾನ, ಶಶಿಕಲಾ ದಾನಿ ಅವರಿಂದ ಜಲತರಂಗ, ಕವಿತಾ ಹೆಬ್ಬಾರ್ ತಂಡದಿಂದ ಜನಪದ ನೃತ್ಯ, ಸುಮಾರಾಜ್ ಕುಮಾರ್ ಅವರಿಂದ ಮಾತನಾಡುವ ಗೊಂಬೆ, ಸೃಷ್ಠಿ ತಂಡದಿಂದ ನೃತ್ಯ ರೂಪಕ, ಟಿಬೇಟಿಯನ್ ಕಾಲನಿ ಕಲಾವಿದರಿಂದ ಟಿಬೇಟಿಯನ್ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ನಡೆಯಲಿದೆ.

ಸಭಾಕಾರ್ಯಕ್ರಮದ ಬಳಿಕ ಸ್ಮಾರ್ಟ್ ಗ್ರೂಪ್ ತಂಡದಿಂದ ಆಧುನಿಕ ನೃತ್ಯ, ಅರ್ಚನಾ ಉಡುಪಾ ಮತ್ತು ಸಹ ಕಲಾವಿದರಿಂದ ಸುಮಧುರ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಬೆಳಗ್ಗೆ 10ಕ್ಕೆ ಪಂಪಕಾವ್ಯ ಮರು ಓದು ವರ್ತಮಾನ ಅನುಸಂಧಾನ ಗೋಷ್ಠಿ ನಡೆಯಲಿದೆ. ಕುವೆಂಪು ವಿವಿ ಪ್ರಾಧ್ಯಾಪಕ ಡಾ. ಕೆ. ಕೇಶವ ಶರ್ವ, ಉಪನ್ಯಾಸಕ ಡಾ. ಮೋಹನ ಚಂದ್ರಗುತ್ತಿ, ಸಾಹಿತಿ ಸುಬ್ರಾಯ್ ಮತ್ತಿಗಾರ ಭಾಗವಹಿಸಲಿದ್ದಾರೆ.

2ನೇ ಗೋಷ್ಠಿಯಲ್ಲಿ ಬನವಾಸಿ ಕದಂಬರ ಚಾರಿತ್ರಿ್ಯ ಸಂಸ್ಕೃತಿ ವರ್ತಮಾನ ನೋಟ ಎನ್ನುವ ವಿಷಯದ ಮೇಲೆ ಅಭಿಪ್ರಾಯ ಮಂಡನೆ ನಡೆಯಲಿದೆ. ಇತಿಹಾಸ ತಜ್ಞ ಡಾ. ಎ.ಕೆ.ಶಾಸ್ತ್ರಿ, ಕರ್ನಾಟಕ ವಿವಿ ಪ್ರಾಧ್ಯಾಪಕ ಡಾ. ಶ್ರೀನಿವಾಸ ಪಾಡಿಗಾರ, ನಿವೃತ್ತ ಅಧೀಕ್ಷಕ ಎಸ್.ಎಸ್. ನಾಯಕ ಕುಮುಟಾ ಪಾಲ್ಗೊಳ್ಳುವರು.

ಉತ್ಸವದ ಹಿನ್ನೆಲೆಯಲ್ಲಿ ಪೆ. 31ರಂದು ಮಧ್ಯಾಹ್ನ 3ಕ್ಕೆ. ಬನವಾಸಿ ಜಯಂತಿ ಪ್ರೌಢಶಾಲೆಯಲ್ಲಿ ಕ್ರೀಡಾ ಸ್ಪರ್ಧೆಗಳು ಜರುಗಲಿವೆ. ಪುರುಷರಿಗೆ ಕಬಡ್ಡಿ ಮತ್ತು ವಾಲಿಬಾಲ್ ಮುಕ್ತ ಪಂದ್ಯಾವಳಿ, ಮಹಿಳೆಯರಿಗೆ ಪಟ್ಟದ ರಾಣಿ, ತಲೆಮೇಲೆ ಬಿಂದಿಗೆ ಹೊತ್ತು ಓಡುವುದು, ಮಡಿಕೆ ಒಡೆಯುವ ಸ್ಪರ್ಧೆ, ಥ್ರೋ ಬಾಲ್, ಹಗ್ಗ ಜಗ್ಗಾಟ ಸ್ಪರ್ಧೆ ಏರ್ಪಡಿಸಲಾಗಿದೆ

ಉತ್ಸವ ವಿಶೇಷ ಆಕರ್ಷಣೆಯಾಗಿ ಅನಾನಸ್ ಮೇಳ, ಅನಾನಸು ಆಹಾರ ಸ್ಪರ್ಧೆ, ಕಾರ್ಟೂನು ಉತ್ಸವ, ಬನವಾಸಿ ಸಾಕ್ಷ್ಯತ್ರ ಸ್ಪರ್ಧೆ ಏರ್ಪಡಿಸಲಾಗಿದೆ.

Leave a Reply

Your email address will not be published. Required fields are marked *

Back To Top