ಪೊಲೀಸ್ ವಿರುದ್ಧ ವರದಕ್ಷಿಣಿ ಕಿರುಕುಳ ದೂರು

ಬಳ್ಳಾರಿ: ಹೊಸಪೇಟೆಯ ಟಿಬಿ ಡ್ಯಾಂ ಠಾಣೆಯ ಪೇದೆಯಾಗಿರುವ ಮೆಹಬೂಬ್ ಬಾಷಾ ಮತ್ತು ಐವರ ವಿರುದ್ಧ ನಗರದ ಮಹಿಳಾ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ, ದೈಹಿಕ, ಮಾನಸಿಕ ಹಿಂಸೆ ಹಾಗೂ ಜೀವ ಬೆದರಿಕೆ ಪ್ರಕರಣ ದಾಖಲಾಗಿದೆ. ಪೇದೆ ಪತ್ನಿ ನಸೀಮಾ ಬೇಗಂ ದೂರು ನೀಡಿದ್ದಾರೆ. ಇತರ ಆರೋಪಿಗಳ ಪೈಕಿ ಒಬ್ಬರು ಹಂಪಿ ಪೊಲೀಸ್ ಠಾಣೆಯಲ್ಲಿ ಪೇದೆ ಆಗಿರುವುದು ಗಮನಾರ್ಹ. 2017ರ ಜು. 16ರಂದು ಮೆಹಬೂಬ್ ಬಾಷಾ ಜತೆ ನಸೀಮಾ ಬೇಗಂ ಮದುವೆಯಾಗಿತ್ತು. ಆಗ ವರದಕ್ಷಿಣೆ ನೀಡಿದ್ದಲ್ಲದೇ ಎಂಟು ಲಕ್ಷ ರೂ. ಖರ್ಚು ಮಾಡಿ ಮದುವೆ ಮಾಡಿಕೊಡಲಾಗಿತ್ತು. 2 ತಿಂಗಳ ಬಳಿಕ ತಮ್ಮ ಪತಿ ಮತ್ತವರ ಕುಟುಂಬದ ಸದಸ್ಯರು ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತ ಬಂದಿದ್ದಾರೆ ಎಂದು ನಸೀಮಾ ಬೇಗಂ ದೂರಿನಲ್ಲಿ ಆರೋಪಿಸಿದ್ದಾರೆ.