ಬೀಳಗಿ: ಜನಪದ ಕಲೆ ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಜಾನಪದ ಪರಿಷತ್ ಕೆಲಸ ಮಾಡುತ್ತಿದೆ ಎಂದು ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಎಂ. ಸಾವಕಾರ ಹೇಳಿದರು.
ತಾಲೂಕಿನ ಬೂದಿಹಾಳ (ಎಸ್.ಎಚ್.) ಗ್ರಾಮದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ಹಾಗೂ ಬೀಳಗಿ ತಾಲೂಕು ಘಟಕದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕುಂದರಗಿ ಕನ್ನಡ ಜಾನಪದ ಪರಿಷತ್ ವಲಯ ಘಟಕದ ಉದ್ಘಾಟನೆ, ಪದಗ್ರಹಣ, ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಕಲೆಯು ನಮ್ಮ ಹಿರಿಯರು ನೀಡಿದ ಬಳವಳಿ. ಮೂಲ ಜಾನಪದ ಕಲೆ ಉಳಿಸಬೇಕು ಎಂದರು.
ಗಾಳೇಶ್ವರ ಮಠದ ಚಿದಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಜನಪದ ಸಾಹಿತ್ಯದಲ್ಲಿ ಜೀವನದ ಮೌಲ್ಯಗಳು ಅಡಕವಾಗಿವೆ ಎಂದರು.
ಭಾರತೀಯ ಕಿಸಾನ ಸಂಘದ ಜಿಲ್ಲಾ ಅಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಮಾತನಾಡಿ, ಜಾನಪದ ಮತ್ತು ಜನರ ಬದುಕಿನ ನಡುವೆ ಅವಿನಾಭಾವ ಸಂಬಂಧವಿದೆ ಎಂದರು.
ಕನ್ನಡ ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ದಾವಣಗೆರೆ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಜಾನಪದ ಪರಿಷತ್‌ನ ಕುಂದರಗಿ ವಲಯ ಘಟಕದ ಅಧ್ಯಕ್ಷರಾಗಿ ಕಲಾವಿದ ಪಾಂಡಪ್ಪ ಕನಸಗೇರಿ ಮತ್ತು ಪದಾಧಿಕಾರಿಗಳ ಪದಗ್ರಹಣ ನಡೆಯಿತು.
ಮುಖ್ಯ ಅತಿಥಿಗಳಾಗಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಕಾರ್ಯದರ್ಶಿ ಆರ್. ಬಿ. ನಬಿವಾಲೆ, ಸಂಘಟನಾ ಕಾರ್ಯದರ್ಶಿ ಶಂಕರ ಡಬರಿ, ಸಂತೋಷ ಕಿವುಡಜಾಡರ, ಶಿವಪ್ಪ ಉಳ್ಳಾಗಡ್ಡಿ, ರಂಗಪ್ಪ ಕುರಿ, ಚಂದ್ರು ವೈ.ಎ., ಸದಾಶಿವ ಆಗೋಜಿ, ಮುತ್ತು ಗಾಣಗೇರ, ನಾಗಯ್ಯ ಮಠಪತಿ, ಚಂದಪ್ಪ ಬೋಕಿ, ವೆಂಕಟೇಶ ಪೂಜಾರಿ, ದ್ಯಾಮಣ್ಣ ಬಡಿಗೇರ, ಅಡಿವೆಪ್ಪ ಡಬರಿ, ತಿಮ್ಮಣ್ಣ ಬೆಣ್ಣೂರ, ಭೀಮಶಿ ಗಾಣಗೇರ, ಲೆಂಕೆಪ್ಪ ಮೇತ್ರಿ, ರಾಕೇಶ ಪೂಜಾರಿ ಮತ್ತಿತರಿದ್ದರು.