22.5 C
Bengaluru
Sunday, January 19, 2020

ಬಾಳೆಕಾಯಿಗೆ ಬಾರದ ದರ

Latest News

ಕುಸಿದು ಬಿದ್ದ ಕಾಲುವೆ ಸಂಪರ್ಕ ಸೇತುವೆ ಪರಿಶೀಲನೆ

ಮುದ್ದೇಬಿಹಾಳ: ತಾಲೂಕಿನ ಸರೂರ, ಕವಡಿಮಟ್ಟಿ, ನೆರಬೆಂಚಿ ಗ್ರಾಮದ ಭಾಗದಲ್ಲಿ ಹಾಯ್ದು ಹೋಗಿರುವ ಕಾಲುವೆ ಕಾಮಗಾರಿ ಕಳಪೆಮಟ್ಟದಿಂದ ಕೂಡಿದ್ದು, ಕೂಡಲೇ ದುರಸ್ತಿಗೆ ಅಧಿಕಾರಿಗಳು ಕ್ರಮ...

400 ಲೀಟರ್ ಹಾಲು ಮಣ್ಣು ಪಾಲು

ಬಸರಾಳು: ಚಾಲಕನ ನಿಯಂತ್ರಣ ತಪ್ಪಿ ಹಾಲಿನ ಲಾರಿ ಉರುಳಿಬಿದ್ದ ಪರಿಣಾಮ 300 ರಿಂದ 400 ಲೀಟರ್ ಹಾಲು ಮಣ್ಣುಪಾಲಾಗಿದೆ.ನಾಗಮಂಗಲ, ಬಸರಾಳು ಹೋಬಳಿಯ ವಿವಿಧ...

ಪಲ್ಸ್ ಪೋಲಿಯೋದಲ್ಲಿ ಶೇ.95ರಷ್ಟು ಸಾಧನೆ

ಮಂಡ್ಯ: ಜಿಲ್ಲಾದ್ಯಂತ ಭಾನುವಾರ ಜಿಲ್ಲಾ ಆರೋಗ್ಯ ಇಲಾಖೆಯಿಂದ ಮೊದಲ ದಿನವೇ 1,18663 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗಿದೆ. ಜ.19ರಿಂದ 22ರವರೆಗೆ ಪಲ್ಸ್ ಪೋಲಿಯೋ...

ಬಲೆಯಲ್ಲಿ ಸಿಲುಕಿದ್ದ ಹೆಬ್ಬಾವು ರಕ್ಷಣೆ

ಕೆ.ಎಂ.ದೊಡ್ಡಿ: ಕೆರೆಯಲ್ಲಿ ಮೀನು ಹಿಡಿಯಲು ಹಾಕಿದ್ದ ಬಲೆಯಲ್ಲಿ ಹೆಬ್ಬಾವು ಸಿಲುಕಿ ಹಾಕಿಕೊಂಡಿದ್ದ ಹಿನ್ನೆಲೆಯಲ್ಲಿ ಮದ್ದೂರಿನ ಉರಗ ಸಂರಕ್ಷಕ ಮಾ.ನ. ಪ್ರಸನ್ನಕುಮಾರ್ ಹಾವನ್ನು ರಕ್ಷಿಸಿ...

ವೇಮನ ಒಬ್ಬ ಸಮಾಜ ಸುಧಾರಕ

ವಿಜಯಪುರ : ಜೀವನವೆಂಬ ಸಂತೆಯೊಳಗಿದ್ದುಕೊಂಡೇ ಸಂತನಾಗಿ ಬೆಳೆದ ಮಹಾಯೋಗಿ ವೇಮನ ಅವರು ಒಬ್ಬ ಸಮಾಜ ಸುಧಾರಕ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು. ನಗರದ ಕಂದಗಲ್...

ಶಿರಸಿ: ಮಾವಿನ ಹಣ್ಣಿನ ಸೀಜನ್ ಮುಗಿಯುತ್ತಿದ್ದಂತೆ ಬಾಳೆ ಕಾಯಿಗೆ ಪ್ರತಿ ವರ್ಷ ಬೇಡಿಕೆ ಬಂದು ದರ ಏರಿಕೆಯಾಗುತ್ತಿತ್ತು. ಆದರೆ, ಈ ವರ್ಷ ನಿರೀಕ್ಷಿತ ದರ ಲಭಿಸದೇ ರೈತರು ಆತಂಕ ಎದುರಿಸುತ್ತಿದ್ದಾರೆ.

