ಹೆಚ್ಚಿದ ಬೀದಿ ನಾಯಿ ಹಾವಳಿ

ಕೊಟ್ಟೂರು: ಪಟ್ಟಣದಲ್ಲಿ ಎಂಟತ್ತು ಬೀದಿ ನಾಯಿಗಳ ಹಿಂಡು ಬೀದಿಗಳಲ್ಲಿ ಒಂದಕ್ಕೊಂದು ಕಚ್ಚಾಡುತ್ತಾ ತಿರುಗಾಡುತ್ತಿದ್ದು, ಸಾರ್ವಜನಿಕರಲ್ಲಿ ಭೀತಿಯುಂಟುಮಾಡಿದೆ.

ಸ್ಥಳೀಯ ಇಂದು ಕಾಲೇಜ್‌ಗೆ ಉಜ್ಜಯಿನಿ ಸರ್ಕಲ್ ಮೂಲಕ ಹಾದು ಹೋಗುವ ನೂರಾರು ವಿದ್ಯಾರ್ಥಿಗಳು ನಾಯಿಗಳ ಹಾವಳಿಗೆ ಬೇಸತ್ತಿದ್ದಾರೆ. ಮನೆ ಮುಂದೆ ಆಟವಾಡುವ ಮಕ್ಕಳನ್ನು ಕಚ್ಚಿ ಗಾಯಗೊಳಿಸಿದ್ದು, ಪಾಲಕರನ್ನು ಭಯಭೀತರನ್ನಾಗಿಸಿದೆ. ಪಟ್ಟಣದ ಮತ್ತಳ್ಳಿರ ಹೋಟೆಲ್, ಬಸವೇಶ್ವರ ನಗರ, ಎಪಿಎಂಸಿ, ಅಂಬೇಡ್ಕರ್ ನಗರ, ಬಳ್ಳಾರಿ ಕ್ಯಾಂಪ್‌ಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಕೂಡಲೇ ಬೀದಿ ನಾಯಿಗಳ ಹಾವಳಿಯನ್ನು ಪಟ್ಟಣ ಪಂಚಾಯಿತಿ ನಿಯಂತ್ರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.