ಪ್ರ: ಬಕಾಸನದ ಮಾಹಿತಿ ಹಾಗೂ ಅಭ್ಯಾಸದ ಕ್ರಮ ತಿಳಿಸಿ
ಉ: ಬಕಾಸನ ಎಂಬುದು ಸಂಸ್ಕೃ ಪದ ಬಕಾ ಅಂದರೆ ಕೊಕ್ಕರೆ, ಕ್ರೇನ್ ಮತ್ತು ಆಸನ ಎಂದರೆ ಭಂಗಿ. ಇಂಗ್ಲೀಷ್ನಲ್ಲಿ ಬಕಾಸನವನ್ನು ಕ್ರೇನ್ ಪೋಸ್ ಎಂದು ಕರೆಯಲಾಗುತ್ತದೆ. ದೇಹದ ಭಂಗಿಯು ಕ್ರೇನ್ ಅನ್ನು ಹೋಲುವುದರಿಂದ ಇದನ್ನು ಬಕಾಸನ ಎಂದು ಕರೆಯಲಾಗುತ್ತದೆ.
ಸಾಂಪ್ರದಾಯಿಕವಾಗಿ ಅನೇಕ ಏಷ್ಯನ್ ಸಂಸ್ಕೃಗಳಲ್ಲಿ, ಕಾಗೆ ಮತ್ತು ಕ್ರೇನ್ನಂತಹ ಪಕ್ಷಿಗಳು ದೇವರ ಸಂದೇಶವಾಹಕರು ಎಂದು ನಂಬಲಾಗಿದೆ. ಅವರು ಸೀಮಿತ ಪ್ರಪಂಚವನ್ನು ಮೀರಿ ಬದುಕುವ ಸಾಮರ್ಥ್ಯನ್ನು ಹೊಂದಿದವರೆಂದು ಭಾವಿಸಲಾಗಿದೆ. ಕ್ರೇನ್ ಅನ್ನು ತಾರುಣ್ಯ ಮತ್ತು ಸಂತೋಷದ ಸಂಕೇತವೆಂದು ತಿಳಿಯಲಾಗುತ್ತದೆ. ಬಕಾಸನ ಅಥವಾ ಕೊಕ್ಕರೆ, ಕ್ರೇನ್ ಭಂಗಿಯು ಇವೆಲ್ಲದರ ಸಾಕಾರವಾಗಿದೆ. ಬಕಾಸನವನ್ನು ಸಾಮಾನ್ಯವಾಗಿ ಕ್ರೇನ್ ಭಂಗಿ ಮತ್ತು ಕಾಗೆ ಭಂಗಿ ಎರಡಕ್ಕೂ ಅನ್ವಯಿಸಲಾಗುತ್ತದೆ.
ವಿಧಾನ
ಮೊದಲು ಕಾಲಿನ ಪಾದಗಳನ್ನು ಜೋಡಿಸಿ ಕುಳಿತುಕೊಳ್ಳಿ. ಈ ಸ್ಥಿತಿಯಲ್ಲಿ ಅಂಗಾಲು ಹಿಮ್ಮಡಿಗಳನ್ನು ನೆಲದ ಮೇಲೆ ಗಟ್ಟಿಯಾಗಿ ಊರಿ. ಅನಂತರ ಮೊಣಕಾಲುಗಳನ್ನು ಅಗಲಿಸಿ ತಲೆಯನ್ನು ಮುಂದೆ ತರಬೇಕು. ಆ ಮೇಲೆ ಉಸಿರು ಹೊರಕ್ಕೆ ಬಿಟ್ಟು ಕಾಲುಗಳನ್ನು ತೋಳುಗಳಿಂದ ಬಳಸಿ, ಕೈಗಳನ್ನು ನೆಲದ ಮೇಲೆ ಇಟ್ಟು ಮೊಣ ಕೈಗಳನ್ನು ಬಗ್ಗಿಸಿ ಹಿಮ್ಮಡಿಗಳನ್ನು ನೆಲದಿಂದ ಮೇಲೆ ಎತ್ತಿ. ಮೊಣಕಾಲುಗಳು ಕಂಕುಳದ ಹತ್ತಿರ ಒರಗಿಸಿಡಿ. ಕಾಲು ಬೆರಳುಗಳನ್ನು ನೆಲದಿಂದ ಮೇಲೆತ್ತಿ. ಇಡೀ ದೇಹವನ್ನು ಕೈಗಳ ಮೇಲೆ ಸಮತೋಲದಲ್ಲಿರಿಸಿ. ಈ ಸ್ಥಿತಿಯಲ್ಲಿ ಸಮ ಉಸಿರಾಟ ನಡೆಸುತ್ತ ಅರ್ಧ ನಿಮಿಷ ಇರಿ. ಅನಂತರ ನೆಲದ ಮೇಲೆ ವಿಶ್ರಾಂತಿ ಪಡೆಯಿರಿ.
