ಐಪಿಎಲ್ ಟೂರ್ನಿ ವೇಳೆ ತಂಬಾಕು, ಮದ್ಯದ ಜಾಹೀರಾತಿಗೆ ನಿರ್ಬಂಧ!: ಕೇಂದ್ರ ಆರೋಗ್ಯ ಸಚಿವಾಲಯದ ಸೂಚನೆ

blank

ನವದೆಹಲಿ: ಸಾರ್ವಜನಿಕರ ಆರೋಗ್ಯದ ಹಿತರಕ್ಷಣೆಯ ಆದ್ಯತೆಯಾಗಿ ಮಾರ್ಚ್ 22ರಂದು ಆರಂಭವಾಗಲಿರುವ ಐಪಿಎಲ್ ಟೂರ್ನಿ ಸೇರಿ ್ರಾಂಚೈಸಿಗಳ ಇತರ ಕಾರ್ಯಕ್ರಮಗಳ ಆಯೋಜನೆ ಸಮಯದಲ್ಲಿ ಕ್ರೀಡಾಂಗಣ ಮತ್ತು ಟಿವಿಯಲ್ಲಿ ತಂಬಾಕು ಉತ್ಪನ್ನ, ಮದ್ಯ ಪ್ರಚಾರದ ಜಾಹೀರಾತುಗಳನ್ನು ನಿಷೇಧಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ, ಐಪಿಎಲ್ ಆಡಳಿತ ಮಂಡಳಿಗೆ ಬರೆದಿರುವ ಪತ್ರದಲ್ಲಿ ಸೂಚನೆ ನೀಡಿದೆ.

ಕಳೆದ ವಾರ ಐಪಿಎಲ್ ಟೂರ್ನಿ ಮುಖ್ಯಸ್ಥ ಅರುಣ್ ಧುಮಾಲ್‌ಗೆ ಪತ್ರ ಕಳುಹಿಸಿರುವ ಕೇಂದ್ರ ಆರೋಗ್ಯ ಸೇವೆಗಳ ಮಹಾನಿರ್ದೇಶಕ (ಡಿಜಿಎಚ್‌ಎಸ್) ಅತುಲ್ ಗೋಯೆಲ್, ಯುವಜನತೆಗೆ ಮಾದರಿಯಾಗಿರುವ ಕ್ರಿಕೆಟಿಗರು ಯಾವುದೇ ರೀತಿಯ ತಂಬಾಕು ಅಥವಾ ಮದ್ಯದ ಜಾಹೀರಾತುಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಬೆಂಬಲ ಸೂಚಿಸದಂತೆಯೂ ತಿಳಿಸಿದ್ದಾರೆ.

ಐಪಿಎಲ್ ಪಂದ್ಯಗಳು ,ಟೂರ್ನಿಗೆ ಸಂಬಂಧಿಸಿದ ಕಾರ್ಯಕ್ರಮಗಳು, ಕ್ರೀಡಾಂಗಣ ಹಾಗೂ ಪಂದ್ಯಗಳ ನೇರಪ್ರಸಾರದ ಅವಧಿಯಲ್ಲಿ ಟಿವಿಯಲ್ಲಿ ಎಲ್ಲ ರೀತಿಯ ತಂಬಾಕು, ಮದ್ಯದ ಉತ್ಪನ್ನಗಳ ಜಾಹೀರಾತುಗಳನ್ನು ನಿಷೇಧಿಸುವ ನಿಯಮಗಳನ್ನು ಐಪಿಎಲ್ನಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ತಿಳಿಸಲಾಗಿದೆ. ಐಪಿಎಲ್ ಭಾರತದಲ್ಲಿ ಅತಿಹೆಚ್ಚು ವೀಕ್ಷಣೆಗೆ ಒಳಪಡುವ ಟೂರ್ನಿಯಾಗಿದ್ದು, ಇದು ಜಾಹೀರಾತುದಾರರಿಗೆ ಉತ್ಪನ್ನಗಳ ಪ್ರಚಾರಕ್ಕೆ ಒಂದು ರೀತಿಯ ವರದಾನವಾಗಿದೆ. ಮದ್ಯ, ತಂಬಾಕು ವರ್ಗಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಬಂಧಿಸಿದ ಉತ್ಪನ್ನಗಳ ಜಾಹೀರಾತಿನಲ್ಲಿ ಪಂದ್ಯದ ವಿಮರ್ಶಕರು ಸೇರಿ ಕ್ರಿಕೆಟಿಗರು ನೇರವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸುವುದನ್ನು ತಡೆಗಟ್ಟಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Share This Article

ನಕಲಿ vs ಅಸಲಿ ಕಲ್ಲಂಗಡಿ ಹಣ್ಣು: ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…

ಬೇಸಿಗೆಯಲ್ಲಿ ಬಿರುಕು ಬಿಟ್ಟ ಪಾದಗಳು ಸುಂದರವಾಗಲು ಇಲ್ಲಿದೆ ಅಲ್ಟಿಮೇಟ್ ಟಿಪ್ಸ್! cracked heels

cracked heels: ಬೇಸಿಗೆಯಲ್ಲಿ ಪಾದಗಳಲ್ಲಿ ಬಿರುಕುಗಳು ಸಾಮಾನ್ಯ ಸಮಸ್ಯೆಯಾಗುತ್ತವೆ. ಸರಿಯಾದ ಆರೈಕೆಯ ಕೊರತೆಯು ಒಣ ಚರ್ಮ…

ಈ ಗಿಡಗಳನ್ನು ನಿಮ್ಮ ಮನೆಯ ಬಳಿ ಬೆಳೆಸಿದರೆ ಸಾಕು ಸೊಳ್ಳೆಗಳು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ! Mosquitoe

Mosquitoes : ಮಕ್ಕಳು ಮತ್ತು ವಯಸ್ಕರು ಸಾಮಾನ್ಯವಾಗಿ ಮನೆಯಲ್ಲಿ ಎದುರಿಸುವ ದೊಡ್ಡ ಕಿರಿಕಿರಿಗಳಲ್ಲಿ ಸೊಳ್ಳೆಗಳು ಕೂಡ…