ಸಂಶೋಧನಾತ್ಮಕವಾಗಿ ಇತಿಹಾಸ ಅಭ್ಯಾಸ ಮಾಡಿ – ಐಜಿಪಿ ನಂಜುಂಡಸ್ವಾಮಿ ಸಲಹೆ

ಬಳ್ಳಾರಿ: ವಿದ್ಯಾರ್ಥಿಗಳು ಚರಿತ್ರೆಯನ್ನು ಸಂಶೋಧನಾತ್ಮಕವಾಗಿ ಅಭ್ಯಾಸ ಮಾಡಬೇಕು. ಇತಿಹಾಸಕಾರರು ರಚಿಸಿರುವ ಕೃತಿ ಪರಾಮರ್ಶಿಸಿ, ಪರಿಶೀಲಿಸಿ ವೈಜ್ಞಾನಿಕ ತಿರ್ಮಾನಕ್ಕೆ ಬರಬೇಕು. ಆಗ ಮಾತ್ರ ಉತ್ತಮ ಚರಿತ್ರೆ ಕಟ್ಟಿಕೊಡಲು ಸಾಧ್ಯ ಎಂದು ಬಳ್ಳಾರಿ ವಲಯದ ಐಜಿಪಿ ಡಾ.ಎಂ.ನಂಜುಂಡಸ್ವಾಮಿ ಹೇಳಿದರು.

ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜಿನಲ್ಲಿ ಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಶನಿವಾರ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು. ಭಾರತದ ಇತಿಹಾಸ ಮರು ನಿರ್ಮಾಣ ಮಾಡಬೇಕಾಗಿದೆ. ಈಗಾಗಲೇ ರಚಿಸಿರುವ ಇತಿಹಾಸದ ಪುಸ್ತಕದಲ್ಲಿ ರಾಜಮನೆತನಗಳ ಜಾತಿಗಳ ಬಗ್ಗೆ ಸರಿಯಾಗಿ ಉಲ್ಲೇಖ ಮಾಡಲಾಗಿಲ್ಲ. ಇದರಿಂದ ಇತಿಹಾಸ ಅಸ್ಪಷ್ಟವಾಗಿ ಗೋಚರಿಸುತ್ತಿದೆ. ಹೀಗಾಗಿ ವಿದ್ಯಾರ್ಥಿ ಸಮುದಾಯ ಭಾರತ ಇತಿಹಾಸ, ಕನ್ನಡ ಭಾಷೆಯ ಬಗ್ಗೆ ಹೆಚ್ಚಿನ ಸಂಶೋಧನೆ ಕೈಗೊಳ್ಳವುದಕ್ಕೆ ಆದ್ಯತೆ ನೀಡಬೇಕು ಎಂದರು.

ಪ್ರಾಚಾರ್ಯ ಪ್ರೊ.ನಾಗರಾಜ ಅಧ್ಯಕ್ಷತೆ ವಹಿಸಿದ್ದರು. ಅರ್ಥಶಾಸ್ತ್ರ ಸಹ ಪ್ರಾಧ್ಯಾಪಕ ಎ.ಹೇಮಣ್ಣ, ಇತಿಹಾಸ ಸಹಾಯಕ ಪ್ರಾಧ್ಯಾಪಕಿ ಶ್ರೀದೇವಿ, ಕನ್ನಡ ವಿಭಾಗದ ಮುಖ್ಯಸ್ಥ ಸಿ.ದೇವಣ್ಣ ಇತರರಿದ್ದರು.

Leave a Reply

Your email address will not be published. Required fields are marked *