12 ಗ್ರಾಪಂಗಳಲ್ಲಿ ಕಾನೂನು ಸಾಕ್ಷರತಾ ರಥ ಸಂಚಾರ – ನ್ಯಾಯಾಧೀಶ ರಾಜ ಸೋಮಶೇಖರ ಹೇಳಿಕೆ

ಬಳ್ಳಾರಿ: ಕಾನೂನು ಕುರಿತು ಜನಜಾಗೃತಿಗಾಗಿ ಕಾನೂನು ಸಾಕ್ಷರತಾ ರಥ ಯಾತ್ರೆ ಕೈಗೊಂಡಿದ್ದು, ಮೂರು ದಿನ 12 ಗ್ರಾಪಂ ವ್ಯಾಪ್ತಿಯಲ್ಲಿ ಸಂಚರಿಸಿ ಅರಿವು ಮೂಡಿಸಲಾಗುವುದು ಎಂದು 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜ ಸೋಮಶೇಖರ ಸಿ.ಆರ್. ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರ್ಜುನ್ ಎಸ್.ಮಲ್ಲೂರ್ ಮಾತನಾಡಿ, ಭೂ ಸುಧಾರಣೆ, ಮಾನವ ಕಳ್ಳಸಾಗಣೆ, ಮಹಿಳಾ ಹಾಗೂ ಮಕ್ಕಳ ಹಕ್ಕು, ವಿಮೆ, ಪೋಕ್ಸೋ ಹಾಗೂ ಇತರೆ ಕಾಯ್ದೆಯ ಕುರಿತು ಅಧಿಕಾರಿಗಳು ಜಾಗೃತಿ ಮೂಡಿಸಲಿದ್ದಾರೆ ಎಂದರು.

ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ಎಚ್.ಎಂ.ಅಂಕಲಯ್ಯ, 1ನೇ ಅಪರ ನ್ಯಾಯಾಧೀಶ ಕಾಸೀಂ ಚೂರಿಖಾನ್, ಕೌಟುಂಬಿಕ ನ್ಯಾಯಾಧೀಶ ವಿಪುಲ ಎಂ.ಪೂಜಾರಿ, 4ನೇ ಜಿಲ್ಲಾ ನ್ಯಾಯಾಧೀಶ ಎನ್.ವಿ.ಭವಾನಿ, ಜಿಲ್ಲಾ ಕಾರ್ಮಿಕಾಧಿಕಾರಿ ಚಂದ್ರಶೇಖರ್ ಎನ್.ಐಲಿ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ವಕೀಲರ ಸಂಘದ ಕಾರ್ಯದರ್ಶಿ ಎಸ್.ವಿ.ಅರಸೂರ ಸೇರಿ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ವಕೀಲರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *