ಪ್ರಧಾನಿ ಮೋದಿ ಅವಹೇಳನ ದೂರು ದಾಖಲು

ಬಾಳೆಹೊನ್ನೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿಯಾಗಿ ವಾಯ್್ಸ ರೆಕಾರ್ಡ್ ಮಾಡಿ ವ್ಯಾಟ್ಸ್​ಆಪ್ ಗ್ರೂಪ್​ನಲ್ಲಿ ಸಂದೇಶ ರವಾನಿಸಿದ್ದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡ ಎಮ್ಮೇನಹಡ್ಲು ಎಂ.ಎಸ್.ಪ್ರವೀಣ್​ಕುಮಾರ್ ವಿರುದ್ಧ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಸೆಯ ರೇವಣ್ಣ ಗೌಡ ಎಂಬುವವರು ಠಾಣೆಗೆ ಫೆ.28ರಂದು ದೂರು ನೀಡಿದ್ದು, ಮಾ.1ರಂದು ಪ್ರವೀಣ್​ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 1860 (505/1/ಬಿ) ಅಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.