ಮತ್ತೆ ಸರ್ಜಿಕಲ್ ಸ್ಟ್ರೈಕ್ ನಡೆಯಲಿ

ಮೂಡಿಗೆರೆ: ಸಿಆರ್​ಪಿಎಫ್ ಯೋಧರ ಮೇಲೆ ಉಗ್ರರ ದಾಳಿಯನ್ನು ಖಂಡಿಸಿ ಬಜರಂಗದಳ, ಬಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಪ್ರಮೋದ್ ದುಂಡುಗ ಮಾತನಾಡಿ, ಪಾಕ್ ಉಗ್ರರ ಸದ್ದಡಗಿಸಬೇಕಾಗಿದೆ. ಶೀಘ್ರವೇ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸಿ ರಣಹೇಡಿ ಉಗ್ರರನ್ನು ಮಟ್ಟಹಾಕಲೇಬೇಕು ಎಂದು ಒತ್ತಾಯಿಸಿದರು.

ಬಜರಂಗದಳದ ತಾಲೂಕು ಸಂಚಾಲಕ ಅವಿನಾಶ್ ಮಾತನಾಡಿ, ಯೋಧರ ಪರವಾಗಿ ದೇಶದ ಜನರೆಲ್ಲರೂ ಧ್ವನಿಯೆತ್ತಿ ಹೋರಾಟ ನಡೆಸಬೇಕಿದೆ. ಇಂತಹ ಪರಿಸ್ಥಿತಿಯಲ್ಲೂ ಕೆಲವರು ದೇಶದ್ರೋಹದ ಹೇಳಿಕೆ ನೀಡುವುದು, ಹರ್ಷಾಚರಣೆ ನಡೆಸುವವರೆಲ್ಲರೂ ಭಯೋತ್ಪಾದಕರೇ ಆಗಿದ್ದು, ಅವರ ವಿರುದ್ಧವೂ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಮುಖಂಡ ವಿನೋದ್ ಕಣಚೂರು ಮಾತನಾಡಿ, ಹುತಾತ್ಮ ಯೋಧರು, ಕುಟುಂಬಸ್ಥರ ಪರಿಸ್ಥಿತಿ ಎಲ್ಲವೂ ನಮಗೆ ತೀವ್ರ ನೋವು ಉಂಟುಮಾಡುತ್ತಿವೆ. ಪ್ರಧಾನಿ ಬೆಂಬಲಕ್ಕೆ ಭಾರತೀಯರೆಲ್ಲರೂ ಇದ್ದು ಭಯೋತ್ಪಾದಕರ ವಿರುದ್ಧ ಉಗ್ರ ಪ್ರತ್ಯುತ್ತರ ನೀಡಬೇಕು ಎಂದು ಒತ್ತಾಯಿಸಿದರು.