ಚಿಮ್ಮಡ: ಗ್ರಾಮದ ಹಟಗಾರ ಸಮಾಜದ ಆರಾಧ್ಯದೇವತೆ ಶ್ರೀ ಬನಶಂಕರಿದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ವಿಜ್ರಂಭಣೆಯಿಂದ ಜರುಗಿತು.
ಬೆಳಗ್ಗೆ 6 ಗಂಟೆಗೆ ಹೋಮ ರುದ್ರಾಭಿಷೇಕ, ನವಗ್ರಹ ಪೂಜೆ ಹಾಗೂ ದೇವಿಯ ಉಡಿತುಂಬುವ ಕಾರ್ಯಕ್ರಮ ನಡೆಯಿತು. ಬನಶಂಕರಿದೇವಿ ದೇವಸ್ಥಾನ ಸಮಿತಿ ವತಿಯಿಂದ ಮದ್ಯಾಹ್ನ ಹೋಳಿಗೆ, ಕಿಚಡಿ ಮಹಾಪ್ರಸಾದ ವಿತರಿಸಲಾಯಿತು. ಸಂಜೆ 5 ಗಂಟೆಗೆ ಕರಡಿ ಮಜಲು, ಡೊಳ್ಳು ಕುಣಿತ, ಬಾಜಾ ಬಜಂತ್ರಿ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬನಶಂಕರಿ ಶಂಭೋಕೋಲ ಘೋೀಷಣೆ ಕೂಗುತ್ತ ರಥೋತ್ಸವ ನೆರವೇರಿಸಲಾಯಿತು.
ರಾತ್ರಿ 10 ಗಂಟೆಗೆ ಶ್ರೀ ಬನಶಂಕರಿದೇವಿ ಸಾಂಸ್ಕೃತಿಕ ವೇದಿಕೆ ಹಾಗೂ ಶ್ರೀ ಬನಶಂಕರದೇವಿ ದೇವಸ್ಥಾನ ಸಮಿತಿಯ ಸಯುಂಕ್ತಾಶ್ರಯದಲ್ಲಿ ವಿಎಂಜಿಎಸ್ ಮೆಲೋಡಿಸ್ ಮಹಾಲಿಂಗಪೂರರವರಿಂದ ಸಂಗೀತೋತ್ಸವ, ಜನಪದ ರಸಮಂಜರಿ ಕಾರ್ಯಕ್ರಮ ಜರುಗಿತು.
TAGGED:ಚಿಮ್ಮಡ