ಬಳ್ಳಾರಿ ಜಿಲ್ಲೆ ವಿಭಜನೆಗೂ ಮುನ್ನ ಉಕ ರಾಜ್ಯ ರಚಿಸಿ- ಸರ್ಕಾರಕ್ಕೆ ಅಖಿಲ ಭಾರತ ಜನಗಣ ಒಕ್ಕೂಟದ ಎನ್.ಗಂಗಾರೆಡ್ಡಿ ಒತ್ತಾಯ

ಬಳ್ಳಾರಿ: ಬಳ್ಳಾರಿ ಜಿಲ್ಲೆ ವಿಭಜನೆ ಮಾಡುವ ಮೊದಲು ಸರ್ಕಾರ ಉತ್ತರ ಕರ್ನಾಟಕ ರಾಜ್ಯ ರಚಿಸಬೇಕು ಎಂದು ಅಖಿಲ ಭಾರತ ಜನಗಣ ಒಕ್ಕೂಟದ ಅಧ್ಯಕ್ಷ ಎನ್.ಗಂಗಾರೆಡ್ಡಿ ಒತ್ತಾಯಿಸಿದರು.

ಕೆಲವರ ಸ್ವಾರ್ಥಕ್ಕೆ ಬಳ್ಳಾರಿ ಜಿಲ್ಲೆ ಒಡೆಯುವುದು ಸರಿಯಲ್ಲ. ವಿಜಯನಗರ ಜಿಲ್ಲೆ ರಚನೆಗೆ ಉತ್ಸುಕರಾಗಿರುವ ನಾಯಕರು ವಿವಿಧ ಪಕ್ಷಗಳ ಮುಖಂಡರು, ಹೋರಾಟಗಾರರ ಜತೆ ಚರ್ಚಿಸಿ, ಸಿಎಂ ಬಿಎಸ್‌ವೈ ಬಳಿ ನಿಯೋಗ ಹೋಗಬೇಕಿತ್ತು. ಸಿಎಂ ಕೂಡ ಜನಾಭಿಪ್ರಾಯ ಪಡೆಯದೇ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಹೇಳಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಲಕ್ಷಣವಲ್ಲ.

ವಿಜಯನಗರ ಜಿಲ್ಲೆಯಾದರೆ ಬಳ್ಳಾರಿಗೆ ಆದಾಯ ಇಲ್ಲದಂತಾಗುತ್ತದೆ. ಐತಿಹಾಸಿಕ ಪರಂಪರೆಗೂ ಪೆಟ್ಟು ಬೀಳಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಭಾನುವಾರ ಹೇಳಿದರು. ಈ ಭಾಗದ ಸ್ವಾಮೀಜಿಗಳಿಗೆ ರಾಜಕೀಯ ಏಕೆ ಬೇಕು. ಉಪ ಚುನಾವಣೆ ಲೆಕ್ಕಾಚಾರದೊಂದಿಗೆ ಪ್ರತ್ಯೇಕ ಜಿಲ್ಲೆ ರಚನೆಗೆ ಮುಂದಾಗಿರುವ ಜನಪ್ರತಿನಿಧಿಗಳೊಂದಿಗೆ ನಿಯೋಗದಲ್ಲಿ ಹೋಗದೇ ಜಿಲ್ಲೆ ವಿಭಜನೆಗೆ ವಿರೋಧಿಸಬೇಕಿತ್ತು. ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗೆ 13 ಜಿಲ್ಲೆ ಸೇರಿಸಿ ಪ್ರತ್ಯೇಕ ರಾಜ್ಯ ರಚನೆಗೆ ಸ್ವಾಮೀಜಿಗಳು ಹೋರಾಟದ ನೇತೃತ್ವ ವಹಿಸಲಿ ಎಂದರು. ಮುಖಂಡರು ಇದ್ದರು.

Leave a Reply

Your email address will not be published. Required fields are marked *