ಕೋಟ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದಲ್ಲಿ ಭಕ್ತರಿಗೆ ಸೇವೆ ಮತ್ತು ಕಾಣಿಕೆ ಸಲ್ಲಿಸಲು ಮಾಡಲಾಗಿದ್ದ ಪೇಟಿಎಂ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಲಾಗಿದೆ. ಪೇಟಿಎಂ ಚೀನಾದ ಹಿಡಿತದಲ್ಲಿ ಇರುವುದರಿಂದ ಇದನ್ನು ಕೈಬಿಡಲಾಗಿದೆ.
ಭಕ್ತರ ಅನುಕೂಲಕ್ಕೆ ಈ ಹಿಂದಿನಿಂದಲೂ ಚಾಲ್ತಿಯಲ್ಲಿದ್ದ ಭೀಮ್ ಮತ್ತು ಗೂಗಲ್ ಪೇ ಮತ್ತು ಕರ್ಣಾಟಕ ಬ್ಯಾಂಕ್ ಕೆಬಿಎಲ್ ಆ್ಯಪ್ ಸೇವೆ ಮುಂದುವರಿಸಲಾಗುವುದು. ಸೇವೆ ಮತ್ತು ಕಾಣಿಕೆ ಸಲ್ಲಿಸಲು ಇವುಗಳನ್ನು ಬಳಸಬೇಕೆಂದು ದೇವಳದ ಅಧ್ಯಕ್ಷ ಕೆ.ಅನಂತಪದ್ಮನಾಭ ಐತಾಳ್ ಮನವಿ ಮಾಡಿದ್ದಾರೆ.