ಆಗಸ್ಟ್ ತಿಂಗಳ ಆರಂಭದಲ್ಲಿ ಮಿಟ್ಲಿ ಬಾಳೆಕಾಯಿ ಪ್ರತಿ ಕೆಜಿಗೆ ಕಳೆದ ವರ್ಷ 40 ರಿಂದ 45 ರೂ.ದರ ಲಭಿಸುತ್ತಿತ್ತು. ಆಗಸ್ಟ್ ಅಂತ್ಯಕ್ಕೆ 65 ರೂ.ವರೆಗೂ ದರ ಸಿಕ್ಕಿತ್ತು. ಈ ವರ್ಷ 26 ರೂ.ನಲ್ಲಿ ರೈತರು ಅನಿವಾರ್ಯವಾಗಿ ಮಾರುತ್ತಿದ್ದಾರೆ. ಕರಿಬಾಳೆಗೆ ಕಳೆದ ವರ್ಷ 25ರಿಂದ 30 ರೂ. ಪ್ರತಿ ಕೆ.ಜಿಗೆ ದರ ಲಭಿಸಿದ್ದರೆ ಈ ವರ್ಷ 15 ರೂ.ಗೆ ಮಾರಾಟವಾಗುತ್ತಿದೆ. ಜಿ 9, ರೋಬೋಸ್ಟಾ ತಳಿಗಳ ಬಾಳೆಕಾಯಿ 8-9 ರೂ. ಪ್ರತಿ ಕೆಜಿಗೆ ದರವಿದ್ದು, ವ್ಯಾಪಾರಸ್ಥರು ಖರೀದಿಸಲು ಹಿಂಜರಿಯುತ್ತಿದ್ದಾರೆ. ಪ್ರತಿ ವರ್ಷ ಈ ವೇಳೆಗೆ ಪ್ರತಿ ದಿನ 2ರಿಂದ 3 ಟನ್ ಬಾಳೆಕಾಯಿ ತುಂಬಿದ 10ಕ್ಕೂ ಅಧಿಕ ಲಾರಿಗಳು ಹೊರ ಜಿಲ್ಲೆಗೆ ಸಾಗುತ್ತಿದ್ದವು. ಈ ವರ್ಷ 1 ಟನ್ ಸಾಮರ್ಥ್ಯದ 4-5 ಜೀಪ್​ಗಳು ಮಾತ್ರ ಸಾಗರ ಮತ್ತು ಗೋವಾ ಮಾರುಕಟ್ಟೆಗೆ ಬಾಳೆಕಾಯಿಯನ್ನು ತುಂಬಿ ಸಾಗಿಸುತ್ತಿವೆ. ದರ ಇರದ ಕಾರಣ ರೈತರೂ ಬಾಳೆಕಾಯಿಯನ್ನು ಮಾರುಕಟ್ಟೆಗೆ ತರಲು ಹಿಂದೇಟು ಹಾಕುತ್ತಿದ್ದಾರೆ.

ಏಕೆ ದರ ಕುಸಿತ?: ತಾಲೂಕಿನಲ್ಲಿ ಬೆಳೆದ ಮಿಟ್ಲಿ ಮತ್ತು ಕರಿ ಬಾಳೆಕಾಯಿಗೆ ಕಳೆದ ವರ್ಷ ಬೆಂಗಳೂರು ಮತ್ತು ಮೈಸೂರಿನ ಮಾರುಕಟ್ಟೆಯಲ್ಲಿ ಬೇಡಿಕೆ ಉತ್ತಮವಾಗಿತ್ತು. ಇದರಿಂದಾಗಿ ಹೆಚ್ಚಿನ ದರ ಲಭಿಸಿತ್ತಲ್ಲದೇ ವ್ಯಾಪಾರಸ್ಥರೂ ಉತ್ಸುಕರಾಗಿದ್ದರು. ಆದರೆ, ಈ ವರ್ಷ ಬೆಂಗಳೂರು ಮಾರುಕಟ್ಟೆಗೆ ತಮಿಳುನಾಡು ಮತ್ತು ಆಂಧ್ರ ಪ್ರದೇಶದಿಂದ ಬಾಳೆಕಾಯಿ ಸರಬರಾಜಾಗುತ್ತಿದೆ. ಹುಬ್ಬಳ್ಳಿ ಮಾರುಕಟ್ಟೆಯವರೆಗೂ ಆಂಧ್ರದ ವ್ಯಾಪಾರಸ್ಥರು ಬಾಳೆಕಾಯಿ ಪೂರೈಸುತ್ತಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಗೋವಾ ಮತ್ತು ಸಾಗರ ಮಾರುಕಟ್ಟೆಗೆ ಮಾತ್ರ ಇಲ್ಲಿಯ ಬಾಳೆಕಾಯಿ ಕಳಿಸಲಾಗುತ್ತಿದೆ ಎನ್ನುತ್ತಾರೆ ವ್ಯಾಪಾರಸ್ಥರು.

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...