ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಲಕ್ಷ$್ಮಣ್ ಉತೇಕರ್ ನಿರ್ದೇಶನದ, ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ ಛತ್ರಪತಿ ಸಂಭಾಜಿ ಮಹಾರಾಜ್ ಜೀವನಾಧಾರಿತ ಸಿನಿಮಾ “ಛಾವಾ’. ಕಳೆದ ೆ. 14ರಂದು ಬಿಡುಗಡೆಯಾದ ಈ ಚಿತ್ರ, ಎರಡು ವಾರಗಳಲ್ಲಿ <300 ಕೋಟಿಗೂ ಅಧಿಕ ಗಳಿಕೆ ಮಾಡಿಕೊಂಡು, ಬಾಕ್ಸಾಫಿಸಿನಲ್ಲಿ ನಾಗಾಲೋಟ ಮುಂದುವರಿಸಿದೆ. ವಿಶೇಷ ಅಂದರೆ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಜತೆ ಮತ್ತೊಬ್ಬ ಕನ್ನಡಿಗ ಬಾಲಾಜಿ ಮನೋಹರ್ ಕೂಡ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸಂಭಾಜಿ ಮಹಾರಾಜರ ಜತೆ ಸರಿಸಮನಾಗಿ ನಿಂತು ಔರಂಗಜೇಬನ ಸೇನೆಯ ವಿರುದ್ಧ ಹೋರಾಡುವ ಮ್ಹಲೋಜಿ ಬಾಬಾ ಪಾತ್ರದಲ್ಲಿ ಬಾಲಾಜಿ ಮನೋಹರ್ ಮಿಂಚಿದ್ದಾರೆ. ಚಿತ್ರಕ್ಕೆ ಆಯ್ಕೆಯಾದ ಬಗ್ಗೆ ಅವರು, “ಕಾಸ್ಟಿಂಗ್ ಏಜೆನ್ಸಿಯವರು 2023ರ ಮಾರ್ಚ್ನಲ್ಲಿ ಆಡಿಷನ್ ಕೇಳಿದರು. ಅವರಿಗೆ ವಿಡಿಯೋ ಮಾಡಿ ಕಳುಹಿಸಿದ್ದೆ. ಅದನ್ನು ನೋಡಿದ ನಿರ್ದೇಶಕ ಲಕ್ಷ$್ಮಣ ಉತೇಕರ್, ಮ್ಹಲೋಜಿ ಪಾತ್ರಕ್ಕೆ ನಾನು ಹೋಲುತ್ತೇನೆ ಅಂತ ಜೂನ್ನಲ್ಲಿ ಕನ್ಫಮ್ರ್ ಮಾಡಿದರು. 2023ರ ಸೆಪ್ಟೆಂಬರ್ನಿಂದ 2024ರ ಏಪ್ರಿಲ್ವರೆಗೆ ಚಿತ್ರೀಕರಣ ನಡೆಯಿತು. ವಿಲನ್, ನಾಯಕಿ ಪಾತ್ರಗಳಿಗೆ ದಣದಿಂದ ಕಲಾವಿದರು ಹೋಗಿರುವುದು ಸಾಮಾನ್ಯ. ಆದರೆ, ಇಲ್ಲಿನವರಿಗೆ ಪೋಷಕ ಪಾತ್ರಗಳಲ್ಲಿ ಅವಕಾಶ ನೀಡಿರುವುದು ಅಪರೂಪ. ಇದೀಗ ಚಿತ್ರಕ್ಕೆ ಮತ್ತು ನನ್ನ ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನನಗಂತೂ ತುಂಬ ಖುಷಿಯಾಗಿದೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ.
ಸಿಂಕ್ ಸೌಂಡ್ನಲ್ಲಿ ಚಿತ್ರೀಕರಣ:
ಸಾವಿರಾರು ಕಲಾವಿದರ ನಡುವೆಯೇ “ಛಾವಾ’ ಚಿತ್ರವನ್ನು ಸಿಂಕ್ ಸೌಂಡ್ನಲ್ಲಿ ಲೊಕೇಷನ್ನಲ್ಲೇ ಶೂಟಿಂಗ್ ನಡೆಸಿರುವುದು ವಿಶೇಷ. “ಪ್ರತಿದಿನ 1500ರಿಂದ 2000 ಜನರ ನಡುವೆ ಚಿತ್ರೀಕರಣ ನಡೆಯುತ್ತಿತ್ತು. ಸಿಂಕ್ ಸೌಂಡ್ನಲ್ಲಿ ಚಿತ್ರೀಕರಿಸಿರುವ ನನ್ನ ಪಾತ್ರದ ಸಂಭಾಷಣೆಯನ್ನೇ ಬಹುತೇಕ ಉಳಿಸಿಕೊಂಡಿದ್ದಾರೆ. ಆದರೆ, ನನ್ನದು ದಣ ಭಾರತದ ಆ್ಯಕ್ಸೆಂಟ್ ಆದ ಕಾರಣ, ಕೆಲವೆಡೆ ಉಚ್ಛಾರಣೆ ಪಕ್ಕಾ ಇರಬೇಕೆಂದು ಮತ್ತೆ ಮುಂಬೈನಲ್ಲಿ ಒಂದು ತಾಸು ಡಬ್ ಮಾಡಿದೆ. ನಾನು ಸಣ್ಣ ಸಿನಿಮಾಗಳನ್ನು ಮಾಡಿಕೊಂಡು ಬಂದವನು. “ಅವನೇ ಶ್ರೀಮನ್ನಾರಾಯಣ’ ಚಿತ್ರ ಬಹುಭಾಷೆಗಳಲ್ಲಿ ರಿಲೀಸ್ ಆಗಿತ್ತು. ಮೆರಿಟ್ ಮೇಲೆ ಅವಕಾಶ ಸಿಕ್ಕಾಗ ಖುಷಿಯಾಗುತ್ತದೆ. ನನಗೆ ಬಾಲಿವುಡ್ನಲ್ಲಿ ಯಾರೂ ಪರಿಚಯವಿಲ್ಲ. ಆದರೂ ನನ್ನ ಪ್ರತಿಭೆಯನ್ನು ನಂಬಿ “ಛಾವಾ’ದಲ್ಲಿ ಅವಕಾಶ ನೀಡಿದರು. ಸಾಕಷ್ಟು ಕಲಿಯಲು ನನಗೂ ಈ ಸಿನಿಮಾ ಸಹಕಾರಿಯಾಯಿತು’ ಎನ್ನುತ್ತಾರೆ ಬಾಲಾಜಿ ಮನೋಹರ್.
