ಕೊಳ್ಳೇಗಾಲ: ತಾಲೂಕಿನ ಜಾಗೇರಿಯ ಶಿಲುವೈಪುರ ಗ್ರಾಮದಲ್ಲಿ ಭಾನುವಾರ ರಾತ್ರಿ ಬಿರುಗಾಳಿ ಸಹಿತ ಸುರಿದ ಮಳೆಗೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಗಿಡಗಳು ಸಂಪೂರ್ಣವಾಗಿ ನೆಲಕಚ್ಚಿದೆ.
ರೈತ ಆರೋಗ್ಯಸ್ವಾಮಿ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಫಸಲು ಮಳೆಯಿಂದ ಹಾನಿಗೊಳಲಾಗಿದೆ. 3 ಎಕರೆ ಜಮೀನಿಗೆ ಕಳೆದ 5 ತಿಂಗಳ ಹಿಂದೆ ಬಾಳೆ ಕೃಷಿ ಮಾಡಿದ್ದರು. ಗಾಳಿ ಸಮೇತ ಮಳೆಗೆ ಸುಮಾರು 1 ಎಕರೆಯಲ್ಲಿದ್ದ 350 ಕ್ಕೂ ಹೆಚ್ಚು ಬಾಳೆ ಗಿಡಗಳು ನೆಲಕ್ಕೆ ಉರುಳಿದೆ.
ಬಾಳೆಗೆ ಮಾರುಕಟ್ಟೆಯಲ್ಲಿ ಉತ್ತಮ ದರ ನಿಗದಿಯಾಗಿತ್ತು. ಸಾಲ-ಸೋಲ ಮಾಡಿ ಬಾಳೆ ನೆಟ್ಟಿದ್ದೆವು. ಆದರೆ, ಗಾಳಿ ಹಾಗೂ ಮಳೆಗೆ ಬಾಳೆ ಫಸಲು ಹಾನಿಯಾಗಿದೆ ಎಂದು ಆರೋಗ್ಯ ಸ್ವಾಮಿ ಅಳಲು ವ್ಯಕ್ತಪಡಿಸಿದ್ದಾರೆ.
TAGGED:Rain