ಬಜಾಜ್ ಬೈಕ್ ಬಿಡುಗಡೆ

ಬಾಗಲಕೋಟೆ: ನಗರದ ಹೊರವಲಯದಲ್ಲಿರುವ ಬಿಜ್ಜರಗಿ ಬೈಕ್ಸ್ ಶೋರಂನಲ್ಲಿ ಬಜಾಜ್ ಕಂಪನಿ ಹೊಸದಾಗಿ ಲಾಂಚ್ ಮಾಡಿರುವ ಬಜಾಜ್ ಪ್ಲಾಟಿನಾ 110 ಸಿಬಿಎಸ್ ಬೈಕ್​ನ್ನು ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಶುಕ್ರವಾರ ಸಂಜೆ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸವಾರರ ಸುರಕ್ಷತೆ ದೃಷ್ಟಿಯಿಂದ ಬಜಾಜ್ ಕಂಪನಿ ವಿನೂತನ ತಂತ್ರಜ್ಞಾನ ಅಳವಡಿಸಿ ಬೈಕ್​ಗಳನ್ನು ಸಿದ್ಧಪಡಿಸುತ್ತದೆ. ಅದರಲ್ಲಿ ಬಜಾಜ್ ಪ್ಲಾಟಿನಾ 110 ಕೂಡ ಒಂದಾಗಿದೆ. ಸಾರ್ವಜನಿಕರು ಇದರ ಸುದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಮ್ಯಾನೇಜರ್ ಬಸವನಗೌಡ ಪಾಟೀಲ ಮಾತನಾಡಿ, ಬಜಾಜ್ ಪ್ಲಾಟಿನಾ 110 ವಾಹನ ಸವಾರರ ದೈಹಿಕ ಅಂಶಗಳನ್ನು ಗಮನದಲ್ಲಿಕೊಂಡು ಸಿದ್ಧಪಡಿಸಲಾಗಿದೆ. ಸವಾರರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕಠಿಣ ರಸ್ತೆಗಳಲ್ಲೂ ಆರಾಮವಾಗಿ ಚಲಿಸುತ್ತದೆ. ಹೆದ್ದಾರಿಯಲ್ಲಿಯೂ ಅಲುಗಾಡುವುದಿಲ್ಲ ಎಂದು ತಿಳಿಸಿದರು. ಗಣ್ಯರಾದ ಸಿದ್ದಣ್ಣ ಹಂಪನಗೌಡರ, ಅಮೃತ ದರಬಾರ, ಮಲ್ಲಿಕಾರ್ಜುನ ಶಿರೂರ, ವಿಜಯಕುಮಾರ ಕಮತಗಿ ಇತರರು ಇದ್ದರು.