More

    ಬಾಲಾಜಿ ಫೋಟೋ ಸ್ಟುಡಿಯೋದಿಂದ ‘ಪುಗಸಟ್ಟೆ’ ಹಾಡು ಬಂತು …

    ಕಿರುತೆರೆ ನಟ ರಾಜೇಶ್​ ಧ್ರುವ ಸದ್ದಿಲ್ಲದೆ ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಎಂಬ ಚಿತ್ರ ನಿರ್ದೇಶಿಸಿರುವ ವಿಷಯ ಗೊತ್ತಿರಬಹುದು. ಜನವರಿಯಲ್ಲಿ ಆ ಚಿತ್ರ ಬಿಡುಗಡೆಯಾಗುತ್ತಿದ್ದು, ಇತ್ತೀಚೆಗೆ ಚಿತ್ರದ ಹಾಡು ಬಿಡುಗಡೆಯಾಗಿವೆ.

    ಇದನ್ನೂ ಓದಿ; ‘ಬೇಷರಮ್ ರಂಗ್’ ವಿವಾದದ ಬಗ್ಗೆ ‘ಕಿಂಗ್​ ಖಾನ್​’ ಹೇಳಿದ್ದೇನು ಗೊತ್ತಾ? ಇಲ್ಲಿದೆ ಶಾರೂಖ್​ ಫಸ್ಟ್​ ರಿಯಾಕ್ಷನ್​

    ‘ಪುಗಸಟ್ಟೆ’ ಎಂಬ ಹಾಡು ಬಿಡುಗಡೆ ಮಾಡುವುದಕ್ಕೆ ನಟ ವಿಜಯ್ ರಾಘವೇಂದ್ರ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಹಾಗೂ ಹಿರಿಯ ಛಾಯಾಗ್ರಾಹಕ ಅಶೋಕ್ ಕಶ್ಯಪ್ ಆಗಮಿಸಿ, ಚಿತ್ರತಂಡಕ್ಕೆ ಶುಭ ಕೋರಿದರು.

    ಹಾಡುಗಳನ್ನು ಬಿಡುಗಡೆ ಮಾಡಿ ಮಾತನಾಡಿದ ವಿಜಯ್​ ರಾಘವೇಂದ್ರ, ‘ಒಂದು ಊರಿನಲ್ಲಿ ಹಲವು ತರಹದ ಕಥೆ ಇರೋದು ಸಹಜ. ಅದು ಹೃದಯದಿಂದ ಹುಟ್ಟೋ ಕಥೆಯಾಗಿ ಹೊರಬರುತ್ತೆ, ಅಂತಹ ಕಥೆಗಳು ಸೋತಿರೋ ಉದಾರಹಣೆ ತುಂಬಾ ಕಡಿಮೆ, ಇಂತಹ ಸಿನಿಮಾವನ್ನು ಜನರು ಇಷ್ಟ ಪಡುತ್ತಾರೆ, ಈಗಿನ ಸಿನೆಮಾ ನೋಡೋ ಮಂದಿ ಇದನ್ನೇ ಎದುರು ನೋಡುತ್ತಿದ್ದಾರೆ, ಈ ತಂಡದ ಜೊತೆ ನಾನು ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ, ನಾನೊಬ್ಬ ಕಲಾವಿದನಾಗಿ ಈ ಸಿನೆಮಾ ನೋಡಿ ಅಂತ ಹೇಳಲ್ಲ ಒಬ್ಬ ಪ್ರೇಕ್ಷಕನಾಗಿ ಈ ಸಿನಿಮಾ ನಾನು ನೋಡುತ್ತೀನಿ. ನೀವು ನೋಡಿ’ ಎಂದರು.

    ಈ ಚಿತ್ರಕ್ಕಾಗಿ 23 ದಿನಗಳ ಮಳೆಯಲ್ಲಿ ಚಿತ್ರೀಕರಣ ಮಾಡಲಾಗಿದೆಯಂತೆ. ಹಾಗಂತ ಮಾಹಿತಿ ಕೊಟ್ಟಿದ್ದು ನಟ-ನಿರ್ದೇಶಕ ರಾಜೇಶ್​ ಧ್ರುವ. ‘ಯಾವುದೇ ಸಿನಿಮಾ ಹಳೆಯದಾದಷ್ಟು ಅದರ ಸಾರ ಹೊರಟು ಹೋಗುತ್ತದೆ. ಹಾಗಾಗಿ, ಈ ಚಿತ್ರವನ್ನು ಕೇವಲ ಐದು ತಿಂಗಳಲ್ಲಿ ತೆರೆಗೆ ತರಲು ತಯಾರಿ ನಡೆಸಿದ್ದೇವೆ. ನನ್ನ ಊರಿನಲ್ಲಿ ನನ್ನ ಅನುಭವಕ್ಕೆ ಬಂದ ಹಲವು ಘಟನೆಗಳನ್ನು, ಭಾಷೆಯನ್ನು ಈ ಸಿನೆಮಾದಲ್ಲಿ ಬಳಸಿಕೊಂಡಿದ್ದೇವೆ. ಚಿತ್ರದಲ್ಲಿ ನಟಿಸಿರುವ ಎಲ್ಲ ಕಲಾವಿದರಿಗೆ 30 ದಿನಗಳ ಕಾಲ ಅಲ್ಲಿಯ ಭಾಷೆಯ ಅರಿವು ಮಾಡಿಸಿ ಪಾತ್ರಕ್ಕೆ ತಕ್ಕಂತೆ ತಯಾರಿ ಮಾಡಲಾಗಿದೆ. ಇಲ್ಲಿ ಎಲ್ಲ ಕಲಾವಿದರೂ ಹೊಸಬರೇ. ಆದರೆ, ಎಲ್ಲಿಯೂ ಕೂಡ ನೋಡುಗರಿಗೆ ಅದರ ಅರಿವೇ ಆಗದಂತೆ ನೈಜವಾಗಿ ಅಭಿನಯ ಮಾಡಿಸಲಾಗಿದೆ’ ಎಂದರು.

    ಇದನ್ನೂ ಓದಿ: ‘ಜಸ್ಟ್​ ಪಾಸ್​’ ಆದವರಿಗೇ ಒಂದು ಪ್ರತ್ಯೇಕ ಕಾಲೇಜ್​ …

    ಒಬ್ಬ ಫೋಟೋಗ್ರಾಫರ್ ಹಾಗೂ ಅವನ ಫೋಟೋ ಸ್ಟುಡಿಯೋ ನಡುವಿನ ಭಾವನಾತ್ಮಕ ಸಂಬಂಧವೇ ಈ ಚಿತ್ರದ ಕಥೆ. ಈ ಚಿತ್ರದಲ್ಲೊಂದು ಲವ್​ಸ್ಟೋರಿ ಸಹ ಇದೆ. ರಾಜೇಶ್​ ಧ್ರುವ ಜತೆಗೆ, ರವಿ ಸಾಲಿಯಾನ್, ರಾಧಿಕಾ ಅಚ್ಯುತ್ ರಾವ್, ಸಂಪತ್ ಜೆ ರಾಮ್, ಶಿಶಿರ್​ ಮುಂತಾದವರ ನಟಿಸಿದ್ದಾರೆ. ಪ್ರಮೋದ್​ ಮರವಂತೆ ರಚಿಸಿರುವ ಹಾಡುಗಳಿಗೆ ಶ್ರೀರಾಮ್ ಗಂಧರ್ವ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರವನ್ನು ಬಳ್ಳಾರಿಯ ವೆಂಕಟೇಶ್ವರ ರಾವ್​ ನಿರ್ಮಿಸಿದ್ದಾರೆ.

    ಅಮಿತಾಭ್​ ಬಚ್ಚನ್​ಗೆ ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಿ … ದೀದಿ ಮನವಿ

    ರಾಜ್ಯೋತ್ಸವ ರಸಪ್ರಶ್ನೆ - 21

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts