ಜೀವನದಲ್ಲಿ ಪುಣ್ಯ ಪ್ರಾಪ್ತಿಗೆ ಆತ್ಮಶುದ್ಧಿ ಅವಶ್ಯ

ಬಾಳೆಹೊನ್ನೂರು: ಜೀವನದಲ್ಲಿ ಅಧ್ಯಾತ್ಮ ಸಂಪತ್ತೇ ಶಾಶ್ವತವಾದುದು. ಆತ್ಮ ಶುದ್ಧಿಯೇ ಪುಣ್ಯದ ಮೂಲ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಶ್ರೀ ರಂಭಾಪುರಿ ಪೀಠದಲ್ಲಿ ಶ್ರೀ ಸೋಮೇಶ್ವರ ದೇವಾಲಯದ ನೈಋತ್ಯ ಭಾಗದಲ್ಲಿ ಶ್ರೀ ವೀರಾಂಜನೇಯ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿ ಆಶೀರ್ವಚನ ನೀಡಿದರು.

ದೇವರ ಮೇಲಿನ ನಂಬಿಕೆ ಶಾಶ್ವತ ನಂದಾದೀಪ. ಮಹಾಜನರು ನಡೆದು ತೋರಿದ ದಾರಿಯೇ ನಿಜ ಧರ್ಮ. ಧರ್ಮದ ಚುಕ್ಕಾಣಿ ಜೀವನದ ಶ್ರೇಯಸ್ಸಿಗೆ ದಾರಿ ಎಂದು ಅಭಿಪ್ರಾಯಪಟ್ಟರು.

ವಿಶ್ವದ ಎಲ್ಲ ಮನೆಗಳಿಗೂ ದೇವರೊಬ್ಬನೇ ಯಜಮಾನ. ದೇವರು ಎಲ್ಲೆಡೆ ತುಂಬಿ ಹೊಮ್ಮಿದ್ದಾನೆ. ನಾಮರೂಪ ಸಾಕಷ್ಟಿದ್ದರೂ ಮೂಲ ಶಕ್ತಿ ಒಂದೇ. ನಂಬಿಕೆ ಕಳೆದುಕೊಂಡರೆ ಧರ್ಮ, ದೇವರು ಕಾಣಲ್ಲ. ವೀರಾಂಜನೇಯ ಶಕ್ತಿ ಅದ್ಭುತ. ತಲೆಬಾಗಿ ಬಂದವರನ್ನು ಕಾಯುವ ಧರ್ಮ ರಕ್ಷಕ ಎಂದು ಹೇಳಿದರು.

ಎಡೆಯೂರು ಶ್ರೀ ರೇಣುಕ ಶಿವಾಚಾರ್ಯರು, ಕೂಡ್ಲಿಗಿ ಶ್ರೀ ಪ್ರಶಾಂತ ಶಿವಾಚಾರ್ಯರು, ಹಣ್ಣಿಕೇರಿ ಶ್ರೀ ರೇವಣಸಿದ್ಧ ಶಿವಾಚಾರ್ಯರು, ಚಿಪ್ಪಲಕಟ್ಟಿ ಶ್ರೀ ಕಲ್ಲಯ್ಯಸ್ವಾಮಿ ಉಪಸ್ಥಿತರಿದ್ದರು. ಶಾಸ್ತ್ರೋಕ್ತ ಪ್ರತಿಷ್ಠಾಪನೆ ಕಾರ್ಯಗಳನ್ನು ದಾರುಕಾಚಾರ್ಯ ಶಾಸ್ತ್ರಿ ನೆರವೇರಿಸಿದರು.

Leave a Reply

Your email address will not be published. Required fields are marked *