ವಿಕ್ಕಿ ಹಲ್ಲು ಮುರಿಯಿತು
ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ನಟಿಸಿರುವ ನಾಯಕ ವಿಕ್ಕಿ ಕೌಶಲ್ ಬಗ್ಗೆ ಬಾಲಾಜಿ, “ಒಂದು ಸ್ಲೋಮೋಷನ್ ಸೀಕ್ವೆನ್ಸ್ ಬಿಟ್ಟರೆ, ಚಿತ್ರದಲ್ಲಿ ಹೆಚ್ಚು ಬಿಲ್ಡಪ್ ಇಲ್ಲ. ಯುದ್ಧಗಳಿಗೆ ಹೆಚ್ಚು ಮಹತ್ವವಿರುವ ಸಿನಿಮಾ. ೈಟ್ ಸನ್ನಿವೇಶದಲ್ಲಿ ನಾಯಕ ವಿಕ್ಕ ಕೌಶಲ್ ಮುಖಕ್ಕೆ ಪೆಟ್ಟು ಬಿದ್ದು, ಅರ್ಧ ಹಲ್ಲು ಮುರಿಯಿತು. ಆದರೂ, ಅವರು ಹಿಂದೇಟು ಹಾಕದೇ ಶೂಟಿಂಗ್ ಮುಂದುವರಿಸಿದರು. ಶಾಟ್ ಮುಗಿದ ಬಳಿಕ ವಿಕ್ಕಿ ಕ್ಯಾರಾವಾನ್ಗೆ ಹೋಗುತ್ತಿರಲಿಲ್ಲ. ನಮ್ಮ ಜತೆ ಕುಳಿತು ಸಿನಿಮಾ ಬಗ್ಗೆ ಮಾತನಾಡುತ್ತಿದ್ದರು’ ಎನ್ನುತ್ತಾರೆ.

ರಶ್ಮಿಕಾ ಗ್ರೇಟ್!

ರಶ್ಮಿಕಾ ಗ್ರೇಟ್!
“ರಶ್ಮಿಕಾ ಸ್ವೀಟ್ ಹುಡುಗಿ’ ಎನ್ನುವ ಬಾಲಾಜಿ ಮನೋಹರ್, “”ಅವನೇ ಶ್ರೀಮನ್ನಾರಾಯಣ’ ಶೂಟಿಂಗ್ ಸಮಯದಲ್ಲಿ ಅವರನ್ನು ಭೇಟಿಯಾಗಿದ್ದೆ. “ಛಾವಾ’ ಸೆಟ್ನಲ್ಲಿ ಇಬ್ಬರೂ ಕನ್ನಡದಲ್ಲೇ ಮಾತನಾಡುತ್ತಿದ್ದೆವು. ಸಣ್ಣ ವಯಸ್ಸಿಗೆ ದೊಡ್ಡ ಮಟ್ಟದಲ್ಲಿ ಬೆಳೆಯಲು ಅವರ ವೃತ್ತಿಪರತೆ, ಸಮರ್ಪಣಾ ಮನೋಭಾವವೇ ಕಾರಣ. ಬೆಳಗ್ಗೆ 5 ಗಂಟೆಗೆ ಸೆಟ್ಗೆ ಬಂದು 7 ಗಂಟೆಗೆ ರೆಡಿಯಾಗಿಬಿಡುತ್ತಿದ್ದರು. ಸಂಜೆ 6 ಗಂಟೆಗೆ ಪ್ಯಾಕಪ್ ಆದ ಬಳಿಕ, ಎರಡು ತಾಸುಗಳ ಕಾಲ ನಾಳೆಯ ಸೀನ್ಗಳ ರಿಹರ್ಸಲ್ಸ್ ಮಾಡಿ, ಬಳಿಕ ರೂಮಿಗೆ ತೆರಳಿ, ಮತ್ತೆ ಎರಡು ತಾಸು ಜಿಮ್ಗೆ ಹೋಗುತ್ತಿದ್ದರು. ಹೀಗೆ ಅವರು ಮಲಗುವುದೇ ಮಧ್ಯರಾತ್ರಿ 1,2 ಗಂಟೆ ಆಗುತ್ತಿತ್ತು. ಮತ್ತೆ ಬೆ. 4ಕ್ಕೆ ಎದ್ದು 5ಕ್ಕೆಲ್ಲ ಸೆಟ್ಗೆ ಬರುತ್ತಿದ್ದರು’ ಎಂದು ಮಾಹಿತಿ ನೀಡುತ್ತಾರೆ ಬಾಲಾಜಿ ಮನೋಹರ್.