ತಾಂಡಾಗಳ ಅಭಿವೃದ್ಧಿಗೆ ಅನುದಾನ ನೀಡಿ


< ಅಖಿಲ ಕರ್ನಾಟಕ ಬಂಜಾರ ಸೇವಾ ಸಂಘದಿಂದ ಪತ್ರ ಚಳವಳಿ >

ಬಳ್ಳಾರಿ: ಗುಳೆ ತಡೆಗಟ್ಟುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ಪ್ರಧಾನ ಅಂಚೆ ಕಚೇರಿ ಬಳಿ ಅಖಿಲ ಕರ್ನಾಟಕ ಬಂಜಾರ ಸೇವಾ ಸಂಘ ಗುರುವಾರ ಪತ್ರ ಚಳವಳಿ ನಡೆಸಿತು.

ರಾಜ್ಯದಲ್ಲಿ ಗುಳೆ ಸಮಸ್ಯೆ ತಡೆಗಟ್ಟಲು ಕ್ರಮಕೈಗೊಳ್ಳಬೇಕು. ನರೇಗಾ ಅಡಿ ಕೂಲಿ ಕಾರ್ಮಿಕರಿಗೆ ವರ್ಷಪೂರ್ತಿ ಕೆಲಸ ನೀಡಬೇಕು. ಬಂಜಾರ ಸಮುದಾಯ ಆರ್ಥಿಕವಾಗಿ ಹಿಂದುಳಿದಿದ್ದು, ಅಭಿವೃದ್ಧಿಗೆ ಗಮನಹರಿಸಬೇಕು. ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ ಮೂಲ ಸೌಕರ್ಯ ಕಲ್ಪಿಸಬೇಕು. ಇದಕ್ಕೆ ಬಜೆಟ್‌ನಲ್ಲಿ ಕನಿಷ್ಠ ಒಂದು ಸಾವಿರ ಕೋಟಿ ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿ ಪ್ರಧಾನ ಅಂಚೆ ಕಚೇರಿ ಮೂಲಕ ಸಿಎಂಗೆ ಪತ್ರಗಳನ್ನು ಕಳುಹಿಸಲಾಯಿತು. ಸಂಘದ ಮುಖಂಡರಾದ ಎಸ್.ಚಂದ್ರನಾಯ್ಕ, ರಾಮಾನಾಯ್ಕ, ಧರ್ಮ, ರಮೇಶ್ ಇತರರಿದ್ದರು.