More

    ಮನೆಗೇ ಬಂತು ಮತ ಪೆಟ್ಟಿಗೆ

    ಕಾರವಾರ: ಮತ ಪೆಟ್ಟಿಗೆಗಳು ಮತದಾರರ ಮನೆ ಬಾಗಿಲಿಗೆ ಹೋಗುತ್ತಿವೆ.

    ಚುನಾವಣಾ ಆಯೋಗವು ಇದೇ ಮೊದಲ ಬಾರಿಗೆ 80 ವರ್ಷದ ವೃದ್ಧರು ಹಾಗೂ ಅಂಗವಿಕಲರಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡಿದೆ.

    ಜಿಲ್ಲೆಯಲ್ಲಿ ಈ ವರ್ಷಕ್ಕೆ ಸೇರಿದ 4801 ಮತದಾರರು 12 ಡಿ ಫಾರ್ಮ್ ತುಂಬುವ ಮೂಲಕ ಹೆಸರು ನೋಂದಾಯಿಸಿದ್ದಾರೆ.

    ಚುನಾವಣಾ ಆಯೋಗವು ಏ.29 ರಿಂದ ಮೇ 5 ರವರೆಗೆ ಮತದಾನಕ್ಕೆ ಅವಕಾಶ ನೀಡಿದ್ದು, ಜಿಲ್ಲೆಯಲ್ಲಿ ಸೋಮವಾರದಿಂದ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

    ಇದಕ್ಕಾಗಿ ಒಬ್ಬ ಚುನಾವಣಾಧಿಕಾರಿ, ಸಹಾಯಕ ಚುನಾವಣಾ ಅಧಿಕಾರಿ, ಮೈಕ್ರೋ ಅಬ್ಸರ್ವರ್, ಸೆಕ್ಟರ್ ಅಧಿಕಾರಿ, ಒಬ್ಬ ಪೊಲೀಸ್ ಸಿಬ್ಬಂದಿ ಸೇರಿ ಒಟ್ಟು 6 ಜನ ಒಂದು ವಾಹನದಲ್ಲಿ ಹೆಸರು ನೋಂದಾಯಿಸಿದವರು ಮನೆಗಳಿಗೆ ತೆರಳಿ ಮತದಾನಕ್ಕೆ ಮಾಡಿಸಿಕೊಳ್ಳುತ್ತಿದ್ದಾರೆ.

    ಕೆಲ ಕ್ಷೇತ್ರಗಳಲ್ಲಿ ಕಡಿಮೆ ಜನರಿದ್ದು, ಒಂದೇ ದಿನಕ್ಕೆ ಮತದಾನ ಮುಕ್ತಾಯವಾಗಿದೆ. ಇನ್ನು ಕೆಲವೆಡೆ ಎರಡು ಅಥವಾ ಮೂರು ದಿನ ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರತಿ ಮತದಾನವನ್ನೂ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಲಾಗುತ್ತಿದೆ ಎಂದು ಕಾರವಾರ ಕ್ಷೇತ್ರದ ಚುನಾವಣಾಧಿಕಾರಿ ಜಯಲಕ್ಷ್ಮೀ ರಾಯಕೋಡ ತಿಳಿಸಿದ್ದಾರೆ. ಮತ ಹಾಕಿದವರ ಹೆಸರನ್ನು ನಮ್ಮ ಪಟ್ಟಿಯಲ್ಲಿ ಪೋಸ್ಟಲ್ ಬೆಲೆಟ್ ಎಂದು ನಮೂದಿಸುತ್ತೇವೆ. ಕೈಗೆ ಶಾಯಿ ಹಾಕುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    ಮತ ವೆಷ್ಟು..?

    ಹಳಿಯಾಳದಲ್ಲಿ -127, ಕಾರವಾರ-1376, ಕುಮಟಾ- 266, ಭಟ್ಕಳ- 586, ಶಿರಸಿ-864, ಯಲ್ಲಾಪುರ -489 80 ವರ್ಷ ಮೇಲ್ಪಟ್ಟವರು ಅಂಚೆ ಮತದಾನಕ್ಕೆ ಅವಕಾಶ ಕೋರಿದ್ದಾರೆ. ಹಳಿಯಾಳದಲ್ಲಿ- 51 ಕಾರವಾರ-444, ಕುಮಟಾ-73, ಭಟ್ಕಳ- 226, ಶಿರಸಿ- 173, ಯಲ್ಲಾಪುರದಲ್ಲಿ -126 ಜನರು ಮಾತ್ರ ಅಂಚೆ ಮತದಾನದ ಅವಕಾಶ ಕೋರಿದ್ದಾರೆ.
    ಮೊದಲ ದಿನ ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 534 ಜನ ಹಾಗೂ 148 ಅಂಗವಿಕಲರು ಮೊದಲ ದಿನ ಮತ ಚಲಾಯಿಸಿದ್ದಾರೆ.

    ಮತ ದಾನಕ್ಕೆ ಅವಕಾಶ

    ಚುನಾವಣಾ ಆಯೋಗವು ಗುರುತಿಸಿದ ಅಗತ್ಯ ಸೇವೆಯ ಮತದಾರರಿಗೆ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಬಧಪಟ್ಟ ಚುನಾವಣಾಧಿಕಾರಿಗಳ ಕಚೇರಿಯಲ್ಲೇ ಬ್ಯಾಲೆಟ್ ಪೇಪರ್ ಹಾಗೂ ಮತ ಪೆಟ್ಟಿಗೆಗಳನ್ನು ಇರಿಸಲಾಗಿದೆ. ತುರ್ತು ಸೇವೆಯಲ್ಲಿ ನೋಂದಾಯಿತ ಅಧಿಕಾರಿ, ಸಿಬ್ಬಂದಿ ಮೇ. 2 ರಿಂದ ಮೇ 4 ರ ನಡುವೆ ತೆರಳಿ ಮತ ಚಲಾಯಿಸಬಹುದು ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಡಿಕೆಶಿ ಮುಸ್ಲಿಮರಿಗೆ ಎಲ್ಲಿಂದ ಮೀಸಲಾತಿ ಕೊಡ್ತಾರೆ? ಕಾಂಗ್ರೆಸ್ ವಿರುದ್ಧ ಅಮಿತ್ ಷಾ ವಾಗ್ದಾಳಿ

    ಇದು ನೋಡಬಹುದು: https://m.facebook.com/story.php?story_fbid=pfbid02cFmsiRQdyAHnyje1CU7KSPXkzh7Yxorr35AAJAkjd6mqVk7kPXnuup5mJWmx7j5el&id=100063808386031&mibextid=Nif5ozhttps://m.facebook.com/story.php?story_fbid=pfbid02cFmsiRQdyAHnyje1CU7KSPXkzh7Yxorr35AAJAkjd6mqVk7kPXnuup5mJWmx7j5el&id=100063808386031&mibextid=Nif5oz

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts