ಹೊಸಪೇಟೆಯಲ್ಲಿ ಉತ್ತಮ ಮಳೆ

ಹೊಸಪೇಟೆ: ನಗರ ಸೇರಿ ವಿವಿಧೆಡೆ ಭಾನುವಾರ ಸಂಜೆ ಉತ್ತಮ ಮಳೆಯಾಗಿದೆ. ಅರ್ಧ ಗಂಟೆಗೂ ಅಧಿಕ ಸಮಯ ಸುರಿದ ಮಳೆಯಿಂದಾಗಿ ನಗರದ ಕೆಲ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದವು. ಕೆಲವೆಡೆ ಚರಂಡಿಗಳು ತುಂಬಿ ಹರಿದವು. ನಗರದ ಜಬ್ಬಲ್ ವೃತ್ತ, ಇಂದಿರಾ ನಗರ, ಗಾಂಧಿ ನಗರ, ಎಸ್.ಆರ್.ನಗರ, ಗೌಳೇರ ಹಟ್ಟಿ, ಸುಣ್ಣದ ಬಟ್ಟಿ ಸೇರಿ ಇನ್ನಿತರ ತಗ್ಗು ಪ್ರದೇಶಗಳ ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಜನ ತೊಂದರೆ ಅನುಭವಿಸಿದರು. ತಾಲೂಕಿನ ಕಮಲಾಪುರ, ವೆಂಕಟಾಪುರ, ಹಂಪಿ, ಕಡ್ಡಿರಾಂಪುರ, ನಾಗೇನಹಳ್ಳಿ, ಗಾದಿಗನೂರು ಸೇರಿ ಹಲವಡೆ ಉತ್ತಮ ಮಳೆ ಸುರಿಯಿತು.

Leave a Reply

Your email address will not be published. Required fields are marked *