ಪ್ರಯೋಜನ
ಈ ಆಸನದಿಂದ ತೋಳುಗಳು ಬಲಯುತವಾಗು ವುವು. ಕಿಬ್ಬೊಟ್ಟೆಯ ಮಾಂಸ ಖಂಡಗಳು ಚೆನ್ನಾಗಿ ಬಲಿಷ್ಟವಾಗುತ್ತವೆ. ಸಮತೋಲನ ಸ್ಥಿತಿಯನ್ನು ಕಾಪಾಡಲು ಸಹಕಾರಿಯಾಗು ತ್ತದೆ. ಖಿನ್ನತೆಯನ್ನು ನಿವಾರಿಸುತ್ತದೆ. ಸಾವ ಧಾನತೆ ಮತ್ತು ಆತ್ಮಾವಲೋಕವನ್ನು ಉತ್ತೇಜಿಸುತ್ತದೆ. ಧ್ಯಾನಕ್ಕೆ ಮನಸ್ಸನ್ನು ಸಿದ್ಧಪಡಿ ಸುತ್ತದೆ. ವಿವಿಧ ಚಕ್ರಗಳನ್ನು ಉತ್ತೇಜಿಸುತ್ತದೆ (ಸೌರ ಪ್ಲೆಕ್ಸಸ್, ಮೂರನೇ ಕಣ್ಣು, ಕಿರೀಟ, ಗಂಟಲು ಮತ್ತು ಬೇರು) ಬಕಾಸನ ಯೋಗದಿಂದ ಅನೇಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಪ್ರಯೋಜನಗಳಿವೆ. ಬಕಾಸನ ಭಂಗಿಯ ಭೌತಿಕ ಪ್ರಯೋಜನಗಳೆಂದರೆ ತೋಳುಗಳು ಮತ್ತು ಮಣಿಕಟ್ಟುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಗಾಯದ ಅಪಾಯವನ್ನು ಕಡಿಮೆ ಮಾಡುತ್ತದೆ. ಮಾನವ ದೇಹವು ವಯಸ್ಸಾದಂತೆ ಸಮತೋಲನವನ್ನು ಕಳೆದುಕೊಳ್ಳುತ್ತದೆ.
ಬಕಾಸನ ಯೋಗ ಭಂಗಿಯು ಸಮತೋಲನ, ಏಕಾಗ್ರತೆ, ಸಮನ್ವಯವನ್ನು ತರುತ್ತದೆ. ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ. ಇದು ಸಮತೋಲನ ಮತ್ತು ಸಮಚಿತ್ತತೆಯನ್ನು ತರುತ್ತದೆ, ನಮಗೆ ಸಂತೋಷ ಮತ್ತು ಶಾಂತತೆಯನ್ನು ನೀಡುತ್ತದೆ. ಬೆನ್ನುಮೂಳೆಯ ನಮ್ಯತೆಯನ್ನು ಸುಧಾರಿಸುತ್ತದೆ. ಕೆಟ್ಟ ಭಂಗಿಯಲ್ಲಿ ಕುಳಿತುಕೊಳ್ಳುವುದು ಬೆನ್ನುನೋವಿನ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಬಕಾಸನವು ಬೆನ್ನುಮೂಳೆಯ ಸ್ಥಿತಿಸ್ಥಾಪಕತ್ವ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದೆ. ಇದು ಅಸ್ಥಿರಜ್ಜುಗಳು ಮತ್ತು ಕೀಲುಗಳ ಮೇಲೆ ಕಡಿಮೆ ಒತ್ತಡವನ್ನು ಉಂಟುಮಾಡುತ್ತದೆ, ದೇಹದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.
