ಇನ್ನೆರಡು ತಿಂಗಳು 10ಕ್ಕಿಂತ ಹೆಚ್ಚು ಜನ ಸೇರದಂತೆ ನಿಷೇಧಿಸಿ; ಕರೊನಾ ನಿಯಂತ್ರಣಕ್ಕೆ ಇದು ಅಗತ್ಯವೆಂದ ಕಾರ್ಯಪಡೆ

ನವದೆಹಲಿ: ದೇಶಾದ್ಯಂತ ಕರೊನಾ ಎರಡನೇ ಅಲೆ ಅತ್ಯಂತ ಕ್ಷಿಪ್ರಗತಿಯಲ್ಲಿ ಏರುತ್ತಿರುವುದು ಇದೀಗ ಆತಂಕ ಸೃಷ್ಟಿಸಿದ್ದು, ನಿಯಂತ್ರಿಸುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮತ್ತೊಂದೆಡೆ ಕರೊನಾ ನಿಯಂತ್ರಣಕ್ಕಾಗಿ ಲಾಕ್​ಡೌನ್​ ಮಾಡಬೇಕೇ ಬೇಡವೇ ಎಂಬ ಚರ್ಚೆಗಳು ಜಾರಿಯಲ್ಲಿ ಇರುವ ನಡುವೆಯೇ ಕಾರ್ಯಪಡೆಯೊಂದು ಅಗತ್ಯ ಕ್ರಮವೊಂದರ ಬಗ್ಗೆ ಸೂಚನೆ ನೀಡಿದೆ. ದೇಶದಲ್ಲಿ ಕರೊನಾ ನಿಯಂತ್ರಣಕ್ಕೆ ಬರಬೇಕಾದರೆ ಇನ್ನೆರಡು ತಿಂಗಳ ಕಾಲ 10ಕ್ಕಿಂತ ಹೆಚ್ಚು ಜನರು ಸೇರುವಂಥ ಎಲ್ಲ ಒಳಾಂಗಣ ಕಾರ್ಯಕ್ರಮಗಳನ್ನು ನಿಷೇಧಿಸಬೇಕು ಎಂಬುದಾಗಿ ಲ್ಯಾನ್ಸೆಟ್ ಕೋವಿಡ್​-19 ಕಮಿಷನ್ಸ್ ಇಂಡಿಯಾ ಟಾಸ್ಕ್​ಫೋರ್ಸ್​ ತಿಳಿಸಿದೆ. ‘ಮ್ಯಾನೇಜಿಂಗ್ … Continue reading ಇನ್ನೆರಡು ತಿಂಗಳು 10ಕ್ಕಿಂತ ಹೆಚ್ಚು ಜನ ಸೇರದಂತೆ ನಿಷೇಧಿಸಿ; ಕರೊನಾ ನಿಯಂತ್ರಣಕ್ಕೆ ಇದು ಅಗತ್ಯವೆಂದ ಕಾರ್ಯಪಡೆ