ಒತ್ತಡ ನಿವಾರಣೆಗೆ ಯೋಗ ಮದ್ದು

 ಬಳ್ಳಾರಿ, ಹೊಸಪೇಟೆ, ಹಬೊಹಳ್ಳಿಯಲ್ಲಿ ಯೋಗ ಮ್ಯಾರಾಥಾನ್>

ಬಳ್ಳಾರಿ: ಕರ್ನಾಟಕ ರಾಜ್ಯೋತ್ಸವ ನಿಮಿತ್ತ ನಗರ ಸೇರಿ ವಿವಿಧೆಡೆ ಜಿಲ್ಲಾ ಪತಂಜಲಿ ಯೋಗ ಸಮಿತಿ, ಭಾರತ್ ಸ್ವಾಭಿಮಾನ್, ಯುವಭಾರತ್ ಕಿಸಾನ್ ಸಮಿತಿ, ಮಹಿಳಾ ಯೋಗ ಸಮಿತಿ, ವಿವಿಧ ಕನ್ನಡ ಪರ ಸಂಘಟನೆಗಳಿಂದ ಯೋಗ ಮ್ಯಾರಥಾನ್ ನಡೆಸಲಾಯಿತು.

ಬಳ್ಳಾರಿಯಲ್ಲಿ ಪಾಲಿಕೆ ಸದಸ್ಯ ಚಾಲನೆ ನೀಡಿ, ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿ ಮತ್ತು ಯುವಕರು ಒತ್ತಡಕ್ಕೆ ಸಿಲುಕಿ ಆರೋಗ್ಯ ಹದಗೆಡಿಸಿಕೊಳ್ಳುತ್ತಿದ್ದು, ನಿತ್ಯ ಒಂದು ಗಂಟೆ ಯೋಗ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. ಯುವಭಾರತ್ ಅಧ್ಯಕ್ಷ ಲಕ್ಷ್ಮಿರೆಡ್ಡಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಇದಕ್ಕೂ ಮುನ್ನ ನಟ, ಮಾಜಿ ಸಚಿವ ಅಂಬರೀಶ್ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ಜಾಥಾವು ಮುನ್ಸಿಪಲ್ ಮೈದಾನದಿಂದ ರಾಯಲ್ ಸರ್ಕಲ್, ಬ್ರೂಸ್‌ಪೇಟೆ, ಮೋತಿ ಸರ್ಕಲ್, ಸ್ಟೇಷನ್ ರಸ್ತೆ, ರಾಜಕುಮಾರ್ ರಸ್ತೆ ಮೂಲಕ ತೆರಳಿ ಪುನಃ ಮೈದಾನ ತಲುಪಿತು.

ಹೊಸಪೇಟೆಯಲ್ಲಿ ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರ ಡಾ.ಎಫ್.ಟಿ.ಹಳ್ಳಿಕೇರಿ ಚಾಲನೆ ನೀಡಿದರು. ಪತಂಜಲಿ ಯುವ ಭಾರತ್ ಪ್ರಭಾರ ಕಿರಣಕುಮಾರ್ ಇತರರಿದ್ದರು. ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೋತ್ಥಾನ ವಿದ್ಯಾಸಂಸ್ಥೆ ಕಾರ್ಯಾಧ್ಯಕ್ಷ ಡಾ.ಎಚ್.ಎನ್.ಪಿ.ವಿಠಲ್ ಚಾಲನೆ ನೀಡಿ ಮಾತನಾಡಿದರು. ಸಮಿತಿಯ ಷಣ್ಮುಖಪ್ಪ, ಚೇಂಬರ್ಸ್‌ ಆಫ್ ಕಾಮರ್ಸ್ ಅಧ್ಯಕ್ಷ ಎಸ್.ಎಂ.ಚಂದ್ರಯ್ಯ ಸೇರಿ ಹಲವರು ಪಾಲ್ಗೊಂಡಿದ್ದರು.

ಹೊಸಪೇಟೆಯಲ್ಲಿ ಪತಂಜಲಿ ಯೋಗ ಸಮಿತಿಯಿಂದ ಯೋಗ ಮ್ಯಾರಾಥಾನ್ ನಡೆಯಿತು.

ಹಬೊಹಳ್ಳಿಯಲ್ಲಿ ರಾಷ್ಟ್ರೋತ್ಥಾನ ವಿದ್ಯಾಸಂಸ್ಥೆಯ ಡಾ.ಎಚ್.ಎನ್.ಪಿ.ವಿಠ್ಠಲ್ ಮ್ಯಾರಥಾನ್‌ಗೆ ಚಾಲನೆ ನೀಡಿದರು.