ಆರಂಭಿಕರು ಬಕಾಸನ ಮಾಡುವಾಗಿನ ತಪ್ಪುಗಳೆಂದರೆ, ಮೊಣಕೈಗಳು ಭುಜಗಳು ಮತ್ತು ಮಣಿಕಟ್ಟುಗಳನ್ನು ಅನುಗುಣವಾಗಿಡಬೇಕು ಮತ್ತು ಚೆಲ್ಲಬಾರದು. ಮಣಿಕಟ್ಟುಗಳ ಮೇಲೆ ಹೆಚ್ಚಿನ ಭಾರಬೀಳುವ ಅಪಾಯವಿದೆ, ಗಾಯಕ್ಕೆ ಕಾರಣವಾಗಬಹುದು. ಬೆರಳುಗಳನ್ನು ತುಂಬಾ ಹತ್ತಿರ ಇಟ್ಟುಕೊಳ್ಳದೇ ಹರಡಿ ನೆಲದ ಮೇಲೆ ಇಟ್ಟುಕೊಳ್ಳಿ. ನಿಮ್ಮ ಸೊಂಟವನ್ನು ಮಾತ್ರ ಅವಲಂಬಿಸಬೇಡಿ ಕೋರ್ ಸ್ನಾಯುಗಳನ್ನು ಬಳಸಿ. ನಿಮ್ಮ ಕಾಲುಗಳನ್ನು ತೋಳಿನ ಮೇಲೆ ವಿಶ್ರಾಂತಿ ಮಾಡಬೇಡಿ, ನಿಮ್ಮ ಮೊಣಕಾಲುಗಳನ್ನು ಸಾಧ್ಯವಾದಷ್ಟು ಎತ್ತರಕ್ಕೆ ಇರಿಸಿ, ತೂಕವನ್ನು ಕೈಗಳಿಗೆ ವರ್ಗಾಯಿಸುವುದನ್ನು ವಿಳಂಬ ಮಾಡಬೇಡಿ, ಇಲ್ಲದಿದ್ದರೆ ದೇಹವು ಮೇಲಕ್ಕೆ ಚಲಿಸುವುದಿಲ್ಲ.
ಸೂಚನಾ ಜಾಗರೂಕತೆ: ಸಿಯಾಟಿಕಾ ನೋವು, ಸ್ಲಿಪ್ ಡಿಸ್ಕ್, ಸ್ಪಾಂಡಿಲೈಟೀಸ್, ಮಣಿಕಟ್ಟಿನ ಗಾಯ, ಭುಜದ ಗಾಯ, ಮಂಡಿರಜ್ಜು ಗಾಯ ತೊಡಕುಗಳನ್ನು ಹೊಂದಿರುವ ಜನರು ಬಕಾಸನವನ್ನು ಅಭ್ಯಾಸ ಮಾಡಬಾರದು. ಇದು ಸುಧಾರಿತ ಯೋಗ ಭಂಗಿಯಾಗಿರುವುದರಿಂದ ತಪ್ಪಾದ ಭಂಗಿಯು ದೇಹಕ್ಕೆ ಹೆಚ್ಚು ಹಾನಿಕಾರಕವಾಗಿದೆ. ಯೋಗ ಶಿಕ್ಷಕರ ಮೇಲ್ವಿಚಾರಣೆಯಲ್ಲಿಯೇ ಬಕಾಸನ ಅಭ್ಯಾಸ ಮಾಡಿ.
ಆಧಾರ್ ಕಾರ್ಡ್ ಬಳಕೆದಾರರೇ ಇದೇ ನಿಮಗೆ ಕಡೆಯ ದಿನಾಂಕ! ತಪ್ಪಿದರೆ ರದ್ದಾಗಬಹುದು ಇರಲಿ ಎಚ್ಚರ