ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ತರಬೇತಿ

ಎಬಿವಿಪಿ ಮುಖಂಡ ಯುವರಾಜ್ ಮಾಹಿತಿ

ಬಳ್ಳಾರಿ: ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನಿಂದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಉಚಿತ ಸಿಇಟಿ ಮತ್ತು ನೀಟ್ ತರಬೇತಿ ನೀಡಲಾಗುವುದು ಎಂದು ಎಬಿವಿಪಿ ಮುಖಂಡ ಯುವರಾಜ್ ಹೇಳಿದರು.

ನಗರದ ಶ್ರೀಮೇಧ ಪದವಿ ಮಹಾವಿದ್ಯಾಲಯದಲ್ಲಿ ಮಾ.21ರಿಂದ ಏ.20 ರವರೆಗೆ ತರಬೇತಿ ನೀಡಲಾಗುತ್ತದೆ. ಬಡಮಕ್ಕಳಿಗೆ ತರಬೇತಿ ಕುರಿತ ಪುಸ್ತಕಗಳನ್ನೂ ಉಚಿತವಾಗಿ ನೀಡಲಾಗುವುದು. ಕಳೆದ ವರ್ಷ 234ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದು, ಈಪೈಕಿ 67ವಿದ್ಯಾರ್ಥಿಗಳು ಇಂಜಿನಿಯರಿಂಗ್, ಮೂವರು ವೈದ್ಯಕೀಯ ಶಿಕ್ಷಣ ಪ್ರವೇಶ ಪಡೆದಿದ್ದಾರೆ. 18 ಬಡ ವಿದ್ಯಾರ್ಥಿಗಳಿಗೆ ಉಚಿತ ಬುಕ್‌ಗಳೊಂದಿಗೆ ತರಬೇತಿ ನೀಡಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಎಸ್‌ಕೆ ವಿವಿಯ ನೇಮಕ ಪ್ರಕ್ರಿಯೆಯಲ್ಲಿ ನಿಯಮ, ಆದೇಶಗಳನ್ನು ಗಾಳಿಗೆ ತೂರಲಾಗುತ್ತಿದೆ. ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕಳೆದ ಎರಡು ದಿನಗಳಿಂದ ವಿವಿಯಲ್ಲಿ ಸಂದರ್ಶನ ನಡೆಸಲಾಗುತ್ತಿದೆ. ಈ ಬಗ್ಗೆ ರಾಜ್ಯಪಾಲರಿಗೆ, ಡಿಸಿಗೆ ಮನವಿ ಸಲ್ಲಿಸಿದ್ದರಿಂದ ಸಂದರ್ಶನ ನಿಲ್ಲಿಸಲಾಗಿದೆ. ಎರಡು ದಿನಗಳ ಕಾಲ ನಡೆದ ಸಂದರ್ಶನವನ್ನು ಕೂಡಲೇ ರದ್ದುಗೊಳಿಸಬೇಕು. ರಾಜ್ಯಪಾಲರ ಆದೇಶದಲ್ಲಿ ವಿವಿಯ ಕುಲಪತಿ ನಿವೃತ್ತಿಯಾಗುವ ಆರು ತಿಂಗಳ ಮುಂಚೆ ಯಾವುದೇ ಸಂದರ್ಶನ ನೇಮಕಾತಿ ಮಾಡುವಂತಿಲ್ಲ. ಆದರೆ ಇಲ್ಲಿನ ಕುಲಪತಿಗಳ ಅವಧಿ 3 ತಿಂಗಳಿದ್ದು, ನೇಮಕಾತಿ ನಡೆಸುತ್ತಿರುವುದು ಅನುಮಾನಾಸ್ಪದಗಳಿಗೆ ಕಾರಣವಾಗಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಎಬಿವಿಪಿ ಜಿಲ್ಲಾ ಸಂಚಾಲಕ ಶ್ರೀಕಾಂತ ರೆಡ್ಡಿ, ಮುಖಂಡರಾದ ಕೌಶಿಕ್, ವೀರನ ಗೌಡ ಇದ್ದರು.

Leave a Reply

Your email address will not be published. Required fields are marked *