More

    ಟಾಕಿ ಮುಗಿಸಿದ ‘ಬೈರಾಗಿ’ … ಇನ್ನು ಹಾಡುಗಳಷ್ಟೇ ಬಾಕಿ …

    ಬೆಂಗಳೂರು: ಶಿವರಾಜಕುಮಾರ್ ಅಭಿನಯದ 123ನೇ ಸಿನಿಮಾ ‘ಬೈರಾಗಿ’ಯ ಟಾಕಿ ಭಾಗದ ಚಿತ್ರೀಕರಣ ಮುಗಿದಿದೆ. ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಹಾಡಿನ ಚಿತ್ರೀಕರಣಕ್ಕೆ ಸದ್ಯದಲ್ಲೇ ಮೈಸೂರಿಗೆ ‘ಬೈರಾಗಿ’ ತಂಡ ತೆರಳಲಿದೆ.

    ಇದನ್ನೂ ಓದಿ: ‘ನೈಂಟಿ’ ಹೊಡೆದವರು ಮಾತು ಮುಗಿಸಿದರು …

    ತಮಿಳಿನ ಖ್ಯಾತ ಛಾಯಾಗ್ರಾಹಕ ವಿಜಯ್ ಮಿಲ್ಟನ್ ‘ಬೈರಾಗಿ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ತಮಿಳಿನಲ್ಲಿ ಅವರೇ ನಿರ್ದೇಶನ ಮಾಡಿದ್ದ ‘ಕಡುಗು’ ಎಂಬ ಚಿತ್ರದ ರೀಮೇಕ್​ ಇದು. ಮೂಲ ಚಿತ್ರದಲ್ಲಿ ಭರತ್​, ರಾಜಕುಮಾರನ್​ ಮುಂತಾದವರು ನಟಿಸಿದ್ದರು. ಈ ಚಿತ್ರದ ವಿಶೇಷತೆ ಎಂದರೆ, ‘ಟಗರು’ ಯಶಸ್ಸಿನ ಬಳಿಕ ಶಿವರಾಜಕುಮಾರ್ ಹಾಗೂ ‘ಡಾಲಿ’ ಧನಂಜಯ್ ಒಟ್ಟಿಗೆ ನಟಿಸಿರುವುದು. ಜತೆಗೆ ಅಂಜಲಿ, ‘ದಿಯಾ’ ಖ್ಯಾತಿಯ ಪೃಥ್ವಿ ಅಂಬರ್, ಹಿರಿಯ ನಟ ಶಶಿಕುಮಾರ್ ಸಹ ಪ್ರಮುಖ ಪಾತ್ರದಲ್ಲಿದ್ದಾರೆ.

    ಇದನ್ನೂ ಓದಿ: TT#50 ಚಿತ್ರದಲ್ಲಿ ಟೆಂಪೋ ಟ್ರಾವೆಲರ್​ ಪಾತ್ರವೇ ಪ್ರಧಾನ; ಇದೇ ತಿಂಗಳ 13ಕ್ಕೆ ತೆರೆಗೆ

    ಈ ಚಿತ್ರದಲ್ಲಿ ಶಿವಣ್ಣ ನಾನಾ ಅವತಾರ ಎತ್ತಿದ್ದಾರೆ. ಅವರ ಹುಟ್ಟು ಹಬ್ಬದಂದು ಬಿಡುಗಡೆಯಾದ ಟೈಟಲ್ ಟೀಸರ್ ಎಲ್ಲರಿಗೂ ಮೆಚ್ಚುಗೆಯಾಗಿದ್ದು. ಅನೂಪ್ ಸೀಳಿನ್ ಅವರ ಹಿನ್ನೆಲೆ ಸಂಗೀತದ ಬಗ್ಗೆಯೂ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ಕೃಷ್ಣ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೃಷ್ಣ ಸಾರ್ಥಕ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

    ಆಸ್ಪತ್ರೆಯಲ್ಲಿ ಪ್ರಿಯಾಂಕಾ ಉಪೇಂದ್ರ ‘ಉಗ್ರಾವತಾರ’ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts